ಟೋಕಿಯೋ ಒಲಿಂಪಿಕ್ಸ್: ಮತ್ತೆ 4 ಮಂದಿಗೆ ಕೋವಿಡ್ ಸೋಂಕು, ಕ್ರೀಡಾಗ್ರಾಮದಲ್ಲಿ ಸೋಂಕಿತರ ಸಂಖ್ಯೆ 155ಕ್ಕೆ ಏರಿಕೆ

ಜಪಾನ್ ರಾಜಧಾನಿ ಟೋಕಿಯೋದಲ್ಲಿ ನಡೆಯುತ್ತಿರುವ ಒಲಂಪಿಕ್ಸ್ ಕ್ರೀಡಾಕೂಟದಲ್ಲಿ ಮತ್ತೆ 4 ಮಂದಿಗೆ ಕೋವಿಡ್ ಸೋಂಕು ಒಕ್ಕರಿಸಿದ್ದು, ಆ ಮೂಲಕ ಕ್ರೀಡಾಕೂಟದಲ್ಲಿನ ಕೋವಿಡ್ ಸೋಂಕಿತರ ಸಂಖ್ಯೆ 155ಕ್ಕೆ ಏರಿಕೆಯಾಗಿದೆ.
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ

ಟೋಕಿಯೋ: ಜಪಾನ್ ರಾಜಧಾನಿ ಟೋಕಿಯೋದಲ್ಲಿ ನಡೆಯುತ್ತಿರುವ ಒಲಂಪಿಕ್ಸ್ ಕ್ರೀಡಾಕೂಟದಲ್ಲಿ ಮತ್ತೆ 4 ಮಂದಿಗೆ ಕೋವಿಡ್ ಸೋಂಕು ಒಕ್ಕರಿಸಿದ್ದು, ಆ ಮೂಲಕ ಕ್ರೀಡಾಕೂಟದಲ್ಲಿನ ಕೋವಿಡ್ ಸೋಂಕಿತರ ಸಂಖ್ಯೆ 155ಕ್ಕೆ ಏರಿಕೆಯಾಗಿದೆ.

ಈ ಕುರಿತಂತೆ ಕ್ರೀಡಾಕೂಟದ ಸಂಘಟಕರು ಮಾಹಿತಿ ನೀಡಿದ್ದು, ಇಂದು ಕೂಡ 4 ಮಂದಿಗೆ ಕೋವಿಡ್ ಸೋಂಕಿಗೆ ತುತ್ತಾಗಿದ್ದು, ಈ ಪೈಕಿ ಮೂರು ಮಂದಿ ಅಥ್ಲೀಟ್ ಗಳ ಸಿಬ್ಬಂದಿಗಳು ಎಂದು ತಿಳಿದುಬಂದಿದೆ. ಆ ಮೂಲಕ ಕ್ರೀಡಾಕೂಟದಲ್ಲಿನ ಕೋವಿಡ್ ಸೋಂಕಿತರ ಸಂಖ್ಯೆ 155ಕ್ಕೆ ಏರಿಕೆಯಾಗಿದ್ದು. ಈ ಪೈಕಿ 20  ಮಂದಿ ಸೋಂಕಿತರು ಕ್ರೀಡಾಗ್ರಾಮದಲ್ಲಿನ ಪ್ರತ್ಯೇಕ ಚಿಕಿತ್ಸಾ ಕೇಂದ್ರದಲ್ಲಿದ್ದಾರೆ ಎಂದು ತಿಳಿದುಬಂದಿದೆ.

ನಿನ್ನೆ ಮೂರು ಮಂದಿ ಅಥ್ಲೀಟ್ ಗಳು ಸೇರಿದಂತೆ 16 ಮಂದಿ ಸೋಂಕಿಗೆ ತುತ್ತಾಗಿದ್ದರು. ಈ ಪೈಕಿ ಮೂವರು ಕ್ರೀಡಾಪಟುಗಳು, ನಾಲ್ಕು ಗುತ್ತಿಗೆದಾರರು, ಎಂಟು ಆಟಗಳಿಗೆ ಸಂಬಂಧಿಸಿದ ಸಿಬ್ಬಂದಿ ಮತ್ತು ಒಬ್ಬ ಆಟ ನೌಕರರು ಸೇರಿದ್ದರು. 

ಐಟಿಎಫ್ ಜಾರಿ ಮಾಡಿರುವ ಪ್ರಕಟಣೆಯ ಪ್ರಕಾರ ಟೆನ್ನಿಸ್ ಆಟಗಾರ ಜೀನ್ ಜೂಲಿಯನ್ ರೋಜರ್ ಸೋಂಕಿಗೀಡಾಗಿದ್ದಾರೆ. ನೆದರ್​ಲ್ಯಾಂಡ್ಸ್ ಕಂಟಿಂಜೆಂಟ್​ನಲ್ಲಿ ಪಿಡುಗಿಗೆ ಈಡಾಗಿರುವ ಆರನೇ ಅಥ್ಲೀಟ್​ ಆಗಿದ್ದಾರೆ. ಅವರಲ್ಲಿ ಒಬ್ಬ ಸ್ಕೇಟ್​ಬೋರ್ಡರ್, ಒಬ್ಬ ಟೇಕ್ವಾಂಡೊ ಆಟಗಾರ, ಒಬ್ಬ ರೋವರ್ ಮತ್ತು  ರೋವಿಂಗ್ ಟೀಮಿನ ಇಬ್ಬರು ಸಪೋರ್ಟ್ ಸ್ಟಾಫ್​ನವರು ಸೇರಿದ್ದಾರೆ. ರೋಜರ್ ಮತ್ತು ಅವರ ಪಾರ್ಟ್​ನರ್ ವೆಸ್ಲೀ ಕೂಲ್ಹಾಫ್ ತಮ್ಮ ಎರಡನೇ ಸುತ್ತಿನ ಪಂದ್ಯವನ್ನು ಸೋಮವಾರ ಆಡಬೇಕಿತ್ತು, ಆದರೆ ಅವರಿಬ್ಬರನ್ನು ಐಸೋಲೇಷನ್​ನಲ್ಲಿ ಇಡಲಾಗಿದೆ ಎಂದು ಐಟಿಎಫ್ ಹೇಳಿದೆ.
  
ಅಂತೆಯೇ ಮೂವರು ಕ್ರೀಡಾಪಟುಗಳು ಮತ್ತು ಏಳು ಕ್ರೀಡಾಕೂಟಕ್ಕೆ ಸಂಬಂಧಿಸಿದ ಸಿಬ್ಬಂದಿಯನ್ನು 14 ದಿನಗಳ ಕಡ್ಡಾಯ ಕ್ವಾರಂಟೈನ್ ಗೊಳಿಸಲಾಗಿದೆ. ಇನ್ನು 8 ಹೊಸ ಪ್ರಕರಣಗಳು ಸೇರಿದಂತೆ ಸೋಂಕಿಗೆ ತುತ್ತಾದ ಸಿಬ್ಬಂದಿಗಳ ಸಂಖ್ಯೆ 83ಕ್ಕೆ ಏರಿಕೆಯಾಗಿದೆ. ಈ ಪೈಕಿ ಜೆಕ್ ಗಣರಾಜ್ಯ, ಅಮೆರಿಕ, ಚಿಲಿ, ದಕ್ಷಿಣ  ಆಫ್ರಿಕಾ ಮತ್ತು ನೆದರ್ಲೆಂಡ್ಸ್ ಸೇರಿವೆ. ಇವುಗಳಲ್ಲಿ, ನಾಲ್ಕು ಕ್ರೀಡಾಪಟುಗಳು ಕೂಡ ಸೋಂಕಿಗೆ ತುತ್ತಾಗಿದ್ದು, ಈ ಪೈಕಿ ಜೆಕ್ ಗಣರಾಜ್ಯದ ಬೀಚ್ ವಾಲಿಬಾಲ್ ಮತ್ತು ರೋಡ್ ಸೈಕ್ಲಿಂಗ್ ಅಥ್ಲೀಟ್ ಗಳು ಕ್ರೀಡಾಕೂಟದಿಂದ ಹಿಂದೆ ಸರಿದಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com