ಟೋಕಿಯೊ ಒಲಂಪಿಕ್ಸ್: ರಾಷ್ಟ್ರೀಯ ತರಬೇತುದಾರರ ಸಲಹೆ ಪಡೆಯದ ಪೆಡ್ಲರ್ ಮಾನಿಕಾ ಬಾತ್ರಾ

ಟೋಕಿಯೊ ಒಲಂಪಿಕ್ಸ್ ನ ಮೊದಲ ಸುತ್ತಿನ ಪಂದ್ಯದ ವೇಳೆ ಶನಿವಾರ ಆಪ್ತ ಕೋಚ್ ಗೆ ಮೈದಾನದೊಳಗೆ ತೆರಳಲು ಅನುಮತಿ ನೀಡದಿದ್ದಾಗ ರಾಷ್ಟ್ರೀಯ ತರಬೇತುದಾರ ಸೌಮ್ಯದೀಪ್ ರಾಯ್ ಅವರ ಸಲಹೆಯನ್ನು ಪಡೆಯಲು ಭಾರತದ ಟೆಬೆಲ್ ಟೆನ್ನಿಸ್ ಸ್ಟಾರ್ ಮಾನಿಕಾ ಬಾತ್ರಾ ನಿರಾಕರಿಸಿದ್ದಾರೆ.
ಮಾನಿಕಾ ಬಾತ್ರಾ
ಮಾನಿಕಾ ಬಾತ್ರಾ

ಟೋಕಿಯೊ: ಟೋಕಿಯೊ ಒಲಂಪಿಕ್ಸ್ ನ ಮೊದಲ ಸುತ್ತಿನ ಪಂದ್ಯದ ವೇಳೆ ಶನಿವಾರ ಆಪ್ತ ಕೋಚ್ ಗೆ ಮೈದಾನದೊಳಗೆ ತೆರಳಲು ಅನುಮತಿ ನೀಡದಿದ್ದಾಗ ರಾಷ್ಟ್ರೀಯ ತರಬೇತುದಾರ ಸೌಮ್ಯದೀಪ್ ರಾಯ್ ಅವರ ಸಲಹೆಯನ್ನು ಪಡೆಯಲು ಭಾರತದ ಟೆಬೆಲ್ ಟೆನ್ನಿಸ್ ಸ್ಟಾರ್ ಮಾನಿಕಾ ಬಾತ್ರಾ ನಿರಾಕರಿಸಿದ್ದಾರೆ.

ವಿಶ್ವದ ನಂಬರ್ 62 ಶ್ರೇಯಾಂಕದ ಆಟಗಾರ್ತಿ ಮಾನಿಕಾ 94ನೇ ಶ್ರೇಯಾಂಕಿತರಾದ ಬ್ರಿಟನ್ ನ ಟಿನ್ -ಟಿನ್ ಹೋ ವಿರುದ್ಧ 4-0 ಅಂತರದಲ್ಲಿ ಗೆಲುವು ಸಾಧಿಸಿದರು.ಆದರೆ, ಕೋಚ್ ಕಾರ್ನರ್ ಬಳಿ ಯಾರೂ ಕೂಡಾ ಕುಳಿತಿರಲಿಲ್ಲ. ಇದು ಸಾಮಾಜಿಕ ಜಾಲತಾಣಗಳಲ್ಲಿ ಹೆಚ್ಚಿನ ಸುದ್ದಿಯಾಗುತ್ತಿದೆ. 

ಮಾನಿಕಾ ಅವರ ಆಪ್ತ ತರಬೇತುದಾರ ಸನ್ಮಯ್ ಪರಂಜಪೆ ಟೋಕಿಯೊಗೆ ಪ್ರಯಾಣಿಸುವ ವಿವಾದ ಅಂತ್ಯ ಕಂಡಿತ್ತು. ಆದರೆ, ರಾಷ್ಟ್ರೀಯ ತಂಡದೊಂದಿಗೆ ಗೇಮ್ಸ್ ಕ್ರೀಡಾ ಗ್ರಾಮದಲ್ಲಿ ಉಳಿಯಲು ಅನುಮತಿ ನೀಡಿಲ್ಲ, ಆದ್ದರಿಂದ ಅವರು ಹೋಟೆಲ್ ನಲ್ಲಿ ಉಳಿದುಕೊಂಡಿದ್ದಾರೆ. ತರಬೇತಿ ಅವಧಿಗಳಲ್ಲಿ ಮಾತ್ರ ಅವರಿಗೆ ಅನುಮತಿ ನೀಡಲಾಗುತ್ತಿದೆ.

ಪರಂಜಪೆ ಅವರ ಮಾನ್ಯತೆಯನ್ನು ಮೇಲ್ದರ್ಜೆಗೇರಿಸಲು 26 ವರ್ಷದ ಆಟಗಾರ್ತಿ ಬಯಸಿದ್ದರು ಆದ್ದರಿಂದ ಪಂದ್ಯದ ವೇಳೆಯಲ್ಲಿ ಪರಂಜಪೆ ಮೈದಾನದ ಪಕ್ಕ ಇರಬೇಕು ಅಂದುಕೊಂಡಿದ್ದರು. ಆದರೆ, ಟಿಟಿಪಿಎಫ್ ಐ ಸಲಹೆಗಾರರೂ ಆಗಿರುವ ಟೀಮ್ ಲೀಡರ್ ಎಂ ಪಿ ಸಿಂಗ್, ಮೈದಾನದೊಳಗೆ ಪರಂಜಪೆ ಅವರಿಗೆ ಅನುಮತಿಯನ್ನು ಸಂಘಟಕರು ನಿರಾಕರಿಸಿದ್ದಾರೆ ಎಂದು ತಿಳಿಸಿದ್ದಾರೆ.

ಪರಂಜಪೆ ಮೈದಾನದೊಳಗೆ ತೆರಳಲು ಅನುಮತಿ ನಿರಾಕರಿಸಿದ ನಂತರ, ನಮ್ಮ ರಾಷ್ಟ್ರೀಯ ತರಬೇತುದಾರರಿಂದ ಸಲಹೆಯನ್ನು ಮನಿಕಾ ನಿರಾಕರಿಸಿದ್ದಾರೆ. ಈ ವಿಚಾರದಲ್ಲಿ ಮಧ್ಯ ಪ್ರವೇಶಿಸಲು ಪ್ರಯತ್ನಿಸಿದೆ ಆದರೆ, ಪಂದ್ಯದ ವೇಳೆಯಲ್ಲಿ ರಾಯ್ ಅವರ ಸಲಹೆ ಪಡೆಯಲು ಕೂಡಾ ಮನಿಕಾ ನಿರಾಕರಿಸಿದರು ಎಂದು ಸಿಂಗ್ ತಿಳಿಸಿರುವುದಾಗಿ ಪಿಟಿಐ ಸುದ್ದಿಸಂಸ್ಥೆ ವರದಿ ಮಾಡಿದೆ. ಈ ವಿಚಾರದ ಬಗ್ಗೆ ಪ್ರತಿಕ್ರಿಯಿಸಿಲು ಮಾನಿಕಾ ಬಾತ್ರಾ ನಿರಾಕರಿಸಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com