ಟೊಕಿಯೊ ಒಲಿಂಪಿಕ್ಸ್‌​ ಕುಸ್ತಿ: ಕ್ವಾರ್ಟರ್ ಫೈನಲ್​ ಪ್ರವೇಶಿಸಿದ ರವಿ ದಹಿಯಾ

2019ರ ವಿಶ್ವ ಚಾಂಪಿಯನ್​ಶಿಪ್​ನಲ್ಲಿ ಕಂಚು ಗೆದ್ದಿದ್ದ ರವಿ ಕುಮಾರ್ ದಹಿಯಾ ಟೊಕಿಯೊ ಒಲಿಂಪಿಕ್ಸ್'ನ ಕುಸ್ತಿ ಪಂದ್ಯದಲ್ಲಿ ಕ್ವಾರ್ಟರ್​ ಫೈನಲ್​ಗೆ ಪ್ರವೇಶಿಸಿ ಪದಕದ ಭರವಸೆ ಮೂಡಿಸಿದ್ದಾರೆ.
ರವಿ ಕುಮಾರ್ ದಹಿಯಾ
ರವಿ ಕುಮಾರ್ ದಹಿಯಾ

ಟೊಕಿಯೊ: 2019ರ ವಿಶ್ವ ಚಾಂಪಿಯನ್​ಶಿಪ್​ನಲ್ಲಿ ಕಂಚು ಗೆದ್ದಿದ್ದ ರವಿ ಕುಮಾರ್ ದಹಿಯಾ ಟೊಕಿಯೊ ಒಲಿಂಪಿಕ್ಸ್'ನ ಕುಸ್ತಿ ಪಂದ್ಯದಲ್ಲಿ ಕ್ವಾರ್ಟರ್​ ಫೈನಲ್​ಗೆ ಪ್ರವೇಶಿಸಿ ಪದಕದ ಭರವಸೆ ಮೂಡಿಸಿದ್ದಾರೆ.

57 ಕೆಜಿ ವಿಭಾಗದ ಪುರುಷರ ಪ್ರೀಸ್ಟೈಲ್ ಕುಸ್ತಿ ವಿಭಾಗದ ಪ್ರಿ ಕ್ವಾರ್ಟರ್​ ಫೈನಲ್​ನಲ್ಲಿ ಕೊಲಂಬಿಯಾದ ಟೈಗ್ರೇರೋಸ್​ ಉರ್ಬಾನೋ ಅವರನ್ನು ಮಣಿಸಿದ ಅವರು ಕ್ವಾರ್ಟರ್​ ಫೈನಲ್​ಗೆ ಅರ್ಹತೆ ಪಡೆದರು.

ಇದಾದ ನಂತರ ಬಲ್ಗೇರಿಯಾದ ಜಾರ್ಜಿ ವ್ಯಾಂಗಲೋವ್ ಅವರನ್ನು ಕ್ವಾರ್ಟರ್​ ಫೈನಲ್​ನಲ್ಲಿ ರವಿ ಕುಮಾರ್ ದಹಿಯಾ ಎದುರಿಸಲಿದ್ದಾರೆ. ದಹಿಯಾ ಅವರಿಗಿದು ಸುಲಭ ಸವಾಲು ಎಂದು ಅಂದಾಜಿಸಲಾಗುತ್ತಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com