ಬೆಂಗಳೂರಿನ SAI ಕೇಂದ್ರದ 8 ಮಂದಿಗೆ ಕೊರೋನಾ: ಒಲಂಪಿಕ್ ತರಬೇತಿ ಕಾರ್ಯಕ್ರಮದ ಮೇಲೆ ಕರಿನೆರಳು

ಗಂಭೀರ ಬೆಳವಣಿಗೆಯಲ್ಲಿ ಬೆಂಗಳೂರಿನಲ್ಲಿರುವ ಸ್ಪೋರ್ಟ್ಸ್ ಅಥಾರಿಟಿ ಆಫ್ ಇಂಡಿಯಾ(SAI) ಕೇಂದ್ರದಲ್ಲಿ ಕನಿಷ್ಠ ಎಂಟು ಮಂದಿ ಕೋವಿಡ್ ಸೋಂಕಿಗೆ ಪಾಸಿಟಿವ್ ವರದಿ ಪಡೆದಿದ್ದಾರೆ. 
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ

ಬೆಂಗಳೂರು: ಗಂಭೀರ ಬೆಳವಣಿಗೆಯಲ್ಲಿ ಬೆಂಗಳೂರಿನಲ್ಲಿರುವ ಸ್ಪೋರ್ಟ್ಸ್ ಅಥಾರಿಟಿ ಆಫ್ ಇಂಡಿಯಾ(SAI)  ಕೇಂದ್ರದಲ್ಲಿ ಕನಿಷ್ಠ ಎಂಟು ಮಂದಿ ಕೋವಿಡ್ ಸೋಂಕಿಗೆ ಪಾಸಿಟಿವ್ ವರದಿ ಪಡೆದಿದ್ದಾರೆ. ಇದರಿಂದಾಗಿ ಬಹುಪ್ರಮುಖವಾದ ಕ್ರೀಡಾಪಟುಗಳ ತರಬೇತಿ ಕಾರ್ಯಕ್ರಮದ ಮೇಲೆ ಪರಿಣಾಮವಾಗಲಿದೆ.

ಒಲಿಂಪಿಕ್ ಕ್ರೀಡಾಕೂಟದಲ್ಲಿ ಭಾಗವಹಿಸಲಿರುವ ಕ್ರೀಡಾಪಟುಗಳೂ ಪಾಸಿಟಿವ್ ವರದಿ ಪಡೆದಿರುವುದು ನ್ಯಾಷನಲ್ ಸೆಂಟರ್ ಆಫ್ ಎಕ್ಸಲೆನ್ಸ್‌ನಲ್ಲಿ ಗ್ರೀನ್ ಝೋನ್ ನಲ್ಲಿದ್ದ ಡಾಪಟುಗಳು ಸಹ ಸೋಂಕಿಗೆ ಒಳಗಾಗಿದ್ದಾರೆ. ಗ್ರೀನ್ ಝೋನ್ ಎನ್ನುವುದು ಕ್ರೀಡಾಪಟುಗಳು, ತರಬೇತುದಾರರು ಮತ್ತು ಸಹಾಯಕ ಸಿಬ್ಬಂದಿಗಳು ಕೊರೋನಾ ಮುನ್ನೆಚ್ಚರಿಕೆ ನಡುವೆ ತರಬೇತಿ ನೀಡುವ ಪ್ರದೇಶವಾಗಿದೆ. ಕೆಲವೇ ವಾರಗಳ ಹಿಂದೆ ಒಬ್ಬ ಉನ್ನತ ಅಧಿಕಾರಿ ಮತ್ತು ಇತರ ಇಬ್ಬರು ಇಲ್ಲಿ ಪಾಸಿಟಿವ್ ವರದಿ ಪಡೆದಿದ್ದರು. ಪಟಿಯಾಲ ಎನ್‌ಸಿಒಇ ಈಗಾಗಲೇ ಕೋವಿಡ್ ಪಾಸಿಟಿವ್ ಪ್ರಕರಣಗಳಿಂದ ತತ್ತರಿಸಿದೆ.ಭೋಪಾಲ್ ಎನ್‌ಸಿಒಇ ಕೂಡ ಇದರಿಂದ ಹೊರತಾಗಿಲ್ಲ.

ದೇಶಾದ್ಯಂತದ ವಿವಿಧ ಎನ್‌ಸಿಒಇಗಳಲ್ಲಿ ಅರ್ಹತೆ ಪಡೆದ ಅಥವಾ ಅರ್ಹತೆಗಾಗಿ ತಯಾರಿ ನಡೆಸಿದವರನ್ನು ಹೊರತುಪಡಿಸಿ ಎಲ್ಲಾ ಕ್ರೀಡಾಪಟುಗಳಿಗೆ ಮೂರು ವಾರಗಳ ರಜೆ ಪಡೆಯಲು ಹೇಳಲಾಗಿದೆ.ಈ ಇತ್ತೀಚಿನ ಬೆಳವಣಿಗೆಯು ಬೆಂಗಳೂರಿನ ಎನ್‌ಸಿಒಇನಲ್ಲಿ ತರಬೇತಿ ಪಡೆಯುತ್ತಿರುವ ಅನೇಕ ಕ್ರೀಡಾಪಟುಗಳಿಗೆ ಆಘಾತಕಾರಿಯಾಗಿದೆ. ಇತ್ತೀಚೆಗೆ ಒಲಿಂಪಿಕ್ಸ್‌ಗೆ ಅರ್ಹತೆ ಪಡೆದ ಮಹಿಳಾ ರೇಸ್-ವಾಕರ್, ಮಧ್ಯಮ-ದೂರ ಓಟಗಾರರು, ವಿದೇಶಿ ತರಬೇತುದಾರ (ರೇಸ್-ವಾಕಿಂಗ್), ಭಾರತದ ಲಾಂಗ್ ಟ್ರಾವೆಲಿಂಗ್ ತರಬೇತುದಾರ, ಫಿಜಿಷಿಯನ್, ಮಸಾಜ್ ಸಹಾಯಕ ಸಹ ಪಾಸಿಟಿವ್ ವರದಿ ಪಡೆದಿದ್ದಾರೆ.

ವೈರಸ್ ತಮ್ಮ ಪ್ರದೇಶಕ್ಕೆ ಪ್ರವೇಶಿಸಿರುವುದರಿಂದ ಕ್ರೀಡಾಪಟುಗಳು ಸ್ವಲ್ಪ ಆತಂಕಕ್ಕೊಳಗಾಗಿದ್ದಾರೆ ಎಂದು ತಿಳಿದುಬಂದಿದೆ. ಅಭ್ಯಾಸವನ್ನು ಕಳೆದುಕೊಳ್ಳಲು ಸಾಧ್ಯವಾಗದ ಕಾರಣ ಕ್ರೀಡಾ ಸಚಿವಾಲಯವು ಒಲಿಂಪಿಕ್ಸ್‌ಗೆ ಅರ್ಹತೆ ಪಡೆದವರಿಗೆ ತಕ್ಷಣ ಲಸಿಕೆ ನೀಡಬೇಕೆಂದು ಒಂದು ವಿಭಾಗ ಅಭಿಪ್ರಾಯಪಟ್ಟಿದೆ. ಪಟಿಯಾಲದಲ್ಲಿ, ತರಬೇತುದಾರರು ಮತ್ತು ಸಹಾಯಕ ಸಿಬ್ಬಂದಿ ಸೇರಿದಂತೆ ಬಾಕ್ಸಿಂಗ್ ತಂಡವು ಪಾಸಿಟಿವ್ ವರದಿ ಪಡೆಯಿತು,, ಮಹಿಳಾ ಬಾಕ್ಸರ್ ಗಳು ತರಬೇತಿ ಪಡೆಯುತ್ತಿರುವ ದೆಹಲಿಯಲ್ಲಿಯೂ ಸಹ, ತರಬೇತುದಾರರಿಗೆ ಕೊರೋನಾ ಸೋಂಕು ದೃಢವಾಗಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com