ಬೆಂಗಳೂರಿನಲ್ಲಿ ಖೆಲೋ ಇಂಡಿಯಾ ಯೂನಿವರ್ಸಿಟಿ ಗೇಮ್ಸ್ 2021: ಸಿಎಂ ಯಡಿಯೂರಪ್ಪ ಘೋಷಣೆ

ಖೇಲೋ ಇಂಡಿಯಾ ವಿಶ್ವವಿದ್ಯಾನಿಲಯ 2021:ಕ್ರೀಡಾಕೂಟವನ್ನು ಬೆಂಗಳೂರಿನ ಜೈನ್ ವಿಶ್ವವಿದ್ಯಾನಿಲಯದಲ್ಲಿ ಆಯೋಜಿಸಲಾಗುತ್ತದೆ ಎಂದು ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಘೋಷಿಸಿದ್ದಾರೆ.

Published: 21st February 2021 09:20 PM  |   Last Updated: 22nd February 2021 04:23 PM   |  A+A-


ಮುಖ್ಯಮಂತ್ರಿ ಯಡಿಯೂರಪ್ಪ ಹಾಗೂ ಕೇಂದ್ರ ಸಚಿವರಾದ ಕಿರಣ್ ರಿಜಿಜು

Posted By : Raghavendra Adiga
Source : PTI

ಬೆಂಗಳೂರು: ಖೇಲೋ ಇಂಡಿಯಾ ವಿಶ್ವವಿದ್ಯಾನಿಲಯ 2021:ಕ್ರೀಡಾಕೂಟವನ್ನು ಬೆಂಗಳೂರಿನ ಜೈನ್ ವಿಶ್ವವಿದ್ಯಾನಿಲಯದಲ್ಲಿ ಆಯೋಜಿಸಲಾಗುತ್ತದೆ ಎಂದು ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಘೋಷಿಸಿದ್ದಾರೆ.

ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಮತ್ತು ಕೇಂದ್ರ ಕ್ರೀಡಾ ಸಚಿವ ಕಿರೆನ್ ರಿಜಿಜು ಭಾನುವಾರ ನಡೆಸಿದ ಜಂಟಿ ಪತ್ರಿಕಾಗೋಷ್ಠಿಯಲ್ಲಿ  ಸಿಎಂ ಈ ಘೋಷಣೆ ಮಾಡಿದ್ದಾರೆ.

"ನಾವು ಕೆಐಯುಜಿ 2021 ಆತಿಥ್ಯ ವಹಿಸುವ ಸೌಭಾಗ್ಯ ಪಡೆದಿದ್ದೇವೆ. ಕ್ರೀಡಾಕೂಟವು ಭಾರತದ ಭವಿಷ್ಯದ ಶ್ರೇಷ್ಠ ಚಾಂಪಿಯನ್ ಗಳನ್ನು ಹುಟ್ಟು ಹಾಕಲಿದೆ ಎಂದು ನನಗೆ ವಿಶ್ವಾಸವಿದೆ. ಕರ್ನಾಟಕ ಸರ್ಕಾರವು ವಿಶ್ವವಿದ್ಯಾನಿಲಯದ ಕ್ರೀಡೆಗಳನ್ನು ಅತ್ಯಂತ ಯಶಸ್ವಿಯಾಗಿ ನಡೆಸಿಕೊಡಲಿದೆ." ಸಿಎಂ ಯಡಿಯೂರಪ್ಪ ಹೇಳಿದ್ದಾರೆ. ಅಲ್ಲದೆ ಈ ಭಾರಿ 17 ಕ್ರೀಡಾ ವಿಭಾಗಗಳಲ್ಲಿ ಆರು ಸಾವಿರ ಕ್ರೀಡಾಪಟುಗಳು ಭಾಗವಹಿಸಲಿದ್ದಾರೆ ಎಂದು ಯಡಿಯೂರಪ್ಪ ಹೇಳಿದ್ದಾರೆ.

ಕೇಂದ್ರ ಕ್ರೀಡಾ ಸಚಿವ ರಿಜಿಜು ಮಾತನಾಡಿ "ಕಳೆದ ವರ್ಷ ಒಡಿಶಾದಲ್ಲಿ ನಡೆದ ವಿಶ್ವವಿದ್ಯಾನಿಲಯ ಕ್ರೀಡಾಕೂಟವು ಭಾರಿ ಯಶಸ್ಸನ್ನು ಕಂಡಿತು. ಉತ್ತಮ ಕ್ರೀಡಾ ಸಾಧನೆ ಹೊಂದಿರುವ ದೇಶಗಳು ತಮ್ಮ ಕ್ರೀಡಾ ತಾರೆಗಳನ್ನು ವಿಶ್ವವಿದ್ಯಾನಿಲಯ ಮಟ್ಟದ ಕ್ರೀಡಾಪಟುಗಳಿಂದ ಹೆಚ್ಚಾಗಿ ಆಕರ್ಷಿಸುತ್ತಿವೆ. ಇದಕ್ಕೆ ಉದಾಹರಣೆ ಎಂದರೆ ಯುಎಸ್ನಲ್ಲಿ ಯೂನಿವರ್ಸಿಟಿ ಗೇಮ್ಸ್ ಒಲಿಂಪಿಕ್ ಚಾಂಪಿಯನ್ ಗಳಿಗೆ ತಳಪಾಯವಾಗಿದೆ." ಎಂದರು. ಅಲ್ಲದೆ "ಕರ್ನಾಟಕವು ಕ್ರೀಡೆಯಲ್ಲಿ ಉತ್ತಮ ಸಾಧನೆ ತೋರುತ್ತಿದೆ. ಬೆಂಗಳೂರಿನಲ್ಲಿರುವ ಸೌಲಭ್ಯಗಳು ರಾಜ್ಯದ ಇತರೆ ಭಾಗಗಳಲ್ಲಿ ಸಹ ಸಿಗುವಂತಾಗಬೇಕು. ಕ್ರೀಡೆಗಳಲ್ಲಿ ಬಾರತ ಸೂಪರ್ ಪವರ್ ಆಗಬೇಕು ಎಂಬುದು ನನ್ನ ಕನಸು." ಎಂದರು.

ಅಸೋಸಿಯೇಷನ್ ​​ಆಫ್ ಇಂಡಿಯನ್ ಯೂನಿವರ್ಸಿಟೀಸ್ (ಎಐಯು) ಸಹಭಾಗಿತ್ವದಲ್ಲಿ ಬೆಂಗಳೂರಿನ ಜೈನ್ ವಿಶ್ವವಿದ್ಯಾನಿಲಯದಲ್ಲಿ ಹಾಗೂ ಇತರೆ ಸ್ಥಳಗಳಲ್ಲಿ ಕ್ರೀಡಾಕೂಟ ನಡೆಯಲಿದೆ. ಕೆಐಯುಜಿ ದೇಶದ ಅತಿದೊಡ್ಡ ವಿಶ್ವವಿದ್ಯಾನಿಯಲ ಕ್ರೀಡಾಕೂಟವಾಗಿದೆ ಮತ್ತು ಒಲಿಂಪಿಕ್ಸ್ ಸೇರಿದಂತೆ ಅಂತರರಾಷ್ಟ್ರೀಯ ಸ್ಪರ್ಧೆಗಳಲ್ಲಿ ಭಾರತವನ್ನು ಪ್ರತಿನಿಧಿಸಬಲ್ಲ ಕ್ರೀಡಾ ಪ್ರತಿಭೆಗಳನ್ನು ಗುರುತಿಸುವ ಹೊಣೆ ಹೊಂದಿದೆ.

ಖೇಲೋ ಇಂಡಿಯಾ ವಿಶ್ವವಿದ್ಯಾನಿಲಯ ಕ್ರೀಡಾಕೂಟದ ಮೊದಲ ಆವೃತ್ತಿಯನ್ನು ಫೆಬ್ರವರಿ 2020 ರಲ್ಲಿ ಭುವನೇಶ್ವರದಲ್ಲಿ ನಡೆಸಲಾಯಿತು, ಮತ್ತು ಅಂಡರ್ -25 ವಯೋಮಾನದ ಒಟ್ಟು 3182 ಕ್ರೀಡಾಪಟುಗಳು, ಎಲ್ಲಾ ರಾಜ್ಯಗಳ 158 ವಿಶ್ವವಿದ್ಯಾನಿಲಯಗಳಿಂದ ಕಾಲೇಜುಗಳಿಂದ ಭಾಗವಹಿಸಿದ್ದರು.

ಈ ವರ್ಷ, ಯೋಗಾಸನ ಮತ್ತು ಮಲ್ಲಕಂಬವನ್ನು ಸಹ ಸ್ಪರ್ಧಾ ವಿಭಾಗಗಳಿಗೆ ಸೇರಿಸಲಾಗಿದೆ, ದೇಶದ ಶತಮಾನದಷ್ಟು ಹಳೆಯ ಕ್ರೀಡೆಗಳನ್ನು ಉಳಿಸಿ ಬೆಳೆಸುವ ಪ್ರಯತ್ನ ಇದಾಗಿದೆ.

Stay up to date on all the latest ಕ್ರೀಡೆ news
Poll
Second phase election for urban local bodies on May 29

ಪುದುಚೇರಿ ಮತ್ತು ಮಧ್ಯಪ್ರದೇಶದಲ್ಲಿ ಚುನಾಯಿತ ಸರ್ಕಾರಗಳು ಪತನಗೊಂಡ ಉದಾಹರಣೆ ನೋಡಿದರೆ, ಚುನಾವಣೆಗಳು ಕೇವಲ ಹಳೇಯ ಪ್ರಜಾಪ್ರಭುತ್ವದ ಸಂಕೇತಗಳಾಗಿವೆಯೇ?


Result
ಹೌದು
ಇಲ್ಲ
flipboard facebook twitter whatsapp