ಏಷ್ಯನ್ ಚಾಂಪಿಯನ್ಷಿಪ್ ಟ್ರೋಫಿ: ಜಪಾನ್ ವಿರುದ್ಧ ಭಾರತಕ್ಕೆ 3-5 ಅಂತರದ ಸೋಲು, ಪಾಕ್ ವಿರುದ್ಧ ಮತ್ತೊಂದು ಪಂದ್ಯ

ಹಾಲಿ ಚಾಂಪಿಯನ್ ಗಳು ಹಾಗೂ ಒಲಂಪಿಕ್ ನಲ್ಲಿ ಕಂಚಿನ ಪದಕ ಗೆದ್ದಿರುವ ಭಾರತ ಹಾಕಿ ತಂಡ ಏಷ್ಯನ್ ಚಾಂಪಿಯನ್ಷಿಪ್ ಟ್ರೋಫಿಯ ಎರಡನೇ ಸೆಮಿಫೈನಲ್ಸ್ ಪಂದ್ಯದಲ್ಲಿ ಜಪಾನ್ ವಿರುದ್ಧ 3-5 ಅಂತರದಿಂದ ಸೋಲು ಕಂಡಿದೆ. 
ಭಾರತ-ಜಪಾನ್ ನಡುವಿನ ಪಂದ್ಯ
ಭಾರತ-ಜಪಾನ್ ನಡುವಿನ ಪಂದ್ಯ

ಹಾಲಿ ಚಾಂಪಿಯನ್ ಗಳು ಹಾಗೂ ಒಲಂಪಿಕ್ ನಲ್ಲಿ ಕಂಚಿನ ಪದಕ ಗೆದ್ದಿರುವ ಭಾರತ ಹಾಕಿ ತಂಡ ಏಷ್ಯನ್ ಚಾಂಪಿಯನ್ಷಿಪ್ ಟ್ರೋಫಿಯ ಎರಡನೇ ಸೆಮಿಫೈನಲ್ಸ್ ಪಂದ್ಯದಲ್ಲಿ ಜಪಾನ್ ವಿರುದ್ಧ 3-5 ಅಂತರದಿಂದ ಸೋಲು ಕಂಡಿದೆ. 
 
ಏಷ್ಯನ್ ಚಾಂಪಿಯನ್ಸ್ ಟ್ರೋಫಿ ಟೂರ್ನಮೆಂಟ್ ನ ಪುರುಷರ ಹಾಕಿ ವಿಭಾಗದಲ್ಲಿ ಭಾರತ ಜಪಾನ್ ವಿರುದ್ಧದ ಪಂದ್ಯಕ್ಕೂ ಮುನ್ನ ಗೆಲ್ಲುವ ಸಾಧ್ಯತೆಗಳಿತ್ತು, ಕಾರಣ ಈ ಪಂದ್ಯಕ್ಕೂ ಮುನ್ನ ನಡೆದಿದ್ದ ಪಂದವೊಂದರಲ್ಲಿ ಜಪಾನ್ ವಿರುದ್ಧವೇ ಭಾರತ ಕೊನೆಯ ಹಂತದಲ್ಲಿ 6-0 ಅಂತರದ ಗೆಲುವು ಸಾಧಿಸಿತ್ತು. ಆದರೆ ಈ ಬಾರಿ ಜಪಾನ್ ತಂತ್ರ ಬೇರೆಯದ್ದೇ ರೀತಿಯಲ್ಲಿತ್ತು ಈ ಬಾರಿ ಸಂಪೂರ್ಣವಾಗಿ ವಿಭಿನ್ನವಾಗಿ ಎದುರಾಳಿಗಳನ್ನು ಎದುರಿಸಲು ಜಪಾನ್ ತಂಡ ಸಜ್ಜುಗೊಂಡಂತಿತ್ತು. ಅಂತೆಯೇ ಪ್ರಾರಂಭದಿಂದಲೂ ಪಂದ್ಯದ ಮೇಲೆ ಹಿಡಿತ ಸಾಧಿಸಿದರು. 

ಮೊದಲ ನಿಮಿಷದ ಪೆನಾಲ್ಟಿಯಲ್ಲಿ ಶೋತಾ ಯಮಾದ ಗೋಲ್ ನ ಮೂಲಕ ಜಪಾನ್ ಮೊದಲ ಅಂಕ ಗಳಿಸಿತು.  2 ನೇ ನಿಮಿಷದಲ್ಲಿ ರೈಕಿ ಫುಜಿಶಿಮ 14 ರಲ್ಲಿ ಯೋಶಿಕಿ ಕಿರಿಶಿತ, 35 ರಲ್ಲಿ ಕೋಸೈ ಕವಾಬೆ ಹಾಗೂ 41 ರಲ್ಲಿ ರ್ಯೋಮಾ ಓಕಾ ಗೋಲ್ ದಾಖಲಿಸಿದರು. 

ಭಾರತದ ಪರ ದಿಲ್ಪ್ರೀತ್ ಸಿಂಗ್ 17 ನೇ ನಿಮಿಷ, ಉಪನಾಯಕ ಹರ್ಮನ್ಪ್ರೀತ್ ಸಿಂಗ್ (43 ರಲ್ಲಿ) ಹಾರ್ದಿಕ್ ಸಿಂಗ್ (58 ನೇ ನಿಮಿಷದಲ್ಲಿ) ಗೋಲ್ ದಾಖಲಿಸಿದರು. 

ಆಥಿತೇಯ ತಂಡ 16 ಪಂದ್ಯಗಳನ್ನು ಗೆಲ್ಲುವುದಕ್ಕೂ ಮುನ್ನ ಭಾರತ ಜಪಾನ್ 18 ಬಾರಿ ಮುಖಾಮುಖಿಯಾಗಿದ್ದು, ಜಪಾನ್ ಒಂದು ಪಂದ್ಯದಲ್ಲಿ ಗೆದ್ದಿದ್ದರೆ ಮತ್ತೊಂದು ಸಮ ಮಾಡಿಕೊಂಡಿತ್ತು. ಜಪಾನ್ ಮುಂದಿನ ಪಂದ್ಯದಲ್ಲಿ ದಕ್ಷಿಣ ಕೊರಿಯಾವನ್ನು ಎದುರಿಸಲಿದ್ದರೆ ಭಾರತ ಮತ್ತೊಮ್ಮೆ ಕಂಚಿಕ ಪದಕಕ್ಕಾಗಿ ಪಾಕಿಸ್ತಾನವನ್ನು ಡಿ.22 ರಂದು ಎದುರಿಸಲಿದೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com