ನಿಮ್ಮ ಸಾಧನೆ ಇಡೀ ದೇಶಕ್ಕೆ ಸ್ಫೂರ್ತಿ: ಭವಿನಾ ಪಟೇಲ್‌ ಗೆ ಪ್ರಧಾನಿ ಮೋದಿ ಅಭಿನಂದನೆ

ಟೋಕಿಯೊ ಪ್ಯಾರಾಲಿಂಪಿಕ್ಸ್‌ನಲ್ಲಿ ಸೆಮಿಫೈನಲ್ ನಲ್ಲಿ ರೋಚಕ ಗೆಲುವು ಸಾಧಿಸಿ ಫೈನಲ್ ಪ್ರವೇಶಿಸಿದ ಭವಿನಾ ಪಟೇಲ್ ಅವರನ್ನು ಪ್ರಧಾನಿ ನರೇಂದ್ರ ಮೋದಿ ಅವರು ಶನಿವಾರ ಅಭಿನಂದಿಸಿದ್ದಾರೆ.
ಭವಿನಾ ಪಟೇಲ್‌
ಭವಿನಾ ಪಟೇಲ್‌

ನವದೆಹಲಿ: ಟೋಕಿಯೊ ಪ್ಯಾರಾಲಿಂಪಿಕ್ಸ್‌ನಲ್ಲಿ ಸೆಮಿಫೈನಲ್ ನಲ್ಲಿ ರೋಚಕ ಗೆಲುವು ಸಾಧಿಸಿ ಫೈನಲ್ ಪ್ರವೇಶಿಸಿದ ಭವಿನಾ ಪಟೇಲ್ ಅವರನ್ನು ಪ್ರಧಾನಿ ನರೇಂದ್ರ ಮೋದಿ ಅವರು ಶನಿವಾರ ಅಭಿನಂದಿಸಿದ್ದಾರೆ.

ಭವಿನಾ ಪಟೇಲ್‌ ಅವರ ಸಾಧನೆ ಇಡೀ ರಾಷ್ಟ್ರಕ್ಕೆ ಸ್ಫೂರ್ತಿ ನೀಡಿದೆ. ಭವಿನಾ ಪಟೇಲ್ ತಮ್ಮ ಚೀನಾ ಎದುರಾಳಿಯನ್ನು 3-2 ರಲ್ಲಿ ಮಣಿಸಿ ಪ್ಯಾರಾಲಿಂಪಿಕ್ಸ್‌ನ ಫೈನಲ್ ತಲುಪಿದ ದೇಶದ ಮೊದಲ ಟೇಬಲ್ ಟೆನಿಸ್ ಆಟಗಾರ್ತಿಯಾಗಿದ್ದಾರೆ.

"ಅಭಿನಂದನೆಗಳು ಭವಿನಾ ಪಟೇಲ್! ನೀವು ಅದ್ಭುತವಾಗಿ ಆಡಿದ್ದೀರಿ. ನಿಮ್ಮ ಯಶಸ್ಸಿಗೆ ಇಡೀ ದೇಶ ಪ್ರಾರ್ಥಿಸುತ್ತಿದೆ. ಯಾವುದೇ ಒತ್ತಡವಿಲ್ಲದೆ ಆಟವಾಡಿ. ಅತ್ಯುತ್ತಮವಾದದ್ದನ್ನು ದೇಶಕ್ಕೆ ನೀಡಿದ್ದೀರಿ. ನಿಮ್ಮ ಸಾಧನೆ ಇಡೀ ದೇಶಕ್ಕೆ ಸ್ಫೂರ್ತಿ ನೀಡುತ್ತದೆ ಎಂದು ಮೋದಿ ಟ್ವೀಟ್ ಮಾಡಿದ್ದಾರೆ.

ಮಹಿಳಾ ಟೇಬಲ್ ಟೆನ್ನಿಸ್ ಸಿಂಗಲ್ಸ್​ನಲ್ಲಿ ಚೀನಾದ ಮಿಯಾವೋ ಝಾಂಗ್ ಅವರನ್ನು ಮಣಿಸಿ ಭಾರತೀಯ ಪ್ಯಾರಾ ಟೇಬಲ್​ ಟೆನ್ನಿಸ್ ಆಟಗಾರ್ತಿ ಭವಿನಾ ಪಟೇಲ್ ಫೈನಲ್‌ಗೆ ಪ್ರವೇಶ ಪಡೆದಿದ್ದಾರೆ. ಆ ಮೂಲಕ ಚಿನ್ನದ ಪದಕ ಗೆಲ್ಲುವ ಭರವಸೆ ಮೂಡಿಸಿದ್ದಾರೆ.

34 ವರ್ಷ ವಯಸ್ಸಿನ ಭಾವಿನ 12 ತಿಂಗಳ ಶಿಶುವಾಗಿದ್ದಾಗ ಪೋಲಿಯೋ ರೋಗಕ್ಕೆ ತುತ್ತಾಗಿದ್ದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com