ಟೋಕಿಯೊ ಒಲಂಪಿಕ್ಸ್: ಫೈನಲ್ ಪ್ರವೇಶಿಸಿದ ಕುಸ್ತಿಪಟು ರವಿ ದಹಿಯಾ; ಭಾರತಕ್ಕೆ ಬೆಳ್ಳಿ ಖಚಿತ!
ಟೋಕಿಯೊ ಒಲಂಪಿಕ್ಸ್ ನಲ್ಲಿ ಭಾರತ ರವಿ ದಹಿಯಾ 57 ಕೆಜಿ ವಿಭಾಗದ ಸೆಮಿಫೈನಲ್ ಪಂದ್ಯದಲ್ಲಿ ಕಜಕಿಸ್ತಾನದ ನುರಿಸ್ಲಾಮ್ ಸನಾಯೇವ್ ರನ್ನು ಮಣಿಸುವ ಮೂಲಕ ಫೈನಲ್ ಪ್ರವೇಶಿಸಿದ್ದಾರೆ.
Published: 04th August 2021 05:11 PM | Last Updated: 04th August 2021 05:17 PM | A+A A-

ರವಿ ದಹಿಯಾ
ಟೋಕಿಯೊ: ಟೋಕಿಯೊ ಒಲಂಪಿಕ್ಸ್ ನಲ್ಲಿ ಭಾರತ ರವಿ ದಹಿಯಾ 57 ಕೆಜಿ ವಿಭಾಗದ ಸೆಮಿಫೈನಲ್ ಪಂದ್ಯದಲ್ಲಿ ಕಜಕಿಸ್ತಾನದ ನುರಿಸ್ಲಾಮ್ ಸನಾಯೇವ್ ರನ್ನು ಮಣಿಸುವ ಮೂಲಕ ಫೈನಲ್ ಪ್ರವೇಶಿಸಿದ್ದಾರೆ.
ಒಲಿಂಪಿಕ್ ಕ್ರೀಡಾಕೂಟದಲ್ಲಿ ಚಿನ್ನದ ಪದಕಕ್ಕೆ ಅರ್ಹತೆ ಪಡೆದ ಎರಡನೇ ಭಾರತೀಯ ಕುಸ್ತಿಪಟುವಾಗಿದ್ದಾರೆ.
ಇದಕ್ಕೂ ಮೊದಲು, 2012ರ ಲಂಡನ್ ಗೇಮ್ಸ್‌ನಲ್ಲಿ ಚಿನ್ನದ ಪದಕ ಗೆದ್ದ ಏಕೈಕ ಭಾರತೀಯ ಸುಶೀಲ್ ಕುಮಾರ್ ಆಗಿದ್ದಾರೆ.