ಟೊಕಿಯೊ ಒಲಂಪಿಕ್ಸ್‌​ ಕುಸ್ತಿ: ಸೆಮಿಫೈನಲ್‌ ಪ್ರವೇಶಿಸಿದ ಬಜರಂಗ್ ಪೂನಿಯಾ

ಭಾರತದ ಕುಸ್ತಿಪಟು ಬಜರಂಗ್ ಪುನಿಯಾ ಟೊಕಿಯೊ ಒಲಂಪಿಕ್ಸ್​ನಲ್ಲಿ ಸೆಮಿ​ಫೈನಲ್​ ಪ್ರವೇಶಿಸಿದ್ದು,  ಈ ಮೂಲಕ ಪದಕದ ಭರವಸೆ ಮೂಡಿಸಿದ್ದಾರೆ.
ಬಜರಂಗ್​ ಪುನಿಯಾ
ಬಜರಂಗ್​ ಪುನಿಯಾ

ಟೊಕಿಯೊ: ಭಾರತದ ಕುಸ್ತಿಪಟು ಬಜರಂಗ್ ಪುನಿಯಾ ಟೊಕಿಯೊ ಒಲಂಪಿಕ್ಸ್​ನಲ್ಲಿ ಸೆಮಿ​ಫೈನಲ್​ ಪ್ರವೇಶಿಸಿದ್ದು,  ಈ ಮೂಲಕ ಪದಕದ ಭರವಸೆ ಮೂಡಿಸಿದ್ದಾರೆ.

ಪುರುಷರ 65 ಕೆ.ಜಿ. ಫ್ರೀಸ್ಟೈಲ್ ವಿಭಾಗದ ಕ್ವಾರ್ಟರ್‌ಫೈನಲ್‌ನಲ್ಲಿ ಬಜರಂಗ್ ಪೂನಿಯಾ ಇರಾನ್‌ನ ಮೊರ್ತೆಜಾ ಗಿಯಾಸಿ ವಿರುದ್ದ ಗೆಲುವು ದಾಖಲಿಸಿದ್ದಾರೆ.

ಇಂದು ನಡೆದ ಪಂದ್ಯದಲ್ಲಿ ಮೊದಲ ಸುತ್ತಿನಿಂದಲೂ ಎದುರಾಳಿಯ ಮೇಲೆ ಆಕ್ರಮಣಕಾರಿ ಆಟವಾಡಿದ ಬಜರಂಗ್​ ಪುನಿಯಾ, ಮೊದಲ ರೌಂಡ್​​ನಲ್ಲಿ 1-0 ಮುನ್ನಡೆ ಸಾಧಿಸಿದರು. ನಂತರ ಎರಡನೇ ರೌಂಡ್​ನಲ್ಲಿ 2-1 ರಿಂದ ಮುನ್ನಡೆ ಸಾಧಿಸಿದ ಬಜರಂಗ್,​ ಅಂತಿಮವಾಗಿ 2-1 ಅಂತರದಿಂದ ಗೆಲವು ಸಾಧಿಸಿ ಸೆಮಿಫೈನಲ್​​ ಪ್ರವೇಶಿಸಿದರು.‌ ಸೆಮಿಫೈನಲ್​ನಲ್ಲಿ ಅಜೆರ್ಬೈಜಾನ್​ನ ಹಾಜಿ ಅಲಿಯೇವ್ ವಿರುದ್ಧ ಸೆಣಸಾಡಲಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com