ವಿಶ್ವದ ಆಜಾನುಬಾಹು ಬಾಡಿ ಬಿಲ್ಡರ್ ನನ್ನೇ ಸೋಲಿಸಿದ ಭಾರತದ ರಾಹುಲ್ ಪಣಿಕ್ಕರ್, ವಿಡಿಯೋ!

70 ಕೆಜಿ ತೂಕದ ಭಾರತದ ರಾಹುಲ್ ಪಣಿಕ್ಕರ್ ಬರೋಬ್ಬರಿ 116 ಕೆಜಿ ತೂಕದ ವಿಶ್ವದ ಬಲಾಢ್ಯ ಬಾಡಿ ಬಿಲ್ಡರ್ ನನ್ನು ಆರ್ಮ್ ರಸ್ಲಿಂಗ್ ನಲ್ಲಿ ಸೋಲಿಸಿ ಐತಿಹಾಸಿಕ ಸಾಧನೆ ಮಾಡಿದ್ದಾರೆ.

Published: 09th January 2021 04:29 PM  |   Last Updated: 09th January 2021 04:40 PM   |  A+A-


Rahul Panicker-Larry Wheels

ರಾಹುಲ್ ಪಣಿಕ್ಕರ್-ಲ್ಯಾರಿ ವೀಲ್ಸ್

Posted By : Vishwanath S
Source : Online Desk

ದುಬೈ: 70 ಕೆಜಿ ತೂಕದ ಭಾರತದ ರಾಹುಲ್ ಪಣಿಕ್ಕರ್ ಬರೋಬ್ಬರಿ 116 ಕೆಜಿ ತೂಕದ ವಿಶ್ವದ ಬಲಾಢ್ಯ ಬಾಡಿ ಬಿಲ್ಡರ್ ನನ್ನು ಆರ್ಮ್ ರಸ್ಲಿಂಗ್ ನಲ್ಲಿ ಸೋಲಿಸಿ ಐತಿಹಾಸಿಕ ಸಾಧನೆ ಮಾಡಿದ್ದಾರೆ. 

ದುಬೈನಲ್ಲಿ ನಡೆದ ಆರ್ಮ್ ರಸ್ಲಿಂಗ್ ಚಾಂಪಿಯನ್ ಶಿಪ್ ನಲ್ಲಿ ರಾಹುಲ್ ಪಣಿಕ್ಕರ್, ವಿಶ್ವದ ಬಲಾಢ್ಯ ಬಾಡಿ ಬಿಲ್ಡರ್ ಲ್ಯಾರಿ ವೀಲ್ಸ್ ರನ್ನು ಸೋಲಿಸಿದ್ದಾರೆ. 

ಮೊದಲ ಎರಡು ಸುತ್ತುಗಳಲ್ಲಿ ಸೋಲು ಕಂಡಿದ್ದ ಪಣಿಕ್ಕರ್ ದೃತಿಗೆಡದೆ ಮುಂದಿನ ಮೂರು ಸುತ್ತುಗಳಲ್ಲೂ ಗೆದ್ದು ಲ್ಯಾರಿ ವೀಲ್ಸ್ ಗೆ ಆಘಾತ ನೀಡಿದರು. 

ಗಿಡುಗನ ಮುಂದೆ ಗುಬ್ಬಿಯಂತೆ ಕಾಣುವ ರಾಹುಲ್ ಪಣಿಕ್ಕರ್ ಮೊದಲ ಎರಡು ಸುತ್ತುಗಳಲ್ಲಿ ಸೋತಾಗ ಅಲ್ಲಿ ನೆರದಿದ್ದವರಿಗೆ ಅಚ್ಚರಿ ಎನಿಸಲಿಲ್ಲ. ಆದರೆ ಮೂರನೇ ಪಂದ್ಯದಲ್ಲಿ ಗೆದ್ದ ಬಳಿಕ ಅಲ್ಲಿದ್ದವರು ಆಶ್ಚರ್ಯದ ಕಣ್ಣುಗಳಿಂದ ನೋಡಲು ಆರಂಭಿಸಿದರು. 

ನಾಲ್ಕನೇ ಸುತ್ತಿನಲ್ಲೂ ರಾಹುಲ್ ಗೆಲುವು ಸಾಧಿಸುತ್ತಿದ್ದಂತೆ ಅಲ್ಲಿದ್ದವರು ಬಾಯಿ ಮೇಲೆ ಕೈಯಿಟ್ಟರು. ಇನ್ನ ಕೊನೆಯ ಹಾಗೂ ನಿರ್ಣಾಯಕ ಸುತ್ತಿನಲ್ಲಿ ಮತ್ತೇ ರಾಹುಲ್ ಲ್ಯಾರಿಯನ್ನು ಮಣಿಸಿ ಎಲ್ಲರೂ ಉಬ್ಬೆರುವಂತೆ ಮಾಡಿದರು. ಈ ವಿಡಿಯೋ ಇದೀಗ ವೈರಲ್ ಆಗಿದೆ. 
 

Stay up to date on all the latest ಕ್ರೀಡೆ news
Poll
Narendra Singh Tomar

ಕೃಷಿ ಕಾನೂನು ಸಂಬಂಧ ರೈತರು ಮತ್ತು ಕೇಂದ್ರದ ನಡುವಣ ಬಿಕ್ಕಟ್ಟಿಗೆ ಹೊರಗಿನ ಶಕ್ತಿಗಳು ಕಾರಣ ಎಂದು ಕೃಷಿ ಸಚಿವ ನರೇಂದ್ರ ಸಿಂಗ್ ತೋಮರ್‌ ಹೇಳಿದ್ದಾರೆ.


Result
ಹೌದು
ಇಲ್ಲ
flipboard facebook twitter whatsapp