
ಸಂಗ್ರಹ ಚಿತ್ರ
ನವದೆಹಲಿ: ಮಾಂಟೆನೆಗ್ರೊದ ಬುಡ್ವಾದಲ್ಲಿ ನಡೆದ 30 ನೇ ಆಡ್ರಿಯಾಟಿಕ್ ಪರ್ಲ್ ಪಂದ್ಯಾವಳಿಯಲ್ಲಿ ಭಾರತದ ಬಾಕ್ಸರ್ಗಳು ಅದ್ಭುತ ಪ್ರದರ್ಶನ ನೀಡಿ, ಎರಡು ಚಿನ್ನದ ಪದಕ ಗೆದ್ದಿದ್ದಾರೆ.
ವಿಂಕಾ (60) ಮತ್ತು ಟಿ ಸನಮಾಚು ಚಾನು (75) ದೇಶಕ್ಕೆ ಎರಡು ಚಿನ್ನದ ಪದಕ ತಂದುಕೊಟ್ಟಿದ್ದಾರೆ.ಅಲಾಫಿಯಾ ಪಠಾಣ್ (81 ಕೆಜಿಗಿಂತ ಹೆಚ್ಚು) ಪಂದ್ಯಾವಳಿಯಲ್ಲಿ ದೇಶಕ್ಕೆ ಮೊದಲ ಚಿನ್ನದ ಪದಕವನ್ನು ಕೊಡುಗೆ ಕೊಟ್ಟಿದ್ದರು.
ಭಾರತೀಯ ಬಾಕ್ಸರ್ಗಳು ಪಂದ್ಯಾವಳಿಯ ಹಿಂದಿನ ದಿನದಂದು ದೇಶಕ್ಕೆ ಎರಡು ಚಿನ್ನ, ಎರಡು ಬೆಳ್ಳಿ ಮತ್ತು ಮೂರು ಕಂಚಿನ ಪದಕಗಳನ್ನು ಪಡೆದಿದ್ದರು.
ರೋಹ್ಟಕ್ನ ವಿಂಕಾ ಅವರು ಫೈನಲ್ನಲ್ಲಿ 5–0ಯಿಂದ ಮೊಲ್ಡೊವಾದ ಕ್ರಿಸ್ಟಿನಾ ಕ್ರಿಪರ್ ಅವರನ್ನು ಮಣಿಸಿದರೆ 75 ಕೆಜಿ ವಿಭಾಗದಲ್ಲಿ ಮಣಿಪುರದ ಸನಾಮಚಾ ಚಾನು ಕೂಡ ಅದೇ ಅಂತರದೊಡನೆ ಭಾರತದವರೇ ಆದ ರಾಜ್ ಸಹೀಬಾ ಅವರನ್ನು ಸೋಲಿಸಿದ್ದಾರೆ.
48 ಕೆಜಿ ವಿಭಾಗದ ಫೈನಲ್ ಬೌಟ್ನಲ್ಲಿ ನಮ್ಮವರಾದ ಗೀತಿಕಾ ಉಜ್ಬೆಕಿಸ್ತಾನದ ಫರ್ಜೋನಾ ಎದುರು 1–4ರಿಂದ ಸೋಲು ಕಂಡು ರಜತ ಪದಕ ಗಳಿಸಿದ್ದರೆ , 57 ಕೆಜಿ ವಿಭಾಗದ ಸೆಮಿಫೈನಲ್ ಹಣಾಹಣಿಯಲ್ಲಿ 1–4ರಿಂದ ಮೊಂಟೆನೆಗ್ರೊದ ಬೋಜನಾ ಗೋಜ್ಕೊವಿಚ್ ಗೆ ಮಣಿದ ಪ್ರೀತಿ ಗೆ ಕಂಚಿನ ಪದಕ ದಕ್ಕಿದೆ. ಪುರುಷರ ವಿಭಾಗದ ಸೆಮಿಫೈನಲ್ ಬೌಟ್ಗಳಲ್ಲಿ ಪ್ರಿಯಾಂಶು ದಾಸ್ (49 ಕೆಜಿ) ಹಾಗೂ ಜುಗ್ನೂ (91+ ಕೆಜಿ) ಸಹ ಕಂಚಿನ ಪದಕ ಗಳಿಸಿದ್ದಾರೆ.