ಟೊಕಿಯೊ ಒಲಂಪಿಕ್ಸ್ ಕುಸ್ತಿ: ದಹಿಯಾ ಬಳಿಕ ಸೆಮಿ ಫೈನಲ್ ಪ್ರವೇಶಿಸಿದ ದೀಪಕ್ ಪೂನಿಯಾ
ರವಿ ಕುಮಾರ್ ದಹಿಯಾ ಬಳಿಕ ಮತ್ತೊಬ್ಬ ಕುಸ್ತಿಪಟು ದೀಪಕ್ ಪೂನಿಯಾ ಟೊಕಿಯೊ ಒಲಂಪಿಕ್ಸ್ನಲ್ಲಿ ಕ್ವಾರ್ಟರ್ ಫೈನಲ್ ಪ್ರವೇಶಿಸಿದ್ದು, ಇದರಂತೆ ಇಬ್ಬರು ಕುಸ್ತಿಪಟುಗಳು ಭಾರತದ ಪಾಲಿಗೆ ಪದಕದ ಭರವಸೆ ಮೂಡಿಸಿದ್ದಾರೆ.
Published: 04th August 2021 10:05 AM | Last Updated: 04th August 2021 10:05 AM | A+A A-

ದೀಪಕ್ ಪೂನಿಯಾ
ಟೊಕಿಯೊ: ರವಿ ಕುಮಾರ್ ದಹಿಯಾ ಬಳಿಕ ಮತ್ತೊಬ್ಬ ಕುಸ್ತಿಪಟು ದೀಪಕ್ ಪೂನಿಯಾ ಟೊಕಿಯೊ ಒಲಂಪಿಕ್ಸ್ನಲ್ಲಿ ಕ್ವಾರ್ಟರ್ ಫೈನಲ್ ಪ್ರವೇಶಿಸಿದ್ದು, ಇದರಂತೆ ಇಬ್ಬರು ಕುಸ್ತಿಪಟುಗಳು ಭಾರತದ ಪಾಲಿಗೆ ಪದಕದ ಭರವಸೆ ಮೂಡಿಸಿದ್ದಾರೆ.
86 ಕೆಜಿ ಪುರುಷರ ಕುಸ್ತಿ ವಿಭಾಗದಲ್ಲಿ ನೈಜೀರಿಯಾದ ಎಕೆರೆಕೆಮೆ ಅಜಿಯೋಮೋರ್ ಅವರನ್ನು ಸೋಲಿಸಿದ ಪೂನಿಯಾ ಕ್ವಾರ್ಟರ್ ಫೈನಲ್ಗೆ ಅರ್ಹತೆ ಪಡೆದರು. ಎಕೆರೆಕೆಮೆ ಅಜಿಯೋಮೋರ್, ಆಫ್ರಿಕಾದ ಮಾಜಿ ಚಾಂಪಿಯನ್ ಆಗಿದ್ದಾರೆ.
ಮೊದಲ ಅವಧಿಯನ್ನು 4-1ರಲ್ಲಿ ಮುಗಿಸಿದ ದೀಪಕ್ ಪೂನಿಯಾ 2ನೇ ಹಂತದಲ್ಲಿ ಆಕ್ರಮಣಕಾರಿ ಮನೋಭಾವ ಪ್ರದರ್ಶಿಸಿದರು. 12-1 ಅಂಕಗಳಿಂದ ನೈಜೀರಿಯಾದ ಸ್ಪರ್ಧಿಯನ್ನು ಸೋಲಿಸಿ ಕ್ವಾರ್ಟರ್ ಫೈನಲ್ಗೆ ಅರ್ಹತೆ ಪಡೆದರು.
ಇದಕ್ಕೂ ಮೊದಲು ಎರಡು ಬಾರಿ ಏಷ್ಯನ್ ಚಾಂಪಿಯನ್ ಆಗಿದ್ದ ರವಿ ಕುಮಾರ್ ದಹಿಯಾ 57 ಕೆಜಿ ಪುರುಷರ ಕುಸ್ತಿ ವಿಭಾಗದಲ್ಲಿ ಕೊಲಂಬಿಯಾದ ಸ್ಪರ್ಧಿಯನ್ನು ಸೋಲಿಸಿ ಕ್ವಾರ್ಟರ್ ಫೈನಲ್ಗೆ ಪ್ರವೇಶಿಸಿದ್ದರು.