ಕೊರೋನಾ ಟೋಕಿಯೊ ಒಲಿಂಪಿಕ್ಸ್ ಗೆ ಕಂಟಕವಾಗಲ್ಲ, ಟೂರ್ನಿ ಜಗತ್ತಿಗೆ ಆಶಾವಾದದ ಸಂದೇಶವಾಗಲಿ: ವಿಶ್ವಸಂಸ್ಥೆ ಮುಖ್ಯಸ್ಥ

ಕೊರೋನಾದಿಂದ ಬಳಲಿದ ಜಗತ್ತಿಗೆ ಟೋಕಿಯೊ ಒಲಿಂಪಿಕ್ಸ್ ಆಶಾವಾದದ ಸಂದೇಶವಾಗಲಿ ಎಂದು ವಿಶ್ವಸಂಸ್ಥೆ ಮುಖ್ಯಸ್ಥ ಟೆಡ್ರೋಸ್ ಅಧೋನಮ್ ಗೆಬ್ರಿಯೆಸಸ್ ಹೇಳಿದ್ದಾರೆ.
ವಿಶ್ವ ಆರೋಗ್ಯ ಸಂಘಟನೆ ಮುಖ್ಯಸ್ಥ  ಟೆಡ್ರೊಸ್ ಅಧಾನೊಮ್ ಘೆಬ್ರೆಯೆಸಸ್
ವಿಶ್ವ ಆರೋಗ್ಯ ಸಂಘಟನೆ ಮುಖ್ಯಸ್ಥ ಟೆಡ್ರೊಸ್ ಅಧಾನೊಮ್ ಘೆಬ್ರೆಯೆಸಸ್

ಟೋಕಿಯೊ(ಜಪಾನ್): ಕೊರೋನಾದಿಂದ ಬಳಲಿದ ಜಗತ್ತಿಗೆ ಟೋಕಿಯೊ ಒಲಿಂಪಿಕ್ಸ್ ಆಶಾವಾದದ ಸಂದೇಶವಾಗಲಿ ಎಂದು ವಿಶ್ವಸಂಸ್ಥೆ ಮುಖ್ಯಸ್ಥ ಟೆಡ್ರೋಸ್ ಅಧೋನಮ್ ಗೆಬ್ರಿಯೆಸಸ್ ಹೇಳಿದ್ದಾರೆ. 

ಟೋಕಿಯೊದಲ್ಲಿ ನಡೆದ ಅಂತಾರಾಷ್ಟ್ರೀಯ ಒಲಿಂಪಿಕ್ಸ್ ಸಮಿತಿಯ 138ನೇ ಅಧಿವೇಶನವನ್ನು ಉದ್ದೇಶಿಸಿ ಮಾತನಾಡಿದ ಅವರು, ಕೊರೋನಾ ಮಹಾಮಾರಿಯಿಂದ ಜಗತ್ತಿನಲ್ಲಿ ನಾಲ್ಕು ಮಿಲಿಯನ್ ಗಿಂತ ಅಧಿಕ ಮಂದಿ ಸಾವನ್ನಪ್ಪಿದ್ದಾರೆ. ಸೋಂಕು ಮುಗಿದಿಲ್ಲ. ಎಚ್ಚರ ವಹಿಸಿ ಎಂದು ಎಚ್ಚರಿಕೆ ನೀಡಿದ್ದಾರೆ. 

ಇದೇ ವೇಳೆ ಡೆಲ್ಟಾ ರೂಪಾಂತರಕ್ಕಿಂತ ಮತ್ತಷ್ಟು ತೀವ್ರವಾದ ಸಾಂಕ್ರಾಮಿಕ ಹಾಗು ಅಪಾಯಕಾರಿ ಕೋವಿಡ್ ರೂಪಾಂತರಗಳು ಮನುಕುಲಕ್ಕೆ ಎದುರಾಗುವ ಸಾಧ್ಯತೆ ಇದೆ ಎಂದು ವಿಶ್ವ ಆರೋಗ್ಯ ಸಂಸ್ಥೆ(ಡಬ್ಲ್ಯುಎಚ್ ಒ) ಎಚ್ಚರಿಸಿದೆ. 

ಸೋಂಕು ಹರಡುವಿಕೆ ಹೆಚ್ಚಾದಂತೆ ರೂಪಾಂತರಿಗಳು ಹೊರಹುಮ್ಮುವ ಸಾಧ್ಯತೆ ಹೆಚ್ಚಿರುತ್ತದೆ. ಹೊಸ ರೂಪಾಂತರಗಳು ಡೆಲ್ಟಾ ರೂಪಾಂತರಕ್ಕೆ ಹೆಚ್ಚು ಹಾನಿ ಮಾಡುವ ಸಾಧ್ಯತೆ ಇದೆ. ಇವು ಮನುಕುಲಕ್ಕೆ ಮತ್ತಷ್ಟು ಅಪಾಯಕಾರಿಯಾಗಲಿವೆ ಎಂದು ಡಬ್ಲ್ಯು ಎಚ್ಒ ಮುಖ್ಯಸ್ಥ ಟೆಡ್ರೋಸ್ ಅಧೋನಮ್ ಗೆಬ್ರಿಯೆಸಸ್ ಹೇಳಿದರು.

ವಿಶ್ವಾದ್ಯಂತ ಲಸಿಕೆ ಆವಿಷ್ಕಾರ ಮತ್ತು ನೀಡಿಕೆ ಪ್ರಗತಿಯಲ್ಲಿದ್ದರೂ, ಹಾಗೂ ಸಾಂಕ್ರಾಮಿಕ ತಡೆಗೆ ಇತರ ಮುನ್ನೆಚ್ಚರಿಕೆ ಕ್ರಮಗಳನ್ನು ತೆಗೆದುಕೊಂಡಿದ್ದರೂ ಮತ್ತೊಂದು ಕೊರೋನಾ ವೈರಸ್ ಅಲೆ ಸನ್ನಿಹಿತದ ಅಪಾಯವಿದೆ. ಬಡ ರಾಷ್ಟ್ರಗಳಲ್ಲಿ ಶೇ. 1ರಷ್ಟು ಜನಸಂಖ್ಯೆ ಮಾತ್ರವೇ ಒಂದು ಡೋಸ್ ಲಸಿಕೆ ಪಡೆದಿದೆ ಎಂದು ಗೆಬ್ರಿಯೆಸಸ್ ಹೇಳಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com