ಟೋಕಿಯೊ ಒಲಂಪಿಕ್ಸ್: ಆಸ್ಟ್ರೇಲಿಯಾ ವಿರುದ್ಧ ಹೀನಾಯ ಸೋಲು ಕಂಡ ಭಾರತದ ಪುರುಷರ ಹಾಕಿ ತಂಡ

ನ್ಯೂಜಿಲ್ಯಾಂಡ್ ವಿರುದ್ಧದ ಮೊದಲ ಪಂದ್ಯದಲ್ಲಿ ಗೆದ್ದು ಟೋಕಿಯೊ ಒಲಂಪಿಕ್ಸ್ ಗೆ ಶುಭಾರಂಭ ಮಾಡಿದ್ದ ಭಾರತೀಯ ಪುರುಷರ ಹಾಕಿ ತಂಡ ಆಸ್ಟ್ರೇಲಿಯಾ ವಿರುದ್ಧದ ಎರಡನೇ ಪಂದ್ಯದಲ್ಲಿ ಅಘಾತಕಾರಿ ಸೋಲು ಕಂಡಿದೆ.
ಭಾರತ ಹಾಕಿ ತಂಡ
ಭಾರತ ಹಾಕಿ ತಂಡ

ಟೋಕಿಯೊ: ನ್ಯೂಜಿಲ್ಯಾಂಡ್ ವಿರುದ್ಧದ ಮೊದಲ ಪಂದ್ಯದಲ್ಲಿ ಗೆದ್ದು ಟೋಕಿಯೊ ಒಲಂಪಿಕ್ಸ್ ಗೆ ಶುಭಾರಂಭ ಮಾಡಿದ್ದ ಭಾರತೀಯ ಪುರುಷರ ಹಾಕಿ ತಂಡ ಆಸ್ಟ್ರೇಲಿಯಾ ವಿರುದ್ಧದ ಎರಡನೇ ಪಂದ್ಯದಲ್ಲಿ ಅಘಾತಕಾರಿ ಸೋಲು ಕಂಡಿದೆ.

ವಿಶ್ವದ ನಂಬರ್ ಒನ್ ಹಾಕಿ ತಂಡ ಆಸ್ಟ್ರೇಲಿಯಾ ವಿರುದ್ಧ ಭಾರತ 1-7 ಗೋಲುಗಳಿಂದ ಸೋಲು ಕಂಡಿದೆ. ಭಾರತದ ದಿಲ್ಪೀತ್ ಸಿಂಗ್ 34ನೇ ನಿಮಿಷದಲ್ಲಿ ಸಿಡಿಸಿದ ಗೋಲು ಭಾರತ ಏಕೈಕ ಗೋಲಾಗಿದೆ.

ಪಂದ್ಯ ಆರಂಭವಾದ 8ನೇ ನಿಮಿಷದಲ್ಲಿ ಸಿಕ್ಕ ಪೆನಾಲ್ಟಿ ಕಾರ್ನರ್ ಅವಕಾಶವನ್ನು ಹರ್ಮನ್ ಪ್ರೀತ್ ಕೈ ಚೆಲ್ಲಿದ್ದರು. ನಂತರ ಸಿಕ್ಕದ ಪೆನಾಲ್ಟಿ ಕಾರ್ನರ್ ಬಳಿಸಿಕೊಂಡ ಆಸ್ಟ್ರೇಲಿಯಾ ಡೇನಿಯಲ್ ಬೀಲೆ ಗೋಲು ಬಾರಿಸಿದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com