ಟೋಕಿಯೋ ಒಲಂಪಿಕ್ಸ್: ಒಂದೇ ಕ್ರೀಡಾಕೂಟದಲ್ಲಿ 7 ಪಂದಕ ಗೆದ್ದು ದಾಖಲೆ ನಿರ್ಮಿಸಿದ ಆಸಿಸ್ ಈಜುಗಾರ್ತಿ!
ಜಪಾನ್ ರಾಜಧಾನಿ ಟೋಕಿಯೊದಲ್ಲಿ ನಡೆಯುತ್ತಿರುವ ಒಲಂಪಿಕ್ಸ್ ಕ್ರೀಡಾಕೂಟದಲ್ಲಿ ಆಸ್ಟ್ರೇಲಿಯಾದ ಈಜುಪಟು ಒಂದೇ ಕ್ರೀಡಾಕೂಟದಲ್ಲಿ 7 ಪದಕಗಳನ್ನು ಗೆದ್ದು ವಿಶ್ವ ದಾಖಲೆ ನಿರ್ಮಿಸಿದ್ದಾರೆ.
Published: 01st August 2021 02:58 PM | Last Updated: 01st August 2021 02:58 PM | A+A A-

ಆಸ್ಟ್ರೇಲಿಯಾದ ಈಜುಪಟು ಎಮ್ಮಾ ಮ್ಯಾಕ್ ಕಿಯಾನ್
ಟೋಕಿಯೊ: ಜಪಾನ್ ರಾಜಧಾನಿ ಟೋಕಿಯೊದಲ್ಲಿ ನಡೆಯುತ್ತಿರುವ ಒಲಂಪಿಕ್ಸ್ ಕ್ರೀಡಾಕೂಟದಲ್ಲಿ ಆಸ್ಟ್ರೇಲಿಯಾದ ಈಜುಪಟು ಒಂದೇ ಕ್ರೀಡಾಕೂಟದಲ್ಲಿ 7 ಪದಕಗಳನ್ನು ಗೆದ್ದು ವಿಶ್ವ ದಾಖಲೆ ನಿರ್ಮಿಸಿದ್ದಾರೆ.
ಆಸ್ಟ್ರೇಲಿಯಾದ ಈಜುಪಟು ಎಮ್ಮಾ ಮ್ಯಾಕ್ ಕಿಯಾನ್ ಭಾನುವಾರ ಒಲಿಂಪಿಕ್ಸ್ ಕ್ರೀಡಾಕೂಟದಲ್ಲಿ ಮತ್ತೊಂದು ಪದಕ ಗೆಲ್ಲುವ ಮೂಲಕ ಇತಿಹಾಸ ಬರೆದಿದ್ದಾರೆ. 4x100 ಮೀಟರ್ ರಿಲೇಯಲ್ಲಿ ಎರಡು ಬಾರಿ ವಿಶ್ವ ಚಾಂಪಿಯನ್ ಅಮೆರಿಕದ ಸ್ಪರ್ಧಿಗಳನ್ನು ಮಣಿಸಿ ಚಿನ್ನದ ಪದಕವನ್ನು ಗೆದ್ದು ವಿಶ್ವದಾಖಲೆ ನಿರ್ಮಿಸಿದ್ದಾರೆ. ಎಮ್ಮಾ ಮ್ಯಾಕ್ ಕಿಯಾನ್ ಅವರಿಗೆ ಹಾಲಿ ಕ್ರೀಡಾಕೂಟದಲ್ಲಿ ಇದು 7ನೇ ಪದಕವಾಗಿದ್ದು, ಆ ಮೂಲಕ ಒಂದೇ ಕ್ರೀಡಾಕೂಟದಲ್ಲಿ 7 ಪದಕ ಗೆದ್ದ ಮೊದಲ ಅಥ್ಲೀಟ್ ಎಂಬ ದಾಖಲೆ ನಿರ್ಮಿಸಿದ್ದಾರೆ. ಯಾವುದೇ ಒಲಿಂಪಿಕ್ಸ್‌ನಲ್ಲಿ ಯಾವುದೇ ಮಹಿಳಾ ಈಜುಗಾರ ಸಾಧಿಸಿಲ್ಲ.
ಎಮ್ಮಾ ಮ್ಯಾಕ್ ಕಿಯಾನ್, ಕೇಲೀ ಮೆಕ್‌ಕೌನ್, ಚೆಲ್ಸಿಯಾ ಹಾಡ್ಜಸ್ ಮತ್ತು ಕೇಟ್ ಕ್ಯಾಂಪ್‌ಬೆಲ್ ಅವರಿದ್ದ ಆಸಿಸ್ ತಂಡ 3 ನಿಮಿಷ 51.60 ಸೆಕೆಂಡುಗಳಲ್ಲಿ ಗುರಿ ಮುಟ್ಟುವ ಮೂಲಕ ದಾಖಲೆ ನಿರ್ಮಿಸಿದೆ. ಇದೇ ಪಂದ್ಯದಲ್ಲಿ ಆಮೆರಿಕ ತಂಡದ ಈಜುಗಾರರು, 3 ನಿಮಿಷ 51.73 ಸೆಕೆಂಡುಗಳಲ್ಲಿ ಮತ್ತು 3 ನಿಮಿಷ 52.60 ಸೆಕೆಂಡ್ ಗಳಲ್ಲಿ ಗುರಿ ಮುಟ್ಟಿ, 2 ಮತ್ತು 3ನೇ ಸ್ಥಾನಕ್ಕೆ ತೃಪ್ತಿ ಪಟ್ಟುಕೊಂಡರು.
ಮೆಕಿಯಾನ್‌ನಿಂದ ಬಟರ್ ಫ್ಲೈ 100 ಮೀ ಈಜು ಸ್ಪರ್ಧೆಯಲ್ಲಿ ಅಮೆರಿಕದ ಅನುಭವಿ ಈಜುಗಾರ್ತಿ ಕ್ಯಾಂಪ್‌ಬೆಲ್ ರನ್ನು ಮಣಿಸಿ ಚಿನ್ನ ಗೆದಿದ್ದರು. ಇದು ಟೋಕಿಯೊದಲ್ಲಿ 27 ವರ್ಷ ವಯಸ್ಸಿನ ಮೆಕ್‌ಕಿಯೊನ್ ಗಳಿಸಿದ ನಾಲ್ಕನೇ ಚಿನ್ನವಾಗಿದ್ದು, ಮೂರು ಕಂಚಿನ ಪದಕಗಳೊಂದಿಗೆ ಒಟ್ಟು 7 ಪದಕಗಳನ್ನು ಗೆದ್ದು ದಾಖಲೆ ನಿರ್ಮಿಸಿದ್ದಾರೆ. ಇದಕ್ಕೂ ಮೊದಲು ಈಸ್ಟ್ ಜರ್ಮನ್ ಕ್ರಿಸ್ಟಿನ್ ಒಟ್ಟೊ ಅವರು 1952 ರಲ್ಲಿ ಆರು ಪದಕಗಳನ್ನು ಗೆದಿದ್ದರು, ಈ ದಾಖಲೆಯನ್ನು 2008 ರಲ್ಲಿ ಅಮೇರಿಕದ ನಟಾಲಿ ಕಗ್ಲಿನ್ ಸರಿಗಟ್ಟಿದ್ದರು. ಈ ದಾಖಲೆಯನ್ನು ಇದೀಗ ಆಸ್ಟ್ರೇಲಿಯಾದ ಎಮ್ಮಾ ಮ್ಯಾಕ್ ಕಿಯಾನ್ ಹಿಂದಿಕ್ಕಿದ್ದಾರೆ.