20 ವರ್ಷದೊಳಗಿನವರ ವಿಶ್ವ ಅಥ್ಲೆಟಿಕ್ಸ್: ರೇಸ್ ವಾಕ್ ನಲ್ಲಿ ಬೆಳ್ಳಿ ಪದಕ ಗೆದ್ದ ಭಾರತದ ಅಮಿತ್ ಖತ್ರಿ

ಕೀನ್ಯಾದ ನೈರೋಬಿಯಲ್ಲಿ ನಡೆಯುತ್ತಿರುವ 20 ವರ್ಷದ ಒಳಗಿನವರ ವಿಶ್ವ ಅಥ್ಲೆಟಿಕ್ಸ್ ನಲ್ಲಿ ಕೆಲ ದಿನಗಳ ಹಿಂದೆ 4x400m ಮಿಶ್ರ ರಿಲೇ ತಂಡ ಕಂಚು ಗೆದ್ದ ನಂತರ ಇದೀಗ  10 ಕಿಲೋ ಮೀಟರ್ ರೇಸ್ ವಾಕ್ ನಲ್ಲಿ ಭಾರತದ ಅಮಿತ್ ಖತ್ರಿ ಬೆಳ್ಳಿ ಪದಕ ಗಳಿಸಿದ್ದಾರೆ.
ಅಮಿತ್ ಖತ್ರಿ
ಅಮಿತ್ ಖತ್ರಿ

ನೈರೋಬಿ: ಕೀನ್ಯಾದ ನೈರೋಬಿಯಲ್ಲಿ ನಡೆಯುತ್ತಿರುವ 20 ವರ್ಷದ ಒಳಗಿನವರ ವಿಶ್ವ ಅಥ್ಲೆಟಿಕ್ಸ್ ನಲ್ಲಿ ಕೆಲ ದಿನಗಳ ಹಿಂದೆ 4x400m ಮಿಶ್ರ ರಿಲೇ ತಂಡ ಕಂಚು ಗೆದ್ದ ನಂತರ ಇದೀಗ  10 ಕಿಲೋ ಮೀಟರ್ ರೇಸ್ ವಾಕ್ ನಲ್ಲಿ ಭಾರತದ ಅಮಿತ್ ಖತ್ರಿ ಬೆಳ್ಳಿ ಪದಕ ಗಳಿಸಿದ್ದಾರೆ.

ಕೀನ್ಯಾದ ಹೆರಿಸ್ಟೋನ್ ವನ್ಯೋನಿ ಚಿನ್ನದ ಪದಕ ಪಡೆದರೆ,  ಸ್ಪೇನ್ ನ ಪೌಲ್ ಮೆಕ್ ಗ್ರಾಥ್ ಕಂಚಿನ ಪದಕ ಗೆದ್ದರು. ಕೊನೆಯ ಎರಡು ಸುತ್ತು ಬಾಕಿ ಇರುವವರೆಗೂ ಮುಂಚೂಣಿಯಲ್ಲೇ ಇದ್ದ ಖತ್ರಿ ಅವರನ್ನು ಕೊನೆಯ ಹಂತದಲ್ಲಿ ಹೆರಿಸ್ಟೋನ್ ಹಿಂದಿಕ್ಕಿದ್ದರು.  

ಖತ್ರಿ 42: 17.94 ನಿಮಿಷದಲ್ಲಿ ತಮ್ಮ ಆಟವನ್ನು ಮುಗಿಸಿದರೆ, ಚಿನ್ನದ ಪದಕ ವಿಜೇತ ಹೆರಿಸ್ಟೋನ್ 42:10 .84 ನಿಮಿಷದಲ್ಲಿ ಆಟ ಮುಗಿಸುವ ಮೂಲಕ ಅಮಿತ್ ಖತ್ರಿ ಅವರನ್ನು ಹಿಂದಿಕ್ಕಿದರು. ಪೌಲ್ ಮೆಕ್ ಗ್ರಾಥ್  42:26.11 ನಿಮಿಷದೊಂದಿಗೆ ಕಂಚಿನ ಪದಕಕ್ಕೆ ತೃಪ್ತಿಪಟ್ಟುಕೊಂಡರು.ಕ್ರೀಡಾಕೂಟದಲ್ಲಿ ಚಿನ್ನ ಮತ್ತು ಕಂಚಿನ ಪದಕ ವಿಜೇತರು ತಮ್ಮ ವೈಯಕ್ತಿಕ ಅತ್ಯುತ್ತಮ ಸಮಯವನ್ನು ದಾಖಲಿಸಿದರು. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com