ವಿಷ್ಣು ವಿಶಾಲ್-ಜ್ವಾಲಾ ಗುಟ್ಟಾ
ವಿಷ್ಣು ವಿಶಾಲ್-ಜ್ವಾಲಾ ಗುಟ್ಟಾ

ನಟ ವಿಷ್ಣು ವಿಶಾಲ್ ಕೈಹಿಡಿಯಲಿದ್ದಾರೆ ಬ್ಯಾಡ್ಮಿಂಟನ್ ತಾರೆ ಜ್ವಾಲಾ ಗುಟ್ಟಾ

ಬ್ಯಾಡ್ಮಿಂಟನ್ ತಾರೆ ಜ್ವಾಲಾ ಗುಟ್ಟಾ ಮತ್ತು ನಟ ವಿಷ್ಣು ವಿಶಾಲ್ ಇದೇ ಏಪ್ರಿಲ್ 22ರಂದು ದಾಂಪತ್ಯ ಜೀವನಕ್ಕೆ ಕಾಲಿಡಲಿದ್ದಾರೆ.

ಚೆನ್ನೈ: ಬ್ಯಾಡ್ಮಿಂಟನ್ ತಾರೆ ಜ್ವಾಲಾ ಗುಟ್ಟಾ ಮತ್ತು ನಟ ವಿಷ್ಣು ವಿಶಾಲ್ ಇದೇ ಏಪ್ರಿಲ್ 22ರಂದು ದಾಂಪತ್ಯ ಜೀವನಕ್ಕೆ ಕಾಲಿಡಲಿದ್ದಾರೆ. 

ಕಳೆದ ಸೆಪ್ಟೆಂಬರ್ 7ರಂದು ಜ್ವಾಲಾ ಗುಟ್ಟ ಹುಟ್ಟುಹಬ್ಬದ ದಿನ ವಿಷ್ಣು ಪ್ರೇಮ ನಿವೇದನೆ ಮಾಡಿಕೊಂಡಿದ್ದರು. ಇದಕ್ಕೆ ಜ್ವಾಲಾ ಗುಟ್ಟ ಸಹ ಓಕೆ ಅಂದಿದ್ದರು. ಇದೀಗ ಜ್ವಾಲಾಗುಟ್ಟು ಜೊತೆ ಇದೇ ಏಪ್ರಿಲ್ 22ರಂದು ಮದುವೆಯಾಗುತ್ತಿರುವುದಾಗಿ ಮದುವೆ ಆಮಂತ್ರಣ ಪತ್ರವನ್ನು ಟ್ವೀಟ್ ಮಾಡಿದ್ದಾರೆ. 

ತಮಿಳುನಾಡಿನ ವೆಲ್ಲೂರು ಮೂಲದ 36 ವರ್ಷದ ವಿಶಾಲ್ ಹಲವಾರು ತಮಿಳು ಚಿತ್ರಗಳಲ್ಲಿ ಅಭಿನಯಿಸಿದ್ದಾರೆ. 2009ರಲ್ಲಿ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿದ್ದ ನಟ 17ಕ್ಕೂ ಹೆಚ್ಚು ಚಿತ್ರಗಳಲ್ಲಿ ನಟಿಸಿದ್ದಾರೆ. 

Related Stories

No stories found.

Advertisement

X
Kannada Prabha
www.kannadaprabha.com