ಬೆಂಗಳೂರಿನ ಪ್ಯಾರಾ ಅಥ್ಲೀಟ್ ವೆಂಕಟೇಶ್ ಸೇರಿ 7 ಕ್ರೀಡಾಸಾಧಕರಿಗೆ ಪದ್ಮಶ್ರೀ ಪುರಸ್ಕಾರ

ದೇಶದ 72 ನೇ ಗಣರಾಜ್ಯೋತ್ಸವದ ಮುನ್ನಾದಿನದಂದು ಭಾರತ ಸರ್ಕಾರವು ಪ್ರತಿಷ್ಠಿತ ಪದ್ಮ ಪ್ರಶಸ್ತಿಗಳನ್ನು ಘೋಷಣೆ ಮಾಡಿದ್ದು ಹಿರಿಯ ಟೇಬಲ್ ಟೆನಿಸ್ ಆಟಗಾರ್ತಿ ಮೌಮಾ ದಾಸ್, ಬೆಂಗಳೂರಿನ ಪ್ಯಾರಾ ಅಥ್ಲೀಟ್ ಕೆವಿ ವೆಂಕಟೇಶ್ ಸೇರಿ ಕ್ರೀಡಾ ಕ್ಷೇತ್ರದ 7 ಮಂದಿಗೆ ಪದ್ಮಶ್ರೀ ಪ್ರಶಸ್ತಿ ಲಭಿಸಿದೆ.

Published: 26th January 2021 10:00 AM  |   Last Updated: 26th January 2021 10:03 AM   |  A+A-


ಪ್ಯಾರಾ ಅಥ್ಲಿಟ್ ವೆಂಕಟೇಶ್ ಹಾಗೂ ಟಿಟಿ ಆಟಹಾರ್ತಿ ಮೌಮಾ ದಾಸ್

Posted By : Raghavendra Adiga
Source : PTI

ನವದೆಹಲಿ: ದೇಶದ 72 ನೇ ಗಣರಾಜ್ಯೋತ್ಸವದ ಮುನ್ನಾದಿನದಂದು ಭಾರತ ಸರ್ಕಾರವು ಪ್ರತಿಷ್ಠಿತ ಪದ್ಮ ಪ್ರಶಸ್ತಿಗಳನ್ನು ಘೋಷಣೆ ಮಾಡಿದ್ದು ಹಿರಿಯ ಟೇಬಲ್ ಟೆನಿಸ್ ಆಟಗಾರ್ತಿ ಮೌಮಾ ದಾಸ್, ಬೆಂಗಳೂರಿನ ಪ್ಯಾರಾ ಅಥ್ಲೀಟ್ ಕೆವಿ ವೆಂಕಟೇಶ್ ಸೇರಿ ಕ್ರೀಡಾ ಕ್ಷೇತ್ರದ 7 ಮಂದಿಗೆ ಪದ್ಮಶ್ರೀ ಪ್ರಶಸ್ತಿ ಲಭಿಸಿದೆ.

ಮೌಮಾ ದಾಸ್, ಓಎಂ ನಂಬಿಯಾರ್ ಎಂದೇ ಖ್ಯಾತರಾದ ಶ್ರೇಷ್ಠ ಅಥ್ಲೆಟಿಕ್ಸ್ ತರಬೇತುದಾರ ಮಾಧವನ್ ನಂಬಿಯಾರ್, ಭಾರತದ ಮಹಿಳಾ ಬಾಸ್ಕೆಟ್ ಬಾಲ್ ತಂಡದ ಮಾಜಿ ನಾಯಕಿ ಪಿ. ಅನಿತಾ, ಓಟಗಾರ್ತಿ ಸುಧಾ ಸಿಂಗ್, ಮಾಜಿ ಕುಸ್ತಿ ಪಟು ವೀರೇಂದರ್ ಸಿಂಗ್, ಬೆಂಗಳೂರಿನ ಪ್ಯಾರಾ ಅಥ್ಲೀಟ್ ಕೆವಿ ವೆಂಕಟೇಶ್, ಪರ್ವತಾರೋಹಿ ಅಂಶು ಜೆಮ್ಸೆನ್ಪಾ ಅವರುಗಳು ಕ್ರೀಡಾ ವಿಭಾಗದಲ್ಲಿ ದೇಶದ ನಾಲ್ಕನೇ ಅತಿ ದೊಡ್ಡ ನಾಗರಿಕ ಪ್ರಶಸ್ತಿ ಗಳಿಸಿದ್ದಾರೆ.

 Anitha Pauldurai, 35, has represented India in basketball for 18 years (2000 to 2017), and has been the captain as well. (Photo Credit: Twitter)

ಪ್ರತಿ ವರ್ಷ, ಗಣರಾಜ್ಯೋತ್ಸವದ ಮುನ್ನಾದಿನದಂದು ಪ್ರಶಸ್ತಿ ಪುರಸ್ಕೃತರನ್ನು ಘೋಷಿಸಲಾಗುತ್ತದೆ ಪದ್ಮ ಪ್ರಶಸ್ತಿ ಪುರಸ್ಕೃತರನ್ನು ಭಾರತದ ರಾಷ್ಟ್ರಪತಿಗಳು ಸನ್ಮಾನಿಸುತ್ತಾರೆ.

2013 ರಲ್ಲಿ ಅರ್ಜುನ ಪ್ರಶಸ್ತಿ ಪಡೆದ ಮೌಮಾ,ಅಚಂತ ಶರತ್‌ ಕಮಲ್‌ ನಂತರ ಪದ್ಮಶ್ರೀ ಪ್ರಶಸ್ತಿ ಗಳಿಸಿಕೊಂಡ ಎರಡನೇ ಟೇಬಲ್ ಟೆನಿಸ್ ಆಟಗಾರ್ತಿ ಎಂಬ ಹೆಗ್ಗಳಿಕೆಗೆ ಪಾತ್ರರಾದರು. ಶರತ್ ಅವರು 2019 ರಲ್ಲಿ ಈ ಗೌರವಕ್ಕೆ ಭಾಜನವಾಗಿದ್ದರು.

"ನಾನು ಡಿಸೆಂಬರ್ 2019 ರಲ್ಲಿ ತಾಯಿಯಾಗಿದ್ದೆ ಮತ್ತುಕೋವಿಡ್  ಸಾಂಕ್ರಾಮಿಕದ ಕಾರಣ ಆ ನಂತರ ಆಡಲು ಸಾಧ್ಯವಾಗಿಲ್ಲ.ಈ ಗೌರವವು ನನ್ನ ಪುನರಾಗಮನಕ್ಕೆ ಇನ್ನಷ್ಟು ಉತ್ಸಾಹ ಮೂಡಿಸಿದೆ. ದೇಶಕ್ಕಾಗಿ ಹೆಚ್ಚಿನ ಪ್ರಶಸ್ತಿಗಳನ್ನು ಗೆಲ್ಲಲು ನನಗೆ ಪ್ರೇರಣೆ ನೀಡುತ್ತದೆ" ಎಂದು ಕಾಮನ್ವೆಲ್ತ್ ಮತ್ತು ದಕ್ಷಿಣ ಏಷ್ಯಾ ಪ್ರಶಸ್ತಿ ವಿಜೇತೆ  ಮೌಮಾ ಹೇಳಿದ್ದಾರೆ.

 Sudha Singh, 36, holds the national record in 3,000 m steeplechase and is a gold medallist at the 2010 Guangzhou Asian Games. (Photo Credit: PTI)

2012 ರಲ್ಲಿ ಅರ್ಜುನ ಪ್ರಶಸ್ತಿ ಪಡೆದ ಸುಧಾ, ಪ್ರದ್ಮ ಪ್ರಶಸ್ತಿ ಪಡೆದವರ ಪೈಕಿ ಎರಡನೇ ಅತಿ ಮುಖ್ಯ ಕ್ರೀಡಾತಾರೆ ಎನಿಸಿದ್ದಾರೆ.3000 ಮೀಟರ್ ಸ್ಟೀಪಲ್‌ಚೇಸ್ ಸ್ಪರ್ಧೆಯಲ್ಲಿ ಅವರು ಭಾರತೀಯ ಒಲಿಂಪಿಕ್ ಕ್ರೀಡಾಪಟುವಾಗಿ ಕಾಣಿಸಿಕೊಂಡಿದ್ದರು. ಈ ಪಂದ್ಯಾವಳಿಯಲ್ಲಿ ರಾಷ್ಟ್ರೀಯ ದಾಖಲೆ ಹೊಂದಿರುವ ಅವರು 2005 ರಿಂದ ಅಂತರರಾಷ್ಟ್ರೀಯ ಸ್ಪರ್ಧೆಗಳಲ್ಲಿ ಭಾರತವನ್ನು ಪ್ರತಿನಿಧಿಸುತ್ತಾ ಬಂದಿದ್ದಾರೆ.

ಉಷಾ ತರಬೇತುದಾರರಾಗಿ ಹೆಸರುವಾಸಿಯಾದ ನಂಬಿಯಾರ್ ಅವರು 1985 ರ ದ್ರೋಣಾಚಾರ್ಯ ಪ್ರಶಸ್ತಿ ಪುರಸ್ಕೃತರಾಗಿದ್ದಾರೆ.

 O.M. Nambiar, 89, is the famous coach of legendary woman athlete P.T. Usha. In 1985, Nambiar was honoured with the Dronacharya Award, the highest accolade for coaches. (Photo Credit: Facebook)

1992 ರಲ್ಲಿ ಕೊಲಂಬಿಯಾದ ಕ್ಯಾಲಿಯಲ್ಲಿ ನಡೆದ ವಿಶ್ವ ಕುಸ್ತಿ ಚಾಂಪಿಯನ್‌ಶಿಪ್‌ನಲ್ಲಿ ವೀರೇಂದರ್ ಕಂಚಿನ ಪದಕ ಗೆದ್ದ ಕುಸ್ತಿಪಟುವಾಗಿದ್ದಾರೆ. ಅವರು 1995 ರಲ್ಲಿ ಕಾಮನ್ವೆಲ್ತ್ ಚಾಂಪಿಯನ್‌ಶಿಪ್‌ನಲ್ಲಿ (ಹಿರಿಯ, 74 ಕೆಜಿ, ಫ್ರೀಸ್ಟೈಲ್). ಬೆಳ್ಳಿ ಪದಕವನ್ನು ಗೆದ್ದು ಸಾಧನೆ ಮಾಡಿದ್ದರು. 

 Virender Singh, 34, has won three gold medals and bronze at the Deaflympics. (Photo Credit: Twitter)

2005 ರ ವಿಶ್ವ ಕುಬ್ಜರ ಕ್ರೀಡಾಕೂಟದಲ್ಲಿ ಅತಿ ಹೆಚ್ಚು ಪದಕಗಳನ್ನು ಗೆದ್ದಿದ್ದ ವೆಂಕಟೇಶ್ ಒಬ್ಬ ಪ್ಯಾರಾ ಕ್ರೀಡಾಪಟು. 1994 ರಲ್ಲಿ ಜರ್ಮನಿಯ ಬರ್ಲಿನ್‌ನಲ್ಲಿ ನಡೆದ ಮೊದಲ ಅಂತರರಾಷ್ಟ್ರೀಯ ಪ್ಯಾರಾಲಿಂಪಿಕ್ ಸಮಿತಿ (ಐಪಿಸಿ) ಅಥ್ಲೆಟಿಕ್ಸ್ ವಿಶ್ವ ಚಾಂಪಿಯನ್‌ಶಿಪ್‌ನಲ್ಲಿ ಅವರು ಭಾರತವನ್ನು ಪ್ರತಿನಿಧಿಸಿದರು.

ಅಂಶು ಜೆಮ್ಸೆನ್ಪಾ ಒಬ್ಬ ಭಾರತೀಯ ಪರ್ವತಾರೋಹಿ ಮತ್ತು ಎರಡು ಬಾರಿ ಎವರೆಸ್ಟ್ ಪರ್ವತವನ್ನು ಅಳೆದ ವಿಶ್ವದ ಮೊದಲ ಮಹಿಳೆ ಎನಿಸಿದ್ದಾರೆ.

 Anshu Jamsenpa, 41, scaled Mount Everest five times as well as reaching the summit twice in a single season -- within five days -- in May 2011. (Photo Credit: Facebook)

ಇನ್ನು ಈ ವರ್ಷ ಯಾವುದೇ ಕ್ರೀಡಾಪಟುಗಳಿಗೆ ಪದ್ಮವಿಭೂಷಣ ಮತ್ತು ಪದ್ಮಭೂಷಣ ಗೌರವ ನೀಡಿಲ್ಲ.
 

Stay up to date on all the latest ಕ್ರೀಡೆ news
Poll
Second phase election for urban local bodies on May 29

ಪುದುಚೇರಿ ಮತ್ತು ಮಧ್ಯಪ್ರದೇಶದಲ್ಲಿ ಚುನಾಯಿತ ಸರ್ಕಾರಗಳು ಪತನಗೊಂಡ ಉದಾಹರಣೆ ನೋಡಿದರೆ, ಚುನಾವಣೆಗಳು ಕೇವಲ ಹಳೇಯ ಪ್ರಜಾಪ್ರಭುತ್ವದ ಸಂಕೇತಗಳಾಗಿವೆಯೇ?


Result
ಹೌದು
ಇಲ್ಲ
flipboard facebook twitter whatsapp