ಯುಎಸ್ ಓಪನ್: ಅನರ್ಹಗೊಂಡು ಟೂರ್ನಿಯಿಂದ ಹೊರನಡೆದ ಚೊಕೊವಿಚ್ 

ವಿಶ್ವದ ಅಗ್ರಮಾನ್ಯ ಸಿಂಗಲ್ಸ್ ಆಟಗಾರ ಸರ್ಬಿಯಾದ ನೊವಾಕ್ ಜೊಕೊವಿಚ್ ಯುಎಸ್ ಓಪನ್ ಗ್ರ್ಯಾನ್ ಸ್ಲಾಮ್ ಟೆನಿಸ್ ಟೂರ್ನಿಯಿಂದ ಅನಿರೀಕ್ಷಿತವಾಗಿ ಹೊರಬಿದ್ದಿದ್ದಾರೆ.
ನೊವಾಕ್ ಜೊಕೊವಿಚ್
ನೊವಾಕ್ ಜೊಕೊವಿಚ್

ನ್ಯೂಯಾರ್ಕ್: ವಿಶ್ವದ ಅಗ್ರಮಾನ್ಯ ಸಿಂಗಲ್ಸ್ ಆಟಗಾರ ಸರ್ಬಿಯಾದ ನೊವಾಕ್ ಜೊಕೊವಿಚ್ ಯುಎಸ್ ಓಪನ್ ಗ್ರ್ಯಾನ್ ಸ್ಲಾಮ್ ಟೆನಿಸ್ ಟೂರ್ನಿಯಿಂದ ಅನಿರೀಕ್ಷಿತವಾಗಿ ಹೊರಬಿದ್ದಿದ್ದಾರೆ.

ಭಾನುವಾರ ತಡರಾತ್ರಿ ಆರ್ಥರ್ ಆ್ಯಶ್ ಕ್ರೀಡಾಂಗಣದಲ್ಲಿ ನಡೆದ ಪುರುಷರ ಸಿಂಗಲ್ಸ್ ವಿಭಾಗದ 4ನೇ ಸುತ್ತಿನಲ್ಲಿ ಹಣಾಹಣಿಯಲ್ಲಿ ಮಹಿಳಾ ಲೈನ್ ಅಂಪೈರ್ ಗೆ ಆಕಸ್ಮಿಕವಾಗಿ ಚೆಂಡಿನಿಂದ ಹೊಡೆದ ಪರಿಣಾಮ 17 ಗ್ರ್ಯಾನ್ ಸ್ಲಾಮ್ ಒಡೆಯ ಜೊಕೊವಿಚ್ ಅವರು ಅನರ್ಹಗೊಂಡಿದ್ದಾರೆ. ಹೀಗಾಗಿ ಪ್ರಶಸ್ತಿ ಗೆಲ್ಲುವ ಸರ್ಬಿಯಾ ಆಟಗಾರ ಕನಸು ಭಗ್ನಗೊಂಡಿದೆ.

ಮೊದಲ ಸೆಟ್‌ನಲ್ಲಿ ಸ್ಪೇನ್ ನ ಪಾಬ್ಲೋ ಕರೆನೋ ಬುಸ್ತಾ  ಅವರನ್ನು 6-5 ಅಂತರದಲ್ಲಿ ಹಿಂದಿದ್ದ ಜೊಕೊವಿಚ್ ಅವರು ಕೋರ್ಟ್ ಲೈನ್ ನಲ್ಲಿ ಕರ್ತವ್ಯದಲ್ಲಿದ್ದ ಮಹಿಳಾ ಅಧಿಕಾರಿಯ ಕಡೆ  ಚಂಡನ್ನು ಬೀಸಿ ಹೊಡೆಇದ್ದಾರೆ. ಆ ಚೆಂಡು ಅಧಿಕಾರಿಯ ಕುತ್ತಿಗೆಗೆ ಬಡಿದಿದೆ. ಅಧಿಕಾರಿ ಉಸಿರೆಳೆದುಕೊಂಡಿದ್ದನ್ನು ಕೇಳಿದ ಜೊಕೊವಿಚ್  ತಕ್ಷಣ ಅಲ್ಲಿಗೆ ಧಾವಿಸಿ ಅವರ ಆರೋಗ್ಯ ವಿಚಾರಿಸಿದ್ದಾರೆ. ಅದಾಗಿ ಕೆಲ ನಿಮಿಷಗಳ ನಂತರ ಮಹಿಳಾ ಅಧಿಕಾರಿ ಕೋರ್ಟ್ ಬಿಟ್ಟು ಹೊರನಡೆದರು.. 

ಇದಾದ ಹತ್ತು ನಿಮಿಷಗಳ ತರುವಾಯ ಜೊಕೊವಿಚ್ ಎದುರಾಳಿ ಕರೆನೋ ಬುಸ್ತಾಅವರನ್ನು ವಿಜೇತರೆಂದು ಘೋಷಿಸಲಾಯಿತು. ಜೊಕೊವಿಚ್ ಅನರ್ಹಗೊಂಡು ಟೂರ್ನಿಯಿಂದ ಹೊರಬಿದ್ದರು. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com