ಒಲಿಂಪಿಕ್ಸ್‌ನಲ್ಲಿ ಪದಕ ಗೆಲ್ಲುವುದು ತಂಡದ ಏಕೈಕ ಉದ್ದೇಶ: ನೇಹಾ ಗೋಯಲ್

ಮುಂದಿನ ವರ್ಷ ಟೋಕಿಯೊ ಒಲಿಂಪಿಕ್ಸ್ ನಲ್ಲಿ ಪದಕ ಗೆಲ್ಲುವುದು ತಂಡದ ಏಕೈಕ ಉದ್ದೇಶವಾಗಿದೆ ಎಂದು ಭಾರತ ಮಹಿಳಾ ಹಾಕಿ ತಂಡದ ಮಿಡ್ ಫೀಲ್ಡರ್ ನೇಹಾ ಗೋಯಲ್ ಹೇಳಿದ್ದಾರೆ. 
ನೇಹಾ
ನೇಹಾ

ನವದೆಹಲಿ: ಮುಂದಿನ ವರ್ಷ ಟೋಕಿಯೊ ಒಲಿಂಪಿಕ್ಸ್ ನಲ್ಲಿ ಪದಕ ಗೆಲ್ಲುವುದು ತಂಡದ ಏಕೈಕ ಉದ್ದೇಶವಾಗಿದೆ ಎಂದು ಭಾರತ ಮಹಿಳಾ ಹಾಕಿ ತಂಡದ ಮಿಡ್ ಫೀಲ್ಡರ್ ನೇಹಾ ಗೋಯಲ್ ಹೇಳಿದ್ದಾರೆ. 

ನೇಹಾ ಇದುವರೆಗೆ ಭಾರತದ ಪರ 75 ಪಂದ್ಯಗಳನ್ನು ಆಡಿದ್ದಾರೆ. ಮಹಿಳಾ ತಂಡವು ಒಲಿಂಪಿಕ್ಸ್ ನಲ್ಲಿ ಪದಕಗಳನ್ನು ಗೆಲ್ಲುವ ಗುರಿ ಹೊಂದಿದೆ ಮತ್ತು ಇದಕ್ಕಾಗಿ ತಂಡವು ತಯಾರಿ ಆರಂಭಿಸಿದೆ ಎಂದು ಅವರು ಹೇಳಿದ್ದಾರೆ. ಟೋಕಿಯೊ ಒಲಿಂಪಿಕ್ಸ್ ಈ ವರ್ಷದ ಜುಲೈನಲ್ಲಿ ನಡೆಯಬೇಕಿತ್ತು ಆದರೆ ಕೊರೊನಾದ ಕಾರಣ ಮುಂದಿನ ವರ್ಷದವರೆಗೆ ಮುಂದೂಡಲಾಯಿತು.

ನಮ್ಮ ಗಮನವು ಇದೀಗ ಒಲಿಂಪಿಕ್ಸ್ ನತ್ತ ಇದೆ. ನಮ್ಮನ್ನು ನಾವು ಸದೃಢವಾಗಿಡಲು ಕಳೆದ ಕೆಲವು ತಿಂಗಳುಗಳಿಂದ ಶ್ರಮಿಸುತ್ತಿದ್ದೇವೆ ಮತ್ತು ಮುಂಬರುವ ತಿಂಗಳುಗಳಲ್ಲಿ ನಮ್ಮ ಆಟವನ್ನು ಸುಧಾರಿಸಲು ಸಾಧ್ಯವಿರುವ ಎಲ್ಲ ಅಂಶಗಳನ್ನು ಅಳವಡಿಸಿಕೊಳ್ಳುತ್ತೇವೆ. ಒಲಿಂಪಿಕ್ಸ್ ನಲ್ಲಿ ಪದಕಗಳನ್ನು ಗೆಲ್ಲುವುದು ಮತ್ತು ಇತಿಹಾಸ ಸೃಷ್ಟಿಸುವುದು ನಮ್ಮ ಏಕೈಕ ಗುರಿ ಎಂದಿದ್ದಾರೆ. 

ತಮ್ಮ ವೃತ್ತಿಜೀವನದ ಮೇಲೆ ಭಾರತದ ಮಾಜಿ ನಾಯಕಿ ಪ್ರೀತಮ್ ರಾಣಿ ಸಿವಾಚ್ ಅವರು ಹೆಚ್ಚಿನ ಪ್ರಭಾವ ಬೀರಿದ್ದಾರೆ ಎಂದು ಹೇಳಿದರು. ನಾನು ಐದನೇ ತರಗತಿಯಲ್ಲಿದ್ದಾಗ, ಸ್ಥಳೀಯ ಪತ್ರಿಕೆಯಲ್ಲಿ ಪ್ರೀತಮ್ ದೀದಿ ಅವರ ಫೋಟೋವನ್ನು ನೋಡುತ್ತಿದ್ದೆ ಮತ್ತು ಅವರು ತವರು ಮೈದಾನದಲ್ಲಿ ಆಡುತ್ತಿರುವುದನ್ನು ನೋಡಿದೆ ಎಂದು ನೇಹಾ ಹೇಳಿದರು. 

ನನ್ನ ಪೋಷಕರು ಹಾಕಿ ಸಲಕರಣಗಳನ್ನು ಖರೀದಿಸಲು ಸಾಧ್ಯವಾಗಲಿಲ್ಲ, ನಂತರ ಪ್ರೀತಮ್ ದೀದಿ ಅದನ್ನು ನನಗೆ ಒದಗಿಸಿದರು ಮತ್ತು ಆಟದಲ್ಲಿ ಕಷ್ಟಪಟ್ಟು ಕೆಲಸ ಮಾಡಲು ನನ್ನನ್ನು ಪ್ರೇರೇಪಿಸಿದರು. ಅವಳ ಬೆಂಬಲವಿಲ್ಲದೆ ನಾನು ಇಂದು ಈ ಸ್ಥಾನವನ್ನು ತಲುಪಲು ಸಾಧ್ಯವಿಲ್ಲ. ನಾನು ಹಾಕಿ ಆಡಲು ಪ್ರಾರಂಭಿಸಿದಾಗ ನಮಗೆ ತುಂಬಾ ಕಷ್ಟವಿತ್ತು. ನಮ್ಮ ಭವಿಷ್ಯಕ್ಕಾಗಿ ತಾಯಿ ಹಗಲು ರಾತ್ರಿ ಶ್ರಮಿಸಿದರು. ಅದರ ನಂತರ ನಾನು ಉನ್ನತ ಮಟ್ಟದಲ್ಲಿ ಆಡಲು ಪ್ರಾರಂಭಿಸಿದಾಗ, ನಾನು ಅನೇಕ ಬಾರಿ ತೊಂದರೆ ಅನುಭವಿಸಬೇಕಾಯಿತು ಮತ್ತು ನಾನು ಭಾರತ ತಂಡದಿಂದ ಹೊರಗುಳಿದಿದ್ದೆ ಎಂದಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com