ಡಕಾರ್ ರ್ಯಾಲಿ ವೇಳೆ ಅಪಘಾತ: ಕೋಮಾದಲ್ಲಿ ರೇಸರ್ ಸಿಎಸ್ ಸಂತೋಷ್!
ಸೌದಿ ಅರಬಿಯಾದಲ್ಲಿ ನಡೆಯುತ್ತಿರುವ ಡಕಾರ್ ರ್ಯಾಲಿ ವೇಳೆ ಅಪಘಾತದಿಂದ ಗಾಯಗೊಂಡಿರುವ ದೇಶದ ಹೆಸರಾಂತ ಮೋಟಾರ್ ಸೈಕಲ್ ರೇಸರ್ ಸಿಎಸ್ ಸಂತೋಷ್ ಅವರನ್ನು ರಿಯಾದ್ ಆಸ್ಪತ್ರೆಗೆ ಏರ್ ಲಿಫ್ಟ್ ಮಾಡಿದ ನಂತರ ಕೋಮಾ ಸ್ಥಿತಿಗೆ ಜಾರಿದ್ದಾರೆ.
Published: 07th January 2021 04:41 PM | Last Updated: 07th January 2021 04:41 PM | A+A A-

ಸಿಎಸ್ ಸಂತೋಷ್
ನವದೆಹಲಿ: ಸೌದಿ ಅರಬಿಯಾದಲ್ಲಿ ನಡೆಯುತ್ತಿರುವ ಡಕಾರ್ ರ್ಯಾಲಿ ವೇಳೆ ಅಪಘಾತದಿಂದ ಗಾಯಗೊಂಡಿರುವ ದೇಶದ ಹೆಸರಾಂತ ಮೋಟಾರ್ ಸೈಕಲ್ ರೇಸರ್ ಸಿಎಸ್ ಸಂತೋಷ್ ಅವರನ್ನು ರಿಯಾದ್ ಆಸ್ಪತ್ರೆಗೆ ಏರ್ ಲಿಫ್ಟ್ ಮಾಡಿದ ನಂತರ ಕೋಮಾ ಸ್ಥಿತಿಗೆ ಜಾರಿದ್ದಾರೆ.
ಹಿರೋ ಮೋಟೊ ಸ್ಫೋರ್ಟ್ಸ್ ಪ್ರತಿನಿಧಿಸುತ್ತಿದ್ದ 37 ವರ್ಷದ ಸಂತೋಷ್, ಬುಧವಾರ ಅಪಘಾತಕ್ಕೀಡಾಗಿದ್ದು, 24 ಗಂಟೆಗಳ ಕಾಲ ವೈದ್ಯಕೀಯ ನಿಗಾವಣೆಯಲ್ಲಿ ಇರಿಸಲಾಗಿದೆ.
2021ರ ಡಕಾರ್ ರ್ಯಾಲಿಯ ಇಂದಿನ ಹಂತದಲ್ಲಿ ವೇ ಪಾಯಿಂಟ್ 4ನ್ನು ದಾಟಿದ ನಂತರ ಅಘಘಾತ ನಡೆದಿದೆ. ಇದೊಂದು ದುರದೃಷ್ಟಕರ ಘಟನೆಯಾಗಿದ್ದು, ರಿಯಾದ್ ಆಸ್ಪತ್ರೆಗೆ ಅವರನ್ನು ಕರೆದೊಯ್ಯಲಾಗಿದೆ. ಬೇಗನೆ ಚೇತರಿಸಿಕೊಂಡು ನಮ್ಮನ್ನು ಸೇರಲಿ ಎಂದು ಹಾರೈಸುವುದಾಗಿ ಹಿರೋ ಮೋಟೋ ಸ್ಪೋರ್ಟ್ ಟ್ವೀಟ್ ಮಾಡಿದೆ.
ವರದಿಗಳ ಪ್ರಕಾರ, ರಿಯಾದ್ ಆಸ್ಪತ್ರೆಗೆ ಕರೆದೊಯ್ಯುವ ಮುನ್ನ ಅರೆವೈದ್ಯಕೀಯ ಸಿಬ್ಬಂದಿ ಬಂದಾಗ ಸಂತೋಷ್ ಗೆ ಪ್ರಜ್ಞೆ ಇತ್ತೆಂದು ಹೇಳಿವೆ. ಕಳೆದ ವರ್ಷ ಇಲ್ಲಿಯೇ ನಡೆದ ಡಕಾರ್ 2020 ಸಂದರ್ಭದಲ್ಲಿ ಹಿರೋ ಮೋಟೊ ಸ್ಫೋರ್ಟ್ ಸವಾರ ಪೌಲ್ ಗಾನ್ ಕಾಲ್ವೀಸ್ ಸಾವನ್ನಪ್ಪಿದ್ದರು.
2015ರಲ್ಲಿ ರೇಸ್ ಪೂರ್ಣಗೊಳಿಸಿದ ಮೊದಲ ಭಾರತೀಯ ಆಟಗಾರ ಎಂಬ ಖ್ಯಾತಿಗೆ ಪಾತ್ರರಾಗಿದ್ದ ಸಿಎಸ್ ಸಂತೋಷ್, ಮುಂದಿನ ಎರಡು ಆವೃತ್ತಿಗಳಲ್ಲಿ ಪ್ರಯತ್ನವನ್ನು ಪುನರಾವರ್ತಿಸಿದ್ದರು.