ಖ್ಯಾತ ಅಥ್ಲೆಟಿಕ್ ಸ್ಟಾರ್ ಹಿಮಾ ದಾಸ್ ಅಸ್ಸಾಂ ಪೊಲೀಸ್ ಡಿಎಸ್ಪಿ ಆಗಿ ನೇಮಕ

ಖ್ಯಾತ ಅಥ್ಲೆಟಿಕ್ ಸ್ಟಾರ್ ಹಿಮಾ ದಾಸ್ಅವರನ್ನು ಶುಕ್ರವಾರ ಮುಖ್ಯಮಂತ್ರಿ ಸರ್ಬಾನಂದ ಸೋನೊವಾಲ್ ಅವರ ಸಮ್ಮುಖದಲ್ಲಿ ಅಸ್ಸಾಂ ಪೊಲೀಸ್ ಉಪ ಅಧೀಕ್ಷಕರನ್ನಾಗಿ ನೇಮಕ ಮಾಡಲಾಗಿದೆ. 

Published: 26th February 2021 07:38 PM  |   Last Updated: 26th February 2021 07:38 PM   |  A+A-


ಹಿಮಾ ದಾಸ್

Posted By : Raghavendra Adiga
Source : PTI

ಗುವಾಹಟಿ: ಖ್ಯಾತ ಅಥ್ಲೆಟಿಕ್ ಸ್ಟಾರ್ ಹಿಮಾ ದಾಸ್ಅವರನ್ನು ಶುಕ್ರವಾರ ಮುಖ್ಯಮಂತ್ರಿ ಸರ್ಬಾನಂದ ಸೋನೊವಾಲ್ ಅವರ ಸಮ್ಮುಖದಲ್ಲಿ ಅಸ್ಸಾಂ ಪೊಲೀಸ್ ಉಪ ಅಧೀಕ್ಷಕರನ್ನಾಗಿ ನೇಮಕ ಮಾಡಲಾಗಿದೆ. ಈ ವೇಳೆ ಮಾತನಾಡಿದ ದಾಸ್ "ಈ ಕ್ಷಣವು ಬಾಲ್ಯದ ಕನಸು ನನಸಾದ ಸಮಯ" ಎಂದಿದ್ದಾರೆ.

ಮಾಜಿ ಕೇಂದ್ರ ಕ್ರೀಡಾ ಸಚಿವರಾದ ಸೋನೊವಾಲ್ ಅವರು ರಾಜ್ಯ ಸರ್ಕಾರದ ಉನ್ನತ ಕಾರ್ಯಕರ್ತರು ಮತ್ತು ಪೊಲೀಸ್ ಇಲಾಖೆ ಪರ ಪೊಲೀಸ್ ಮಹಾನಿರ್ದೇಶಕರು ಭಾಗವಹಿಸಿದ ಸಮಾರಂಭದಲ್ಲಿ ಹಿಮಾ ಅವರಿಗೆ ನೇಮಕಾತಿ ಪತ್ರವನ್ನು ಹಸ್ತಾಂತರಿಸಿದರು.

ಡಿಎಸ್ಪಿ ಆಗಿ ಸೇರ್ಪಡೆಗೊಂಡ ನಂತರ ಸಭೆಯನ್ನುದ್ದೇಶಿಸಿ ಮಾತನಾಡಿದ 21 ವರ್ಷದ ಹಿಮಾ, ತಾನು ಚಿಕ್ಕವಳಿದ್ದಾಗ ಪೊಲೀಸ್ ಅಧಿಕಾರಿಯಾಗಬೇಕೆಂಬ ಕನಸು ಕಂಡಿದ್ದಾಗಿ ಹೇಳಿಕೊಂಡರು."ಇಲ್ಲಿನ ಜನರಿಗೆ ನನ್ನ ಬಗ್ಗೆ ತಿಳಿದಿದೆ, ನಾನಿನ್ನೇನೂ ಹೇಳಲು ಹೋಗುವುದಿಲ್ಲ.ನನ್ನ ಆರಂಭಿಕ ಶಾಲಾ ದಿನಗಳಿಂದಲೂ, ನಾನು ಒಂದು ದಿನ ಪೊಲೀಸ್ ಅಧಿಕಾರಿಯಾಗಬೇಕೆಂಬ ಬಯಕೆಯನ್ನು ಹೊಂದಿದ್ದೆ ಮತ್ತು ನನ್ನ ತಾಯಿಯೂ ಅದನ್ನು ಬಯಸಿದರು. ನಾನು  ದುರ್ಗಾಪೂಜೆಯ ಸಮಯದಲ್ಲಿ ಆಟಿಕೆಯ ಬಂದೂಕು ಖರೀದಿಸುತ್ತಿದ್ದೆ, ನನ್ನ ತಾಯಿ ಅಸ್ಸಾಂ ಪೊಲೀಸ್ ಇಲಾಖೆಯಲ್ಲಿ ಸೇವೆ ಸಲ್ಲಿಸಿ ಸಮಾಜಕ್ಕೆ ಒಳ್ಳೆ ಕೆಲಸ ಮಾಡುವಂತೆ ಹೇಳುತ್ತಿದ್ದರು." ಹಿಮಾ ದಾಸ್ ತಮ್ಮ ಬಾಲ್ಯದ ದಿನಗಳನ್ನು ನೆನೆದರು.

ಏಷ್ಯನ್ ಗೇಮ್ಸ್ ಬೆಳ್ಳಿ ಪದಕ ವಿಜೇತೆಯಾದ ದಾಸ್ ರಾಜ್ಯ ಪೊಲೀಸ್ ಇಲಾಖೆಯಲ್ಲಿ ತಮ್ಮ ಸೇವೆಯೊಂದಿಗೆ ತಮ್ಮ ಕ್ರೀಡೆಯಲ್ಲಿ ಶ್ರೇಷ್ಠ ಪ್ರದರ್ಶನ ನೀಡಲು ನಿರಂತರವಾಗಿ ಪ್ರಯತ್ನಿಸುವುದಾಗಿ ಹೇಳಿದರು. "ನಾನು ಕ್ರೀಡೆಯಿಂದಾಗಿ ಎಲ್ಲವನ್ನೂ ಪಡೆದುಕೊಂಡಿದ್ದೇನೆ, ನಾನು ರಾಜ್ಯದ ಕ್ರೀಡೆಗಳ ಸುಧಾರಣೆಗೆ ಕೆಲಸ ಮಾಡಲು ಪ್ರಯತ್ನಿಸುತ್ತೇನೆ ಮತ್ತು ಹರಿಯಾಣದಂತೆಯೇ ಅಸ್ಸಾಂ ಅನ್ನು ದೇಶದ ಅತ್ಯುತ್ತಮಕ್ರೀಡಾ ಪ್ರದರ್ಶನ ನೀಡುವ ರಾಜ್ಯಗಳಲ್ಲಿ ಒಂದನ್ನಾಗಿ ಮಾಡಲು ಪ್ರಯತ್ನಿಸುತ್ತೇನೆ" ಎಂದು ಅವರು ಹೇಳಿದರು.

"ನಾನು ಅಸ್ಸಾಂ ಪೊಲೀಸ್ ಇಲಾಖೆಯಲ್ಲಿ ಶ್ರದ್ಧೆಯಿಂದ ಕೆಲಸ ಮಾಡುತ್ತೇನೆ ಆದರೆ ಕ್ರೀಡೆಯು ಎಂದಿಗೂ ನನಗೆ ಎರಡನೆಯ ವೃತ್ತಿಯಾಗಿರುವುದಿಲ್ಲ, " ಹಿಮಾ ದಾಸ್ ಹೇಳಿದ್ದಾರೆ.

ಡಿಎಸ್ಪಿಯಾಗಿ ಹಿಮಾ ನೇಮಕವು ಯುವಜನರನ್ನು ಕ್ರೀಡೆಯಲ್ಲಿ ಉತ್ತಮ ಸಾಧನೆ ಮಾಡಲು ಪ್ರೇರೇಪಿಸುತ್ತದೆ ಎಂದು ಸೋನೊವಾಲ್ ಹೇಳಿದರು.

2018 ರ ವಿಶ್ವ ಜೂನಿಯರ್ 400 ಮೀ ಚಾಂಪಿಯನ್ ಹಿಮಾ ದಾಸ್ ಎನ್ಐಎಸ್-ಪಟಿಯಾಲದಲ್ಲಿ ತರಬೇತಿ ಪಡೆಯುತ್ತಿದ್ದು, ಮುಂಬರುವ ಟೋಕಿಯೊ ಒಲಿಂಪಿಕ್ಸ್‌ಗೆ ಅರ್ಹತೆ ಪಡೆಯುವ ಗುರಿ ಹೊಂದಿದ್ದಾರೆ. ಗುರುವಾರ, ಅವರು ಮಹಿಳೆಯರ 200 ಮೀಟರ್ ಓಟದಲ್ಲಿ 23.31 ಸೆಕೆಂಡುಗಳ ಸಮಯವನ್ನು ಭಾರತೀಯ ಗ್ರ್ಯಾಂಡ್ ಪ್ರಿಕ್ಸ್ II ರಲ್ಲಿ ಗೆದ್ದರು. ಅವರು 2018 ರ ಏಷ್ಯನ್ ಕ್ರೀಡಾಕೂಟದಲ್ಲಿ ಮಹಿಳೆಯರ 400 ಮೀ. ಓಟದಲ್ಲಿ ಬೆಳ್ಳಿ ಪದಕ ಗೆದ್ದಿದ್ದರು.ಜಕಾರ್ತದಲ್ಲಿ ನಡೆದ ಚತುಷ್ಪಥ ಸ್ಪರ್ಧೆಯಲ್ಲಿ ಚಿನ್ನವಿಜೇತ ಮಹಿಳೆಯರ 400 ಮೀಟರ್ ರಿಲೇ ಮತ್ತು ಮಿಶ್ರ 400 ಮೀ ರಿಲೇ ಕ್ವಾರ್ಟೆಟ್‌ಗಳ ಭಾಗವಾಗಿದ್ದರು.

Stay up to date on all the latest ಕ್ರೀಡೆ news
Poll
Kumbh-Covid-19

ಚುನಾವಣಾ ಸಮಾವೇಶ, ಕುಂಭಮೇಳ, ಧಾರ್ಮಿಕ ಸಭೆಗಳು ದೇಶದಲ್ಲಿ ಕೋವಿಡ್-19 ಪರಿಸ್ಥಿತಿಯನ್ನು ಹದಗೆಡಿಸುತ್ತಿವೆಯೇ?


Result
ಹೌದು, ಅದು ನಿಜ.
ಇಲ್ಲ, ಖಂಡಿತ ಅಲ್ಲ.
flipboard facebook twitter whatsapp