ಆಸ್ಟ್ರೇಲಿಯನ್ ಓಪನ್: 47 ಆಟಗಾರರಿಗೆ ಕ್ವಾರಂಟೈನ್!
ಆಸ್ಟ್ರೇಲಿಯನ್ ಓಪನ್ ಟೆನಿಸ್ ಟೂರ್ನಿಗೆ ಆಯೋಜಿಸಲಾಗಿದ್ದ ವಿಶೇಷ ವಿಮಾನದಲ್ಲಿ ಆಗಮಿಸಿದ್ದ ಮೂವರಿಗೆ ಕೊರೊನಾ ಸೋಂಕು ಇರುವುದು ದೃಢಪಟ್ಟ ಹಿನ್ನೆಲೆಯಲ್ಲಿ ವಿಮಾನದಲ್ಲಿದ್ದ 47 ಆಟಗಾರರನ್ನು ಕ್ವಾರಂಟೈನ್ ಗೆ ಒಳಪಡಿಸಲಾಗಿದೆ.
Published: 16th January 2021 07:10 PM | Last Updated: 16th January 2021 07:18 PM | A+A A-

ಆಸ್ಟ್ರೇಲಿಯನ್ ಓಪನ್: 47 ಆಟಗಾರರಿಗೆ ಕ್ವಾರಂಟೈನ್!
ಮೆಲ್ಬೋರ್ನ್: ಆಸ್ಟ್ರೇಲಿಯನ್ ಓಪನ್ ಟೆನಿಸ್ ಟೂರ್ನಿಗೆ ಆಯೋಜಿಸಲಾಗಿದ್ದ ವಿಶೇಷ ವಿಮಾನದಲ್ಲಿ ಆಗಮಿಸಿದ್ದ ಮೂವರಿಗೆ ಕೊರೊನಾ ಸೋಂಕು ಇರುವುದು ದೃಢಪಟ್ಟ ಹಿನ್ನೆಲೆಯಲ್ಲಿ ವಿಮಾನದಲ್ಲಿದ್ದ 47 ಆಟಗಾರರನ್ನು ಕ್ವಾರಂಟೈನ್ ಗೆ ಒಳಪಡಿಸಲಾಗಿದೆ.
ಲಾಸ್ ಏಂಜಲೀಸ್ ಮತ್ತು ಅಬುಧಾಬಿಯಿಂದ ಮೆಲ್ಬೋರ್ನ್ ಗೆ 1200 ಆಟಗಾರರನ್ನು ಕರೆತರಲು 15 ವಿಶೇಷ ವಿಮಾನಗಳನ್ನು ಆಯೋಜಿಸಲಾಗಿತ್ತು. ಇದರ ಪೈಕಿ ಎರಡು ವಿಮಾನದಲ್ಲಿ ಆಟಗಾರರಲ್ಲದ ಮೂವರಿಗೆ ಮೂರು ಬಾರಿ ನಡೆಸಿದ ಪರೀಕ್ಷೆಯಲ್ಲಿ ಕೊರೊನಾ ಪಾಸಿಟಿವ್ ಪತ್ತೆಯಾಗಿದೆ.
ಮೂವರಿಗೆ ಕೊರೊನಾ ಸೋಂಕು ಪತ್ತೆಯಾದ ಹಿನ್ನೆಲೆಯಲ್ಲಿ 2 ವಿಮಾನದಲ್ಲಿದ್ದ 47 ಆಟಗಾರರಿಗೆ 14 ದಿನದ ಕ್ವಾರಂಟೈನ್ ವಿಧಿಸಲಾಗಿದೆ. ಒಂದು ವಿಮಾನದಲ್ಲಿ 24 ಮತ್ತೊಂದು ವಿಮಾನದಲ್ಲಿ 22 ಆಟಗಾರರಿದ್ದರು.
ಕ್ವಾರಂಟೈನ್ ಅವಧಿಯಲ್ಲಿ ಆಟಗಾರರು ಪ್ರತಿದಿನ 5 ಗಂಟೆ ಅಭ್ಯಾಸ ಮಾಡಲು ಅವಕಾಶ ನೀಡಲಾಗಿದೆ. ಫೆಬ್ರವರಿ 8ರಿಂದ ಪ್ರತಿಷ್ಠಿತ ಗ್ರ್ಯಾನ್ ಸ್ಲಾಮ್ ಟೂರ್ನಿ ಆರಂಭಗೊಳ್ಳಲಿದೆ.