ವಿಶ್ವನಾಥನ್ ಆನಂದ್ 'ಚೆಸ್ ದಂತಕಥೆ'ಯಾಗಿ ಬೆಳೆಯಲು ಗಾನ ಗಾರುಡಿಗ ಎಸ್‌ಪಿಬಿ ಪರೋಕ್ಷ ಪಾತ್ರ!

ಇಂದು ನಿಧನರಾದ ಖ್ಯಾತ ಹಿನ್ನೆಲೆ ಗಾಯಕ ಎಸ್.ಪಿ.ಬಾಲಸುಬ್ರಹ್ಮಣ್ಯಂ ತಮ್ಮ ಶಾಲಾ ದಿನಗಳಲ್ಲಿ ಮಾಜಿ ವಿಶ್ವ ಚೆಸ್ ಚಾಂಪಿಯನ್ ಗ್ರ್ಯಾಂಡ್ ಮಾಸ್ಟರ್ ವಿಶ್ವನಾಥನ್ ಆನಂದ್ ಅವರ ವೃತ್ತಿಜೀವನದ ಬೆಳವಣಿಗೆಯಲ್ಲಿ ಮಹತ್ವದ ಪಾತ್ರ ವಹಿಸಿದ್ದಾರೆಂದು ಹೆಚ್ಚಿನವರಿಗೆ ತಿಳಿದಿಲ್ಲ.
ವಿಶ್ವನಾಥನ್ ಆನಂದ್ ಎಸ್.ಪಿ.ಬಾಲಸುಬ್ರಹ್ಮಣ್ಯಂ
ವಿಶ್ವನಾಥನ್ ಆನಂದ್ ಎಸ್.ಪಿ.ಬಾಲಸುಬ್ರಹ್ಮಣ್ಯಂ

ಚೆನ್ನೈ: ಇಂದು ನಿಧನರಾದ ಖ್ಯಾತ ಹಿನ್ನೆಲೆ ಗಾಯಕ ಎಸ್.ಪಿ.ಬಾಲಸುಬ್ರಹ್ಮಣ್ಯಂ ತಮ್ಮ ಶಾಲಾ ದಿನಗಳಲ್ಲಿ ಮಾಜಿ ವಿಶ್ವ ಚೆಸ್ ಚಾಂಪಿಯನ್ ಗ್ರ್ಯಾಂಡ್ ಮಾಸ್ಟರ್ ವಿಶ್ವನಾಥನ್ ಆನಂದ್ ಅವರ ವೃತ್ತಿಜೀವನದ ಬೆಳವಣಿಗೆಯಲ್ಲಿ ಮಹತ್ವದ  ಪಾತ್ರ ವಹಿಸಿದ್ದಾರೆಂದು ಹೆಚ್ಚಿನವರಿಗೆ ತಿಳಿದಿಲ್ಲ.

ಚಿತ್ರ ಜಗತ್ತಿನಲ್ಲಿ  ಎಸ್‌ಪಿಬಿ ಅಥವಾ ಬಾಲು ಎಂದೇ ಜನಪ್ರಿಯವಾಗಿರುವ ಬಾಲಸುಬ್ರಹ್ಮಣ್ಯಂ ಅವರು ಇಂದು (ಶುಕ್ರವಾರ ಸೆಪ್ಟೆಂಬರ್ 25)ಮಧ್ಯಾಹ್ನ ಚೆನ್ನೈ ಆಸ್ಪತ್ರೆಯಲ್ಲಿ ನಿಧನರಾದರು, ಅಲ್ಲಿ ಅವರು ಕಳೆದ ಒಂದೂವರೆ ತಿಂಗಳಿನಿಂದ ಕೋವಿಡ್ -19 ಗೆ ಚಿಕಿತ್ಸೆ ಪಡೆಯುತ್ತಿದ್ದರು.

"ಅಂತಹ ಮಹಾನ್ ಮತ್ತು ಸರಳ ವ್ಯಕ್ತಿಯ ನಿಧನದ ಬಗ್ಗೆ ಕೇಳಿದಾಗ ನಿಜವಾಗಿಯೂ ದುಃಖವಾಗುತ್ತದೆ. ಅವರು ನನ್ನ ಮೊದಲ ಪ್ರಾಯೋಜಕರು! ಅವರು 1983 ರಲ್ಲಿ ನಡೆದ ರಾಷ್ಟ್ರೀಯ ತಂಡದ ಚಾಂಪಿಯನ್‌ಶಿಪ್‌ನಲ್ಲಿ ನಮ್ಮ ತಂಡ ಚೆನ್ನೈ ಕೋಲ್ಟ್ಸ್ (ಆಗ ಮದ್ರಾಸ್ ಕೋಲ್ಟ್ಸ್) ಗೆ ಪ್ರಾಯೋಜಕತ್ವ ವಹ್ಸಿದ್ದರು.  . ನಾನು ಭೇಟಿಯಾದ ಉತ್ತಮ ವ್ಯಕ್ತಿಗಳಲ್ಲಿ ಬಾಲಸುಬ್ರಹ್ಮಣ್ಯಂ ಒಬ್ಬರು. ಅವರ ಸಂಗೀತವು ನಮಗೆ ಅಂತಹ ಸಂತೋಷವನ್ನು ಕೊಡುತ್ತಿತ್ತು.  #RIPSPB,"ಆನಂದ್ ಟ್ವೀಟ್ ನಲ್ಲಿ ಖ್ಯಾತ ಗಾಯಕನ ನಿಧನದ ಬಗ್ಗೆ ದುಃಖ ವ್ಯಕ್ತಪಡಿಸಿದ್ದಾರೆ.

"ಇದು ಆಗಿನ ಬಾಂಬೆಯಲ್ಲಿ (ಈಗಿನ ಮುಂಬೈ) ನಡೆದ ಟೀಮ್ ಚೆಸ್ ಚಾಂಪಿಯನ್‌ಶಿಪ್ ಆಗಿತ್ತು. ಆನಂದ್ ಅವರು ಬೋರ್ಡ್ ಪ್ರೈಸ್ ಗೆದ್ದಿದ್ದರು. ಆ ಮೂಲಕ  ನ್ಯಾಷನಲ್ ಬಿ ಚಾಂಪಿಯನ್‌ಶಿಪ್‌ಗೆ ಅರ್ಹತೆ ಪಡೆದಿದ್ದರು. ಲ್ಲಿಂದ ಅವರು ನ್ಯಾಷನಲ್ ಎ ಗೆ ಆಯ್ಕೆಯಾಗಿ ಮುಂದೆ ಅವರ ಜೀವನ ಎತ್ತರೆತ್ತರಕ್ಕೆ ಏರುತ್ತಾ ಸಾಗಿತು."ಇಂಟರ್ನ್ಯಾಷನಲ್ ಮಾಸ್ಟರ್ ಮತ್ತು ಮದ್ರಾಸ್ ಕೋಲ್ಟ್ಸ್ ತಂಡದ ಸದಸ್ಯರಲ್ಲಿ ಒಬ್ಬರಾದ ಟಿ.ಎಸ್.ರಾವಿ ಐಎಎನ್‌ಎಸ್‌ಗೆ ತಿಳಿಸಿದರು.

ತೆಲುಗು ಕವಿ ಆರುದ್ರ ಆಗಿನ ಮದ್ರಾಸ್ ಜಿಲ್ಲಾ ಚೆಸ್ ಅಸೋಸಿಯೇಶನ್ (ಎಂಡಿಸಿಎ) ಅಧ್ಯಕ್ಷರಾಗಿದ್ದರು  ಬಾಲಕರ ಚೆಸ್ ತಂಡವನ್ನು ರಾಷ್ಟ್ರೀಯ ತಂಡ ಚಾಂಪಿಯನ್‌ಶಿಪ್‌ಗೆ ಕರೆದೊಯ್ಯಲು ಹಣದ ಕೊರತೆಯ ಬಗ್ಗೆ ಬಾಲಸುಬ್ರಹ್ಮಣ್ಯಂ ಅವರೊಂದಿಗೆ ಅರುದ್ರ  ಮಾತನಾಡಿದ್ದರು. ಆಗ ಗಾಯಕ ತಕ್ಷಣ ತಾವು ಮದ್ರಾಸ್ ಕೋಲ್ಟ್ಸ್ ಮುಂಬೈಗೆ ತೆರಳುವುದಕ್ಕೆ ನೆರವಾಗುವಂತೆ ಚೆಕ್ ನೀಡಿದ್ದರು. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com