ಐಗಾ ಸ್ವಾಟೆಕ್ ಗೆ ಅಡಿಲೇಡ್ ಇಂಟರ್ನ್ಯಾಷನಲ್ ಪ್ರಶಸ್ತಿ
ಫ್ರೆಂಚ್ ಓಪನ್ ಚಾಂಪಿಯನ್ ಐಗಾ ಸ್ವಾಟೆಕ್ ಶನಿವಾರ ನಡೆದ ಅಡಿಲೇಡ್ ಇಂಟರ್ ನ್ಯಾಷನಲ್ ಫೈನಲ್ನಲ್ಲಿ ಬೆಲಿಂಡ ಬೆನ್ಸಿಕ್ ವಿರುದ್ಧ ಜಯಗಳಿಸಿ ತಮ್ಮ ವೃತ್ತಿಬದುಕಿನ 2ನೇ ಪ್ರಶಸ್ತಿಯನ್ನು ಗಳಿಸಿಕೊಂಡಿದ್ದಾರೆ.
Published: 28th February 2021 01:54 PM | Last Updated: 28th February 2021 01:55 PM | A+A A-

ಐಗಾ ಸ್ವಾಟೆಕ್
ಅಡಿಲೇಡ್: ಫ್ರೆಂಚ್ ಓಪನ್ ಚಾಂಪಿಯನ್ ಐಗಾ ಸ್ವಾಟೆಕ್ ಶನಿವಾರ ನಡೆದ ಅಡಿಲೇಡ್ ಇಂಟರ್ ನ್ಯಾಷನಲ್ ಫೈನಲ್ನಲ್ಲಿ ಬೆಲಿಂಡ ಬೆನ್ಸಿಕ್ ವಿರುದ್ಧ ಜಯಗಳಿಸಿ ತಮ್ಮ ವೃತ್ತಿಬದುಕಿನ 2ನೇ ಪ್ರಶಸ್ತಿಯನ್ನು ಗಳಿಸಿಕೊಂಡಿದ್ದಾರೆ.
1992 ರಲ್ಲಿ ಮೋನಿಕಾ ಸೆಲೆಸ್ ನಂತರ ರೋಲ್ಯಾಂಡ್ ಗ್ಯಾರೊಸ್ ಪ್ರಶಸ್ತಿಯನ್ನು ಗೆದ್ದ ಅತ್ಯಂತ ಕಿರಿಯ ಮಹಿಳೆ ಎಂಬ ಹೆಗ್ಗಳಿಕೆಗೆ ಸ್ವಾಟೆಕ್ ಪಾತ್ರರಾದರು. ಸ್ವಾಟೆಕ್ ತನ್ನ ಎದುರಾಳಿ ಬೆನ್ಸಿಕ್ ಅವರನ್ನು 6-2, 6-2 ಸೆಟ್ಗಳಿಂದ ಮಣಿಸಿದ್ದರು.
ಕಳೆದ ವಾರ ರೋಲ್ಯಾಂಡ್ ಗ್ಯಾರೋಸ್ ನಲ್ಲಿ ನಡೆದ ಫೈನಲ್ ನಲ್ಲಿ ವಿಶ್ವ ಆರನೇ ಶ್ರೇಯಾಂಕಿತೆ ಸೋಫಿಯಾ ಕೆನಿನ್ ಅವರನ್ನು ಮಣಿಸಿದ್ದ ಸ್ವಾಟೆಕ್ ಫ್ರೆಂಚ್ ಓಪನ್ ಕಿರೀಟ ತಮ್ಮದಾಗಿಸಿಕೊಂಡಿದ್ದರು. ಮತ್ತು ಈ ಗೆಲುವಿನೊಂದಿಗೆ ಸ್ವಾಟೆಕ್ ರ್ಯಾಂಕಿಂಗ್ ನಲ್ಲಿ 15ನೇ ಸ್ಥಾನ ಗಳಿಸಲಿದ್ದಾರೆ.
Simply stunning
— wta (@WTA) February 27, 2021
A second career title for @iga_swiatek as she defeats Bencic 6-2, 6-2 to secure the @AdelaideTennis women's singles title! pic.twitter.com/wtiso8yrYr