ಅಮೆರಿಕಾ ಪುರುಷರ ತಂಡದ ಮುಖ್ಯ ಕೋಚ್ ಆಗಿ ಭಾರತದ ಹಿರಿಯ ಹಾಕಿ ತರಬೇತುದಾರ ಹರೇಂದ್ರ ಸಿಂಗ್ ಆಯ್ಕೆ

ಭಾರತದ ಮಾಜಿ ಹಾಕಿ ತರಬೇತುದಾರ ಹರೇಂದ್ರ ಸಿಂಗ್ ಅವರನ್ನು ಯುಎಸ್ ಪುರುಷರ ಹಾಕಿ ತಂಡದ ನೂತನ ಮುಖ್ಯ ಕೋಚ್ ಆಗಿ ನೇಮಕ ಮಾಡಲಾಗಿದೆ.

Published: 08th April 2021 07:25 PM  |   Last Updated: 08th April 2021 07:59 PM   |  A+A-


ಹರೇಂದ್ರ ಸಿಂಗ್

Posted By : Raghavendra Adiga
Source : PTI

ಕೊಲರಾಡೋ: ಭಾರತದ ಮಾಜಿ ಹಾಕಿ ತರಬೇತುದಾರ ಹರೇಂದ್ರ ಸಿಂಗ್ ಅವರನ್ನು ಯುಎಸ್ ಪುರುಷರ ಹಾಕಿ ತಂಡದ ನೂತನ ಮುಖ್ಯ ಕೋಚ್ ಆಗಿ ನೇಮಕ ಮಾಡಲಾಗಿದೆ.

2012 ರಲ್ಲಿ ದ್ರೋಣಾಚಾರ್ಯ ಪ್ರಶಸ್ತಿ ಪಡೆದಿದ್ದ ಸಿಂಗ್, 2017 ರಿಂದ 2018 ರವರೆಗೆ ಭಾರತದ ಹಿರಿಯ ಪುರುಷರ ಹಾಕಿ ತಂಡದ ಮುಖ್ಯ ಕೋಚ್ ಆಗಿ ಸೇವೆ ಸಲ್ಲಿಸಿದರು. ಇದಕ್ಕೂ ಮುನ್ನ ಅವರು ಸ್ವಲ್ಪ ಸಮಯದವರೆಗೆ ಭಾರತೀಯ ಮಹಿಳಾ ತಂಡದ ಉಸ್ತುವಾರಿ ವಹಿಸಿದ್ದರು.

"ಯು.ಎಸ್. ಪುರುಷರ ರಾಷ್ಟ್ರೀಯ ತಂಡಕ್ಕೆ ತರಬೇತುದಾರರಾಗುವ ಈ ಉತ್ತಮ ಅವಕಾಶಕ್ಕಾಗಿ ಧನ್ಯವಾದಗಳು" ಎಂದು ಸಿಂಗ್ ಟೀಮ್ ಯುಎಸ್ಎ ಬಿಡುಗಡೆ ಮಾಡಿದ ಹೇಳಿಕೆಯಲ್ಲಿ ತಿಳಿಸಿದ್ದಾರೆ.

"ಆಟಗಾರರಿಗೆ ಅವರ ಸಾಮರ್ಥ್ಯ ಮತ್ತು ದೌರ್ಬಲ್ಯಗಳನ್ನು ಕಂಡುಕೊಳ್ಳಲು ಸಾಧನಗಳನ್ನು ಒದಗಿಸುವ ನನ್ನ ಅನುಭವದೊಂದಿಗೆ ಈ ಪ್ರಯಾಣವನ್ನು ಪ್ರಾರಂಭಿಸಲು ನಾನು ಉತ್ಸುಕನಾಗಿದ್ದೇನೆ. " ಎಂದು ಅವರು ಹೇಳಿದರು. 

ಭಾರತೀಯ ಪುರುಷರ ತಂಡದೊಂದಿಗೆ ಸಿಂಗ್ ಅವರ ಮೊದಲ ಹುದ್ದೆ 2018 ರ ಏಷ್ಯನ್ ಚಾಂಪಿಯನ್ಸ್ ಟ್ರೋಫಿಯಲ್ಲಿದ್ದು ಮಸ್ಕತ್ ನ ಒಮನ್ ನಲ್ಲಿ ಅವರು ತಂಡವು ಚಿನ್ನದ ಪದಕ ಗೆಲ್ಲುವಂತೆ ಮಾಡಿದ್ದರು. ಭುವನೇಶ್ವರದಲ್ಲಿ ನಡೆದ 2018 ರ ಪುರುಷರ ವಿಶ್ವಕಪ್‌ನಲ್ಲಿ ಭಾರತವನ್ನು ಐದನೇ ಸ್ಥಾನಕ್ಕೆ ಕೊಂಡೊಯ್ದರು. 2018 ರ ಏಷ್ಯನ್ ಕ್ರೀಡಾಕೂಟದಲ್ಲಿ ಪುರುಷರ ತಂಡವು ಕಂಚಿನ ಪದಕ, 2018 ರ ಚಾಂಪಿಯನ್ಸ್ ಟ್ರೋಫಿಯಲ್ಲಿ ಬೆಳ್ಳಿ ಪದಕ ಗೆದ್ದಿದೆ.

ಇದಲ್ಲದೆ 2017 ರ ಏಷ್ಯಾಕಪ್‌ನಲ್ಲಿ ಚಿನ್ನದ ಪದಕ ಗೆಲ್ಲಲು ಸಿಂಗ್ ಭಾರತೀಯ ಮಹಿಳಾ ತಂಡಕ್ಕೆ ಮಾರ್ಗದರ್ಶನ ನೀಡಿದ್ದರು. ಅವರು ದೇಶದ ಕಿರಿಯ ರಾಷ್ಟ್ರೀಯ ತಂಡಗಳಿಗೆ ತರಬೇತಿ ನೀಡುವ ವ್ಯಾಪಕ ಅನುಭವ ಹೊಂದಿದ್ದಾರೆ ಮತ್ತು 2016 ರ ಪುರುಷರ ಜೂನಿಯರ್ ವಿಶ್ವಕಪ್‌ನಲ್ಲಿ ಭಾರತವನ್ನು ಚಿನ್ನದ ಪದಕ ಗಳಿಸಲು ಮಾರ್ಗದರ್ಶಕರಾಗಿದ್ದರು. ಒಟ್ಟಾರೆಯಾಗಿ, ಸಿಂಗ್ ಅವರು ಅಂತರರಾಷ್ಟ್ರೀಯ ಮಟ್ಟದಲ್ಲಿ ವಿವಿಧ ಪಂದ್ಯಾವಳಿಗಳಲ್ಲಿ ಎಂಟು ಚಿನ್ನದ ಪದಕಗಳು, ಐದು ಬೆಳ್ಳಿ ಮತ್ತು ಒಂಬತ್ತು ಕಂಚಿನ ಪದಕಗಳನ್ನು ಪಡೆದಿದ್ದಾರೆ ಮತ್ತು ಕಿರಿಯ ಮತ್ತು ಹಿರಿಯ ರಾಷ್ಟ್ರೀಯ ತಂಡಗಳ ನಡುವೆ 350 ಕ್ಕೂ ಹೆಚ್ಚು ಅಂತರರಾಷ್ಟ್ರೀಯ ಪಂದ್ಯಗಳಿಗೆ ತರಬೇತುದಾರರಾಗಿದ್ದಾರೆ.

Stay up to date on all the latest ಕ್ರೀಡೆ news
Poll
Kumbh-Covid-19

ಚುನಾವಣಾ ಸಮಾವೇಶ, ಕುಂಭಮೇಳ, ಧಾರ್ಮಿಕ ಸಭೆಗಳು ದೇಶದಲ್ಲಿ ಕೋವಿಡ್-19 ಪರಿಸ್ಥಿತಿಯನ್ನು ಹದಗೆಡಿಸುತ್ತಿವೆಯೇ?


Result
ಹೌದು, ಅದು ನಿಜ.
ಇಲ್ಲ, ಖಂಡಿತ ಅಲ್ಲ.
flipboard facebook twitter whatsapp