ಯೂತ್ ವರ್ಲ್ಡ್ ಚಾಂಪಿಯನ್‌ಶಿಪ್‌: ಎಂಟು ಭಾರತೀಯ ಬಾಕ್ಸರ್ ಗಳು ಫೈನಲ್ ಪ್ರವೇಶ

ಎಐಬಿಎ ಯೂತ್ ಮೆನ್ಸ್ ಮತ್ತು ವುಮೆನ್ಸ್ ವರ್ಲ್ಡ್ ಬಾಕ್ಸಿಂಗ್ ಚಾಂಪಿಯನ್‌ಶಿಪ್‌ನಲ್ಲಿ ಭಾರತೀಯರು ಐತಿಹಾಸಿಕ ಪ್ರದರ್ಶನ ನಿಡುವುದರೊಡನೆ ಏಳು ಮಹಿಳೆಯರು ಮತ್ತು ಓರ್ವ ಪುರುಷ ಬಾಕ್ಸರ್ ಸೇರಿದಂತೆ 8 ಬಾಕ್ಸರ್‌ಗಳು ಪೋಲೆಂಡ್‌ನ ಕೀಲ್ಸ್‌ನಲ್ಲಿ ನಡೆದ ಸ್ಪರ್ಧೆಯ ಎಂಟನೇ ದಿನದಂದು ಫೈನಲ್ ಪ್ರವೇಶಿಸಿದ್ದಾರೆ.

Published: 21st April 2021 05:39 PM  |   Last Updated: 21st April 2021 06:50 PM   |  A+A-


Posted By : Raghavendra Adiga
Source : PTI

ನವದೆಹಲಿ: ಎಐಬಿಎ ಯೂತ್ ಮೆನ್ಸ್ ಮತ್ತು ವುಮೆನ್ಸ್ ವರ್ಲ್ಡ್ ಬಾಕ್ಸಿಂಗ್ ಚಾಂಪಿಯನ್‌ಶಿಪ್‌ನಲ್ಲಿ ಭಾರತೀಯರು ಐತಿಹಾಸಿಕ ಪ್ರದರ್ಶನ ನೀಡುವುದರೊಡನೆ ಏಳು ಮಹಿಳೆಯರು ಮತ್ತು ಓರ್ವ ಪುರುಷ ಬಾಕ್ಸರ್ ಸೇರಿದಂತೆ 8 ಬಾಕ್ಸರ್‌ಗಳು ಪೋಲೆಂಡ್‌ನ ಕೀಲ್ಸ್‌ನಲ್ಲಿ ನಡೆದ ಸ್ಪರ್ಧೆಯ ಎಂಟನೇ ದಿನದಂದು ಫೈನಲ್ ಪ್ರವೇಶಿಸಿದ್ದಾರೆ.

ಎಂಟು ಫೈನಲಿಸ್ಟ್‌ಗಳಲ್ಲದೆ, ಇತರ ಮೂವರು ಕಂಚಿನ ಪದಕಕ್ಕಾಗಿ ಸೆಣೆಸಲಿದ್ದಾರೆ. ಇದರ ಮೂಲಕ ಭಾರತ ಒಟ್ಟಾರೆ 11 ಪದಕಗಳನ್ನು ಪಡೆಯುವುದು ಖಾತ್ರಿಯಾಗಿದೆ. ಇದಕ್ಕೆ ಮುನ್ನ ಹಂಗೇರಿಯಲ್ಲಿ 2018 ರಲ್ಲಿ ನಡೆದ ವಿಶ್ವ ಯುವ ಚಾಂಪಿಯನ್‌ಶಿಪ್‌ನಲ್ಲಿ ಭಾರತೀಯ ತಂಡವು 10 ಪದಕಗಳನ್ನು ಗಳಿಸಿತ್ತು.

ಮಂಗಳವಾರ ನಡೆದ ಮೊದಲ ಪಂದ್ಯದಲ್ಲಿ, ಗೀತಿಕಾ (48 ಕೆಜಿ) ಇಟಲಿಯ ಎರಿಕಾ ಪ್ರಿಸ್ಕಿಯಾಂಡಾರೊ ವಿರುದ್ಧ 5-0 ಅಂತರದಿಂದ ಜಯಗಳಿಸುವ ಮೂಲಕ ಫೈನಲ್ಸ್ ಪ್ರವೇಶಿಸಿದ್ದಾರೆ. ಅವರು ಫೈನಲ್‌ನಲ್ಲಿ ಪೋಲೆಂಡ್‌ನ ನಟಾಲಿಯಾ ಡೊಮಿನಿಕಾ ಅವರನ್ನು ಎದುರಿಸಲಿದ್ದಾರೆ. ಮತ್ತೊಂದು ಪಂದ್ಯದಲ್ಲಿ, ವೇಗ ಮತ್ತು ಕೌಶಲ್ಯದ ಉತ್ತಮ ಪ್ರದರ್ಶನದೊಂದಿಗೆ, 2019 ರ ಏಷ್ಯನ್ ಯೂತ್ ಚಾಂಪಿಯನ್ ಬೇಬಿರೋಜಿಸನಾ ಚಾನು (51 ಕೆಜಿ) ಇಟಲಿಯ ಎಲೆನ್ ಅಯಾರಿ ಅವರೆದುರು ಸುಲಭ ಜಯ ಸಾಧಿಸಿದ್ದರು. ಇವರು ಫೈನಲ್‌ನಲ್ಲಿ ರಷ್ಯಾದ ವಲೇರಿಯಾ ಲಿಂಕೋವಾ ವಿರುದ್ಧ ಸೆಣಸಲಿದ್ದಾರೆ.

ಪೂನಮ್ (57 ಕೆಜಿ), ವಿಂಕಾ (60 ಕೆಜಿ), ರಾಜಸ್ಥಾನದ ಅರುಂಧತಿ ಚೌಧರಿ (69 ಕೆಜಿ), 75 ಕೆಜಿ ಮಿಡಲ್ ವೇಟ್ , ಸನಮ್ ಫಾ ಚಾನು, ಸ್ಟಾರ್ ಬಾಕ್ಸರ್, ಅಲ್ಫಿಯಾ ಪಠಾಣ್ (81 ಕೆಜಿ) ಹಾಗೂ ಪುರುಷರ ವಿಭಾಗದಲ್ಲಿ ಸಚಿನ್ (56 ಕೆಜಿ) ಫೈನಲ್‌ಗೆ ಮುನ್ನಡೆಯುವ ಮೂಲಕ ಭಾರತಕ್ಕೆ ಪದಕದ ಭರವಸೆ ಗಟ್ಟಿಗೊಳಿಸಿದ್ದಾರೆ.

ಇನ್ನು - ಬಿಶ್ವಾಮಿತ್ರ ಚೊಂಗ್ಥೋಮ್ (49 ಕೆಜಿ), ಅಂಕಿತ್ ನರ್ವಾಲ್ (64 ಕೆಜಿ) ಮತ್ತು ವಿಶಾಲ್ ಗುಪ್ತಾ (91 ಕೆಜಿ) ಕಂಚಿನ ಪದಕ ಸೆಣೆಸಿನಲ್ಲಿದ್ದಾರೆ. ಎಲ್ಲಾ ಮಹಿಳಾ ಬಾಕ್ಸರ್ ಗಳು ಗುರುವಾರ ತಮ್ಮ ಅಂತಿಮ ಪಂದ್ಯಗಳನ್ನು ಆಡಿದರೆ, ಸಚಿನ್ ಶುಕ್ರವಾರ ಫೈನಲ್ ಪಂದ್ಯವನ್ನು ಆಡಲಿದ್ದಾರೆ.

Stay up to date on all the latest ಕ್ರೀಡೆ news
Poll
The grand Central Vista project is estimated to cost `20,000 crore

ಕೋವಿಡ್ ಬಿಕ್ಕಟ್ಟಿನ ದೃಷ್ಟಿಯಿಂದ ಪ್ರಧಾನಿ ಮೋದಿ ಸೆಂಟ್ರಲ್ ವಿಸ್ಟಾ ಯೋಜನೆಯನ್ನು ತಡೆಹಿಡಿಯಬೇಕೇ?


Result
ಹೌದು
ಬೇಡ
flipboard facebook twitter whatsapp