ಟೋಕಿಯೊ ಒಲಂಪಿಕ್ಸ್: ಭಾರತಕ್ಕೆ ಮೊದಲ ಪದಕ ಗೆದ್ದುಕೊಟ್ಟ ಮೀರಾಬಾಯಿ ಚಾನು ಬೆಳ್ಳಿ ಪದಕ ಚಿನ್ನವಾಗುತ್ತಾ?

ಟೋಕಿಯೊ ಒಲಂಪಿಕ್ಸ್ ನ 49 ಕೆಜಿ ವೇಯ್ಟ್ ಲಿಫ್ಟಿಂಗ್ ವಿಭಾಗದಲ್ಲಿ ಬೆಳ್ಳಿ ಪದಕ ಗೆಲ್ಲುವ ಮೂಲಕ ಭಾರತಕ್ಕೆ ಮೊದಲ ಪದಕ ಸಿಹಿ ನೀಡಿದ್ದರು.
ಮೀರಾಬಾಯಿ ಚಾನು
ಮೀರಾಬಾಯಿ ಚಾನು

ಟೋಕಿಯೊ: ಟೋಕಿಯೊ ಒಲಂಪಿಕ್ಸ್ ನ 49 ಕೆಜಿ ವೇಯ್ಟ್ ಲಿಫ್ಟಿಂಗ್ ವಿಭಾಗದಲ್ಲಿ ಬೆಳ್ಳಿ ಪದಕ ಗೆಲ್ಲುವ ಮೂಲಕ ಭಾರತಕ್ಕೆ ಮೊದಲ ಪದಕ ಸಿಹಿ ನೀಡಿದ್ದರು.

ಇದೀಗ ಅವರು ಗೆದ್ದಿರುವ ಬೆಳ್ಳಿ ಪದಕ ಬಂಗಾರವಾಗುವ ಸಾಧ್ಯತೆಗಳಿವೆ. ಹೌದು ಮೊದಲ ಸ್ಥಾನಕ್ಕೇರಿ ಚಿನ್ನದ ಪದಕಕ್ಕೆ ಮುತ್ತಿಟ್ಟಿದ್ದ ಚೀನಾದ ಹೋಹು ಜಿಝಿಹಿ ವಿರುದ್ಧ ಡೋಪಿಂಗ್ ಆರೋಪ ಕೇಳಿಬಂದಿದೆ.

ಹೀಗಾಗಿ ಅವರನ್ನು ಆಟದ ಬಳಿಕವೂ ಒಲಂಪಿಕ್ಸ್ ಕ್ರೀಡಾಗ್ರಾಮದಲ್ಲೇ ಉಳಿಸಿಕೊಳ್ಳಲಾಗಿದೆ. ಡೋಪಿಂಗ್ ಟೆಸ್ಟ್ ನಲ್ಲಿ ಹೋಹು ವಿಫಲರಾದರೆ ಮೊದಲ ಸ್ಥಾನ ಕಳೆದುಕೊಳ್ಳಲಿದ್ದಾರೆ. ಹೀಗಾಗಿ 2ನೇ ಸ್ಥಾನದಲ್ಲಿರುವ ಮೀರಾಬಾಯಿ ಚಾನು ಮೊದಲ ಸ್ಥಾನಕ್ಕೇರಲಿದ್ದಾರೆ.

ಇನ್ನು 26 ವರ್ಷದ ಮೀರಾಬಾಯಿ ಚಾನು 2018ರಲ್ಲಿ ಕಾಮನ್ ವೆಲ್ತ್ ಕ್ರೀಡಾಕೂಟದಲ್ಲಿ 48 ಕೆಜಿ ವಿಭಾಗದಲ್ಲಿ ಚಿನ್ನದ ಪದಕ ಗೆದ್ದಿದ್ದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com