ವಿಂಬಲ್ಡನ್: 7 ವರ್ಷಗಳ ಕನಸು ನನಸು; ಮೊದಲ ಬಾರಿಗೆ ಅಂಗಳದಲ್ಲಿ ಒಂದಾದ 'ಶರಣ್, ಸಮಂತಾ' ಟೆನ್ನಿಸ್ ತಾರಾ ಜೋಡಿ!

ಭಾರತದ ಟೆನ್ನಿಸ್ ತಾರೆ ದಿವಿಜ್ ಶರಣ್ ಅವರ 7 ವರ್ಷಗಳ ಕನಸು ಕೊನೆಗೂ ನನಸಾಗಿದ್ದು, ತಮ್ಮ ಪತ್ನಿ ಮತ್ತು ಟೆನ್ನಿಸ್ ಆಟಗಾರ್ತಿ ಸಮಂತಾ ಮರ್ರೆ ಅವರ ಜೊತೆಗೂಡಿ ಮಿಶ್ರ ಡಬಲ್ಸ್ ಪಂದ್ಯದಲ್ಲಿ ಆಡಿ ಜಯಗಳಿಸಿದ್ದಾರೆ.
ಶರಣ್, ಸಮಂತಾ ಜೋಡಿ
ಶರಣ್, ಸಮಂತಾ ಜೋಡಿ

ಲಂಡನ್: ಭಾರತದ ಟೆನ್ನಿಸ್ ತಾರೆ ದಿವಿಜ್ ಶರಣ್ ಅವರ 7 ವರ್ಷಗಳ ಕನಸು ಕೊನೆಗೂ ನನಸಾಗಿದ್ದು, ತಮ್ಮ ಪತ್ನಿ ಮತ್ತು ಟೆನ್ನಿಸ್ ಆಟಗಾರ್ತಿ ಸಮಂತಾ ಮರ್ರೆ ಅವರ ಜೊತೆಗೂಡಿ ಮಿಶ್ರ ಡಬಲ್ಸ್ ಪಂದ್ಯದಲ್ಲಿ ಆಡಿ ಜಯಗಳಿಸಿದ್ದಾರೆ.

ಹೌದು.. ವಿಂಬಲ್ಡನ್‌ ಟೂರ್ನಿಯ ಮಿಶ್ರ ಡಬಲ್ಸ್ ವಿಭಾಗದಲ್ಲಿ ದಿವಿಜ್ ಶರಣ್ ಮತ್ತು ಅವರ ಪತ್ನಿ ಸಮಂತಾ ಮುರ್ರೆ ಶರಣ್ ಜೋಡಿ ಶುಕ್ರವಾರ ತಮ್ಮ ಮೊದಲ ಸುತ್ತಿನ ಮಿಶ್ರ ಡಬಲ್ಸ್ ಪಂದ್ಯವನ್ನು ಗೆದ್ದರು. ಈ ಪಂದ್ಯದಲ್ಲಿ ಶರಣ್ (35 ವರ್ಷ) ಮತ್ತು ಮರ್ರೆ ಶರಣ್ (33 ವರ್ಷ) ಉರುಗ್ವೆಯ ಏರಿಯಲ್ ಬೆಹರ್ ಮತ್ತು ಕಝಕ್ ಗಲಿನಾ ವೊಸ್ಕೊಬೊವಾ ಅವರನ್ನು 6-3, 5-7, 6-4 ಸೆಟ್‌ಗಳಿಂದ ಸೋಲಿಸಿದರು.

ಅತ್ಯಂತ ರೋಮಾಂಚನಕಾರಿಯಾಗಿ ನಡೆದ ಈ ಪಂದ್ಯದಲ್ಲಿ ಬಾಲ್ ಗರ್ಲ್ ಗೆ ಗಾಯವಾಯಿತು. ಹೀಗಾಗಿ ಪಂದ್ಯ ಕೆಲ ಸಮಯಗಳ ಸ್ಥಗಿತವಾಗಿತ್ತು. ಮೂರು ಸೆಟ್ ಗಳಲ್ಲಿ ಮುಕ್ತಾಯಗೊಂಡ ಪಂದ್ಯದಲ್ಲಿ ಶರಣ್, ಸಮಂತಾ ಜೋಡಿ ಪ್ರಾಬಲ್ಯ ಮೆರೆದರು. ಪರಸ್ಪರ ಉತ್ತಮ ನಿರ್ವಹಣೆಯೊಂದಿಗೆ ಈ ಜೋಡಿ ಎದುರಾಳಿಗಳ ಮೇಲೆ ಒತ್ತಡ ಹೇರಿದರು. ಅಂತಿಮವಾಗಿ 6-3, 5-7, 6-4 ನೇರ ಸೆಟ್ ಗಳ ಅಂತರದಲ್ಲಿ ಉರುಗ್ವೆಯ ಏರಿಯಲ್ ಬೆಹರ್ ಮತ್ತು ಕಝಕ್ ಗಲಿನಾ ವೊಸ್ಕೊಬೊವಾ ಅವರನ್ನು ಮಣಿಸಿದರು.

2012ರಲ್ಲಿ ಮಿಶ್ರ ಡಬಲ್ಸ್ ಆಡಿದ್ದ ಜೋಡಿ ನಿಜ ಜೀವನದಲ್ಲೂ ಒಂದಾದರು
ಇನ್ನು ಮೊದಲ ಬಾರಿಗೆ ಈ ತಾರಾ ಜೋಡಿ 2012ರಲ್ಲಿ ಬಳಿಕ ಪರಿಚಯವಾಗಿ ಪರಿಚಯ ಪ್ರೇಮವಾಗಿ ಪ್ರೇಮ ಮದುವೆಗೆ ತಿರುಗಿತ್ತು. ಈ ಬಗ್ಗೆ ಮಾತನಾಡಿರುವ ಶರಣ್ ಅವರು, ನನಗೆ ನಿಜಕ್ಕೂ ಅರ್ಥವಾಗುತ್ತಿಲ್ಲ.. ನಾವಿಬ್ಬರೂ ಹೆಚ್ಚು ಹೊರಗೆ ಪರಸ್ಪರ ಭೇಟಿಯಾಗಿಲ್ಲ,. ಆದರೂ ನಾವು ಪರಸ್ಪರ ಹೇಗೆ ಮಾತನಾಡಿಕೊಂಡೆವು ಎಂದು ನಮಗೆ ಇನ್ನೂ ತಿಳಿಯುತ್ತಿಲ್ಲ. ಅಂತಿಮವಾಗಿ ಒಬ್ಬರು ಮದುವೆ ವಿಚಾರವಾಗಿ ಮಾತನಾಡಿದೆವು. ಕೊನೆಗೂ ಆ ಮ್ಯಾಜಿಕಲ್ ಸಮಯದಲ್ಲಿ ಇಬ್ಬರೂ ಒಂದಾದೆವು ಎಂದು ಹೇಳಿದರು.

ಇದೇ ವಿಚಾರವಾಗಿ ಮಾತನಾಡಿದ ಸಮಂತಾ ಮರ್ರೆ ಶರಣ್ ಅವರು, ಅವರು ಟೂರ್ನಮೆಂಟ್ ಆಡುತ್ತಿದ್ದಾಗ ನಾನು ತರಬೇತಿ ನಡೆಸುತ್ತಿದ್ದೆ. ಶರಣ್ ಇದ್ದ ತಂಡದಲ್ಲೇ ತರಬೇತಿ ನಡೆಸುತ್ತಿದ್ದರಿಂದ ಪರಸ್ಪರ ಪರಿಚಯ ಬೆಳೆದಿತ್ತು.  ಮುಂದಿನ ಕೆಲವು ತಿಂಗಳುಗಳವರೆಗೆ ನಾವು ಒಟ್ಟಿಗೆ ಸಾಕಷ್ಟು ಸಮಯವನ್ನು ಕಳೆದೆವು. ಈಗ ನಾವು ಇಲ್ಲಿದ್ದೇವೆ! ಎಂದು ಹೇಳಿದರು. 

ಈ ತಾರಾ ಜೋಡಿ 8 ವರ್ಷಗಳಿಂದ ಒಟ್ಟಿಗೆ ಇದ್ದು 2019ರಲ್ಲಿ ಜುಲೈನಲ್ಲಿ ಮ್ಯಾಂಚೆಸ್ಟರ್ನಲ್ಲಿ ಈ ಜೋಡಿ ರಿಜಿಸ್ಟರ್ ಮದುವೆಯಾಗಿತ್ತು. ಬಳಿಕ ನವೆಂಬರ್ ನಲ್ಲಿ ಭಾರತದಲ್ಲೂ ಈ ಜೋಡಿ ಮದುವೆಯಾಗಿ ಆರತಕ್ಷತೆ ನೀಡಿತ್ತು. 

ವಿಂಬಲ್ಡನ್ 
ಇನ್ನು ಈ ಜೋಡಿ ಜೋಡಿಯಾಗಿ ವಿಂಬಲ್ಡನ್ ಟೂರ್ನಿಯಲ್ಲಿ ಆಡಲು ಮುಂದಾಗಿತ್ತು. 2014ರಲ್ಲಿ ಟೂರ್ನಿಗೆ ಈ ಜೋಡಿ ಸಹಿ ಮಾಡಿತ್ತಾದರೂ ಜೋಡಿಯಾಗಿ ಆಡಲು ಸಾಧ್ಯವಾಗಿರಲಿಲ್ಲ. ಆ ಸಂದರ್ಭದಲ್ಲಿ ನಾನು ಹೆಚ್ಚು ಶ್ರೇಯಾಂಕವನ್ನು ಹೊಂದಿರದ ಕಾರಣ ದಿವಿಜ್ ಬೇರೆಯೊವರೊಂದಿಗೆ ಆಡಬೇಕಾಯಿತು. ಈಗ ಬಹಳ ಸಮಯವಾಗಿದೆ. ಈಗ ನಾವಿಬ್ಬರೂ ನಮ್ಮ ಕೌಶಲ್ಯಗಳೊಂದಿಗೆ ಉತ್ತಮ ಸ್ಥಾನಗಳಲ್ಲಿದ್ದು ಒಟ್ಟಿಗೆ ಆಡಲು ಸಾಧ್ಯವಾಯಿತು ಎಂದು ಸಮಂತಾ ಮರ್ರೆ ಶರಣ್ ಹೇಳಿದ್ದಾರೆ.

ಶರಣ್ 2018 ವಿಂಬಲ್ಡನ್‌ನಲ್ಲಿ ಪುರುಷರ ಡಬಲ್ಸ್‌ನಲ್ಲಿ ಕ್ವಾರ್ಟರ್ ಫೈನಲ್‌ಗೆ ತಲುಪಿದ್ದರು.
 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com