ಎಫ್‌ಐಹೆಚ್ ಪ್ರೊ ಲೀಗ್: ಅರ್ಜೆಂಟೀನಾ ವಿರುದ್ಧ ಭಾರತಕ್ಕೆ 3-0 ಗೋಲುಗಳ ಭರ್ಜರಿ ಜಯ

ಎಫ್‌ಐಹೆಚ್ ಪ್ರೊ ಲೀಗ್‌ನಲ್ಲಿ ಹರ್ಮನ್‌ಪ್ರೀತ್ ಸಿಂಗ್ (11ನೇ ನಿಮಿಷ), ಲಲಿತ್ ಉಪಾಧ್ಯಾಯ (25ನೇ ನಿಮಿಷ) ಮತ್ತು ಮಂದೀಪ್ ಸಿಂಗ್ ಅವರ (58ನೇ ನಿಮಿಷ) ಗೋಲುಗಳಿಂದ ಒಲಂಪಿಕ್ ಚಾಂಪಿಯನ್ ಅರ್ಜೆಂಟೀನಾ ವಿರುದ್ಧ ಭಾರತವು ತಮ್ಮ ಎರಡನೇ ಗೆಲುವನ್ನು ಸಾಧಿಸಿದೆ. ಭಾರತ ಅರ್ಜೆಂಟೀನಾ ವಿರುದ್ಧ 3-0 ಗೋಲುಗಳಿಂದ ಜಯಗಳಿಸಿದೆ.
ಎಫ್‌ಐಹೆಚ್ ಪ್ರೊ ಲೀಗ್: ಅರ್ಜೆಂಟೀನಾ ವಿರುದ್ಧ ಭಾರತಕ್ಕೆ 3-0 ಗೋಲುಗಳ ಭರ್ಜರಿ ಜಯ

ನವದೆಹಲಿ: ಎಫ್‌ಐಹೆಚ್ ಪ್ರೊ ಲೀಗ್‌ನಲ್ಲಿ ಹರ್ಮನ್‌ಪ್ರೀತ್ ಸಿಂಗ್ (11ನೇ ನಿಮಿಷ), ಲಲಿತ್ ಉಪಾಧ್ಯಾಯ (25ನೇ ನಿಮಿಷ) ಮತ್ತು ಮಂದೀಪ್ ಸಿಂಗ್ ಅವರ (58ನೇ ನಿಮಿಷ) ಗೋಲುಗಳಿಂದ ಒಲಂಪಿಕ್ ಚಾಂಪಿಯನ್ ಅರ್ಜೆಂಟೀನಾ ವಿರುದ್ಧ ಭಾರತವು ತಮ್ಮ ಎರಡನೇ ಗೆಲುವನ್ನು ಸಾಧಿಸಿದೆ. ಭಾರತ ಅರ್ಜೆಂಟೀನಾ ವಿರುದ್ಧ 3-0 ಗೋಲುಗಳಿಂದ ಜಯಗಳಿಸಿದೆ.

ತಮ್ಮ 50 ನೇ ಅಂತರರಾಷ್ಟ್ರೀಯ ಪಂದ್ಯವನ್ನು ಆಡುತ್ತಿದ್ದ ಕ್ರಿಶನ್ ಬಹದ್ದೂರ್ ಪಾಠಕ್,ಮೊದಲ ಕ್ವಾರ್ಟರ್ ನಲ್ಲಿ ಮೂರು ಅದ್ಭುತ ಸೇವ್ ಗಳನ್ನು ಮಾಡಿ ಭಾರತಕ್ಕೆ ಹೆಚ್ಚಿನ ಮುನ್ನಡೆ ಗಳಿಸಲು ನೆರವಾದರು,

ಮುಖ್ಯ ತರಬೇತುದಾರ ಗ್ರಹಾಂ ರೀಡ್ ಈ ಪಂದ್ಯದಲ್ಲಿ ಭಾರತದ ಅದ್ಭುತ ಗೆಲುವಿನ ಬಗ್ಗೆ ಹರ್ಷ ವ್ಯಕ್ತಪಡಿಸಿದರು. ಈ ಗೆಲುವು ಭಾರತವನ್ನು ಎಫ್‌ಐಹೆಚ್ ಪ್ರೊ ಲೀಗ್‌ನಲ್ಲಿ ನಾಲ್ಕನೇ ಸ್ಥಾನಕ್ಕೆ (ಎಂಟು ಪಂದ್ಯಗಳ ನಂತರ)ಏರಿಸಿದೆ.

ಮೇ 8 ಮತ್ತು 9 ರಂದು ಲಂಡನ್‌ನಲ್ಲಿ ಗ್ರೇಟ್ ಬ್ರಿಟನ್ ವಿರುದ್ಧದ ಎಫ್‌ಐಹೆಚ್ ಪ್ರೊ ಲೀಗ್ ಪಂದ್ಯಗಳನ್ನು ಆಡುವ ಮುನ್ನ ಭಾರತವು ಏಪ್ರಿಲ್ 13 ಮತ್ತು 14 ರಂದು ಅರ್ಜೆಂಟೀನಾ ವಿರುದ್ಧ ಬ್ಯೂನೊ ಐರಿಸ್‌ನಲ್ಲಿ ಎರಡು ರಾಷ್ಟ್ರಗಳ ಸ್ನೇಹ ಸೌಹಾರ್ದತೆ ಹಿನ್ನೆಲೆಯಲ್ಲಿ ಎರಡು ಪಂದ್ಯಗಳನ್ನು ಆಡಲಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com