ಪಂದ್ಯದಿಂದ ಹಿಂದೆ ಸರಿದ ಶ್ರೀಕಾಂತ್, ಸೈನಾಗೆ ಸೋಲಿನ ಕಹಿ: ಥಾಯ್ಲೆಂಡ್ ಓಪನ್ ನಲ್ಲಿ ಭಾರತದ ಸವಾಲು ಅಂತ್ಯ
ಕಿಡಂಬಿ ಶ್ರೀಕಾಂತ್ ಗಾಯದ ಸಮಸ್ಯೆಯಿಂದ ಪಂದ್ಯಾವಳಿಯಿಂದ ದೂರ ಸರಿದರೆ ಸೈನಾ ನೆಹ್ವಾಲ್ ಮತ್ತು ಭಾರತೀಯ ಡಬಲ್ಸ್ ತಂಡವು ಆಯಾ ಎದುರಾಳಿಗಳಿಂದ ಸೋಲುಂಡ ಪರಿಣಮ ಥಾಯ್ಲೆಂಡ್ ಓಪನ್ ನಲ್ಲಿ ಭಾರತದ ಸವಾಲು ಕೊನೆಗೊಂಡಿದೆ.
Published: 14th January 2021 09:06 PM | Last Updated: 14th January 2021 09:06 PM | A+A A-

ಸೈನಾ ನೆಹ್ವಾಲ್
ಬ್ಯಾಂಕಾಕ್: ಕಿಡಂಬಿ ಶ್ರೀಕಾಂತ್ ಗಾಯದ ಸಮಸ್ಯೆಯಿಂದ ಪಂದ್ಯಾವಳಿಯಿಂದ ದೂರ ಸರಿದರೆ ಸೈನಾ ನೆಹ್ವಾಲ್ಮತ್ತು ಭಾರತೀಯ ಡಬಲ್ಸ್ ತಂಡವು ಆಯಾ ಎದುರಾಳಿಗಳಿಂದ ಸೋಲುಂಡ ಪರಿಣಮ ಥಾಯ್ಲೆಂಡ್ ಓಪನ್ ನಲ್ಲಿ ಭಾರತದ ಸವಾಲು ಕೊನೆಗೊಂಡಿದೆ.
16 ನೇ ಸುತ್ತಿನ ಮಹಿಳಾ ಸಿಂಗಲ್ಸ್ ಸುತ್ತಿನಲ್ಲಿ ಸ್ಥಳೀಯ ಕ್ರೀಡಾತಾರೆ ಬುಸಾನನ್ ಒಂಗ್ಬಮ್ರಂಗ್ಫಾನ್ ಎದುರು ಸೈನಾ 23-21, 14-21, 16-21ರಿಂದ ಸೋಲು ಕಂಡಿದ್ದಾರೆ. ಶ್ರೀಕಾಂತ್ ತಮ್ಮ ಎಂಟನೇ ಶ್ರೇಯಾಂಕದ ಮಲೇಷಿಯಾದ ಎದುರಾಳಿ ಲೀ ಝೀ ಜಾ ಅವರೆದುರು ಹೋರಾಟ ನಡೆಸಿದ್ದಾಗಲೇ ಬಲತೊಡೆಯ ಸ್ನಾಯು ಸೆಳೆತದ ಕಾರಣ ಪಂದ್ಯಾವಳಿಯಿಂದ ಹಿಂದೆ ಸರಿದರು.
ಭಾರತದ ಪುರುಷರ ಡಬಲ್ಸ್ ಜೋಡಿ ಸಾತ್ವಿಕ್ ಸಾಯಿರಾಜ್ ರಾಂಕಿರೆಡ್ಡಿ ಮತ್ತು ಚಿರಾಗ್ ಶೆಟ್ಟಿ ಇಂಡೋನೇಷ್ಯಾದ ಎದುರಾಳಿಗಳಾದ ಮೊಹಮ್ಮದ್ ಅಹ್ಸಾನ್ ಮತ್ತು ಹೆಂಡ್ರಾ ಸೆಟಿಯವಾನ್ ವಿರುದ್ಧ 21-19, 21-17ರಿಂದ ಎರಡನೇ ಸುತ್ತಿನಲ್ಲಿ ಸೋತು ನಿರ್ಗಮಿಸಿದ್ದಾರೆ.
ಅಲ್ಲದೆ ಸಾತ್ವಿಕ್ ಮತ್ತು ಅವರ ಮಿಶ್ರ ಡಬಲ್ಸ್ ಜತೆಗಾರ್ತಿಯಾಗಿದ್ದ ಅಶ್ವಿನಿ ಪೊನ್ನಪ್ಪ ಹಾಂಗ್ ಕಾಂಗ್ ನ ಚಂಗ್ ತಾಕ್ ಚಿಂಗ್ ಮತ್ತು ಎನ್ಜಿ ವಿಂಗ್ ಯುಂಗ್ ಜೋಡಿಯ ಎದುರು 12-21, 17-21ರ ನೇರ ಸೆಟ್ ಗಳಿಂದ ಮಣಿದು ನಿರ್ಗಮಿಸಿದ್ದಾರೆ.
ಮುಂದಿನ ವಾರ ನಡೆಯಲಿರುವ ಟೊಯೋಟಾ ಥಾಯ್ಲೆಂಡ್ ಓಪನ್ ಸೂಪರ್ 1000 ಈವೆಂಟ್ನಲ್ಲಿ ಭಾರತೀಯ ಶಟ್ಲರ್ಗಳು ಉತ್ತಮ ಪ್ರದರ್ಶನ ನೀಡುವ ನಿರೀಕ್ಷೆ ಇದೆ.