ಟೋಕಿಯೊ ಒಲಿಂಪಿಕ್ಸ್ 2020: ಆರಂಭಿಕ ಸುತ್ತಿನಲ್ಲಿ ಇಸ್ರೇಲ್ ನ ಪೋಲಿಕಾರ್ಪೋವಾ ಮಣಿಸಿದ ಪಿ ವಿ ಸಿಂಧು 

ಭಾರತದ ಬ್ಯಾಡ್ಮಿಂಟನ್ ತಾರೆ ಪಿ ವಿ ಸಿಂಧು ಮೊದಲ ಸುತ್ತಿನಲ್ಲಿ ಯಶಸ್ವಿಯಾಗಿದ್ದಾರೆ. ಈ ಮೂಲಕ ತಮ್ಮ ಒಲಿಂಪಿಕ್ ಪಯಣವನ್ನು ಶುಭಾರಂಭಗೊಳಿಸಿದ್ದಾರೆ.
ಪಿ ವಿ ಸಿಂಧು(ಸಂಗ್ರಹ ಚಿತ್ರ )
ಪಿ ವಿ ಸಿಂಧು(ಸಂಗ್ರಹ ಚಿತ್ರ )

ಟೋಕಿಯೊ; ಭಾರತದ ಬ್ಯಾಡ್ಮಿಂಟನ್ ತಾರೆ ಪಿ ವಿ ಸಿಂಧು ಮೊದಲ ಸುತ್ತಿನಲ್ಲಿ ಯಶಸ್ವಿಯಾಗಿದ್ದಾರೆ. ಈ ಮೂಲಕ ತಮ್ಮ ಒಲಿಂಪಿಕ್ ಪಯಣವನ್ನು ಶುಭಾರಂಭಗೊಳಿಸಿದ್ದಾರೆ.

ಇಸ್ರೇಲ್ ನ ಕ್ಸೆನಿಯಾ ಪೋಲಿಕಾರ್ಪೋವಾ ಅವರನ್ನು ಮೊದಲ ಸುತ್ತಿನಲ್ಲಿ 21-7, 21-10 ಸೆಟ್ ಗಳಿಂದ ಪರಾಭವಗೊಳಿಸಿದ್ದಾರೆ.

ವಿಶ್ವದ 7ನೇ ರ್ಯಾಂಕ್ ಆಟಗಾರ್ತಿ 26 ವರ್ಷದ ಪಿ ವಿ ಸಿಂಧು ಅವರು ಮಹಿಳೆಯರ ಸಿಂಗಲ್ಸ್ ಗ್ರೂಪ್ ಜೆ ಪಂದ್ಯದಲ್ಲಿ 58ನೇ ರ್ಯಾಂಕಿನ ಪೊಲಿಕರ್ಪೊವಾ ಅವರನ್ನು ಆರಂಭಿಕ ಪಂದ್ಯದಲ್ಲಿ 21-7, 21-10 ಸೆಟ್ ಗಳಿಂದ ಸುಲಭವಾಗಿ ಗೆದ್ದಿದ್ದಾರೆ.
ಮುಂದಿನ ಸುತ್ತಿನಲ್ಲಿ ಪಿ ವಿ ಸಿಂಧು ಹಾಂಕಾಂಗ್ ನ ವಿಶ್ವದ 34ನೇ ಶ್ರೇಯಾಂಕಿತೆ ಚೆಯುಂಗ್ ನ್ಗಾನ್ ಯಿ ಅವರನ್ನು ಎದುರಿಸಲಿದ್ದಾರೆ.

ನಿನ್ನೆ ನಡೆದ ಪುರುಷರ ಡಬಲ್ಸ್ ನಲ್ಲಿ ಸಾತ್ವಿಕ್ ಸಾಯಿರಾಜ್ ರಂಕಿರೆಡ್ಡಿ ಮತ್ತು ಚಿರಾಗ್ ಶೆಟ್ಟಿ ಗ್ರೂಪ್ ಎ ಪಂದ್ಯದಲ್ಲಿ ಚೀನಾದ ಯಾಗ್ ಲೀ ಮತ್ತು ಚಿ ಲಿನ್ ವಾಂಗ್ ಅವರನ್ನು ಸೋಲಿಸಿದ್ದಾರೆ. ಆದರೆ ಪುರುಷರ ಸಿಂಗಲ್ಸ್ ವಿಭಾಗದಲ್ಲಿ ಅರ್ಹತಾ ಸುತ್ತಿನಲ್ಲಿ ಬಿ ಸಾಯಿ ಪ್ರನೀತ್ ವಿಶ್ವದ ನಂಬರ್ 47 ಶ್ರೇಯಾಂಕಿತ ಇಸ್ರೇಲ್ ನ ಮಿಶ ಜಿಲ್ಬೆರ್ಮನ್ ಅವರ ವಿರುದ್ಧ ಸೋತು ನಾಕ್ ಔಟ್ ಸುತ್ತು ಪ್ರವೇಶಿಸಲಾರದೆ ನಿರ್ಗಮಿಸಿದ್ದಾರೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com