ಮೆಡ್ವೆಡೆವ್ ಮಣಿಸಿದ ಜೊಕೊವಿಕ್‌ಗೆ ಒಂಬತ್ತನೇ ಆಸ್ಟ್ರೇಲಿಯನ್ ಓಪನ್ ಪ್ರಶಸ್ತಿ ಗರಿ!

ಭಾನುವಾರ ಇಲ್ಲಿ ನಡೆದ ಪುರುಷರ ಸಿಂಗಲ್ಸ್ ಫೈನಲ್ ನಲ್ಲಿ ವಿಶ್ವದ ನಂ .1 ನೊವಾಕ್ ಜೊಕೊವಿಕ್ ಡೇನಿಯಲ್ ಮೆಡ್ವೆಡೆವ್ ಅವರನ್ನು ನೇರ ಸೆಟ್ ಗಳಿಂದ ಸೋಲಿಸಿದ ನಂತರ ಒಂಬತ್ತನೇ ಆಸ್ಟ್ರೇಲಿಯನ್ ಓಪನ್ ಪ್ರಶಸ್ತಿಯನ್ನು ಮುಡಿಗೇರಿಸಿಕೊಂಡಿದ್ದಾರೆ.

Published: 21st February 2021 08:08 PM  |   Last Updated: 21st February 2021 08:08 PM   |  A+A-


ನೊವಾಕ್ ಜೊಕೊವಿಕ್

Posted By : Raghavendra Adiga
Source : Online Desk

18 ನೇ ಗ್ರ್ಯಾಂಡ್ ಸ್ಲ್ಯಾಮ್ಸ್ ಪ್ರಶಸ್ತಿ ಗೆದ್ದ ವಿಶ್ವ ನಂ.೧ ಆಟಗಾರ

ಮೆಲ್ಬೋರ್ನ್: ಭಾನುವಾರ ಇಲ್ಲಿ ನಡೆದ ಪುರುಷರ ಸಿಂಗಲ್ಸ್ ಫೈನಲ್ ನಲ್ಲಿ ವಿಶ್ವದ ನಂ .1 ನೊವಾಕ್ ಜೊಕೊವಿಕ್ ಡೇನಿಯಲ್ ಮೆಡ್ವೆಡೆವ್ ಅವರನ್ನು ನೇರ ಸೆಟ್ ಗಳಿಂದ ಸೋಲಿಸಿದ ನಂತರ ಒಂಬತ್ತನೇ ಆಸ್ಟ್ರೇಲಿಯನ್ ಓಪನ್ ಪ್ರಶಸ್ತಿಯನ್ನು ಮುಡಿಗೇರಿಸಿಕೊಂಡಿದ್ದಾರೆ.

ಅಗ್ರ ಶ್ರೇಯಾಂಕಿತ ಆಟಗಾರ ಜೊಕೊವಿಕ್ ಮೆಡ್ವೆಡೆವ್ ಅವರನ್ನು 7-5, 6-2, 6-2 ಸೆಟ್‌ಗಳಿಂದ ಸೋಲಿಸಿ ತಮ್ಮ 18 ನೇ ಗ್ರ್ಯಾಂಡ್‌ಸ್ಲಾಮ್ ಪ್ರಶಸ್ತಿ ಗಳಿಸಿಕೊಂಡಿದ್ದಾರೆ.ಇದರೊಡನೆ ಪುರುಷರ ವಿಭಾಗದಲ್ಲಿ ರೋಜರ್ ಫೆಡರರ್ ಮತ್ತು ರಾಫೆಲ್ ನಡಾಲ್ ಅವರನ್ನು ಹಿಂದಿಕ್ಕಿ ಅತಿ ಹೆಚ್ಚು ಗ್ರ್ಯಾಂಡ್‌ಸ್ಲಾಮ್ ಪ್ರಶಸ್ತಿ ಗಳಿಸಿದ ಕೀರ್ತಿಗೆ ಭಾಜನರಾದರು. 

ಇದು ಜೊಕೊವಿಕ್ ಅವರ ಸತತ ಮೂರನೇ ಆಸ್ಟ್ರೇಲಿಯನ್ ಓಪನ್ ಕಿರೀಟವಾಗಿದೆ. ಮೆಡ್ವೆಡೆವ್ 20 ಪಂದ್ಯಗಳ ಗೆಲುವಿನ ಹಿನ್ನಲೆಯಲ್ಲಿ ಆಸ್ಟ್ರೇಲಿಯನ್ ಓಪನ್ ಫೈನಲ್ಸ್ ತಲುಪಿದ್ದರು.ಆದರೆ ಜೊಕೊವಿಕ್ ಒಡ್ಡಿದ ತೀವ್ರ ಒತ್ತಡಕ್ಕೆ ಮಣಿದೌ.
 

Stay up to date on all the latest ಕ್ರೀಡೆ news
Poll
Second phase election for urban local bodies on May 29

ಪುದುಚೇರಿ ಮತ್ತು ಮಧ್ಯಪ್ರದೇಶದಲ್ಲಿ ಚುನಾಯಿತ ಸರ್ಕಾರಗಳು ಪತನಗೊಂಡ ಉದಾಹರಣೆ ನೋಡಿದರೆ, ಚುನಾವಣೆಗಳು ಕೇವಲ ಹಳೇಯ ಪ್ರಜಾಪ್ರಭುತ್ವದ ಸಂಕೇತಗಳಾಗಿವೆಯೇ?


Result
ಹೌದು
ಇಲ್ಲ
flipboard facebook twitter whatsapp