ಟೋಕಿಯೋ ಒಲಂಪಿಕ್ಸ್; ಅರ್ಜೆಂಟೈನಾ ವಿರುದ್ಧ ಭರ್ಜರಿ ಗೆಲುವು, ಕ್ವಾರ್ಟರ್‌ ಫೈನಲ್‌'ಗೆ ಲಗ್ಗೆ ಇಟ್ಟ ಭಾರತದ ಹಾಕಿ ತಂಡ

ಟೋಕಿಯೊ ಒಲಂಪಿಕ್ಸ್‌ನಲ್ಲಿ ಭಾರತೀಯ ಪುರುಷರ ಹಾಕಿ ತಂಡ ಗುರುವಾರ ನಾಲ್ಕನೇ ಪಂದ್ಯವನ್ನಾಡಿದ್ದು, ಎದುರಾಳಿ ಅರ್ಜೆಂಟೈನಾ ವಿರುದ್ಧ ಭರ್ಜರಿ ಗೆಲುವು ಸಾಧಿಸಿದೆ. ಈ ಮೂಲಕ ಕ್ವಾರ್ಟರ್‌ ಫೈನಲ್‌'ಗೆ ಲಗ್ಗೆ ಇಟ್ಟಿದೆ. 
ಹಾಕಿತಂಡ
ಹಾಕಿತಂಡ

ಟೋಕಿಯೋ: ಟೋಕಿಯೊ ಒಲಂಪಿಕ್ಸ್‌ನಲ್ಲಿ ಭಾರತೀಯ ಪುರುಷರ ಹಾಕಿ ತಂಡ ಗುರುವಾರ ನಾಲ್ಕನೇ ಪಂದ್ಯವನ್ನಾಡಿದ್ದು, ಎದುರಾಳಿ ಅರ್ಜೆಂಟೈನಾ ವಿರುದ್ಧ ಭರ್ಜರಿ ಗೆಲುವು ಸಾಧಿಸಿದೆ. ಈ ಮೂಲಕ ಕ್ವಾರ್ಟರ್‌ ಫೈನಲ್‌'ಗೆ ಲಗ್ಗೆ ಇಟ್ಟಿದೆ. 

ತನ್ನ ಗ್ರೂಪ್ ಹಂತದ ನಾಲ್ಕನೇ ಪಂದ್ಯದಲ್ಲಿ ಪ್ರಬಲ ಅರ್ಜೆಂಟೈನಾ ವಿರುದ್ಧ ಭಾರತ 3-1 ಗೋಲುಗಳಿಂದ ಸೋಲಿಸಿತು. 

2016ರ ಒಲಿಂಪಿಕ್ಸ್​ನಲ್ಲಿ ಚಿನ್ನದ ಪದಕ ಗೆದ್ದಿದ್ದ ಅರ್ಜೆಂಟಿನಾವನ್ನು ಮನ್​ಪ್ರೀತ್ ಸಿಂಗ್ ಪಡೆ 3-1 ಗೋಲುಗಳ ಅಂತರದಿಂದ ಸೋಲು ಕಾಣುವಂತೆ ಮಾಡಿದೆ. ಇದರಂತೆ ಭಾರತ ಕ್ವಾರ್ಟರ್​ ಫೈನಲ್​ನಲ್ಲಿ ಜುಲೈ 30 ರಂದು ಜಪಾನ್ ವಿರುದ್ಧ ಸೆಣೆಸಾಡಲಿದೆ.

ಈ ಪಂದ್ಯದ ಮೊದಲೆರಡು ಕ್ವಾರ್ಟರ್‌ನಲ್ಲಿ ಇತ್ತಂಡಗಳು ಯಾವುದೇ ಗೋಲ್ ಬಾರಿಸದೆ ತೀವ್ರ ಪೈಪೋಟಿ ನಡೆಸುತ್ತಿದ್ದವು. ಮೂರನೇ ಕ್ವಾರ್ಟರ್‌ನ ಕೊನೆಯ ಹಂತದಲ್ಲಿ ಭಾರತದ ಪರ ವರುಣ್ ಕುಮಾರ್ ಮೊದಲನೆಯ ಗೋಲನ್ನು ಬಾರಿಸಿ ಭಾರತಕ್ಕೆ ಮುನ್ನಡೆ ತಂದುಕೊಟ್ಟರು.

ನಾಲ್ಕನೇ ಕ್ವಾರ್ಟರ್ ಶುರುವಾದ ಕೂಡಲೇ ಅರ್ಜೆಂಟಿನಾದ ಮಿಯಾಕೋ ತಮ್ಮ ತಂಡದ ಪರ ಮೊದಲ ಗೋಲು ಸಿಡಿಸಿದರು. ಹೀಗೆ ಭಾರತ ಮತ್ತು ಅರ್ಜೆಂಟಿನಾ ತಂಡಗಳೆರಡೂ ತಲಾ ಒಂದೊಂದು ಗೋಲು ಬಾರಿಸಿ ನಾಲ್ಕನೇ ಕ್ವಾರ್ಟರ್‌ನ ಕೊನೆಯ ಹಂತದವರೆಗೂ ತೀವ್ರ ಜಿದ್ದಾಜಿದ್ದಿ ನಡೆಸಿದವು. ಕೊನೆ ಹಂತದಲ್ಲಿ ವಿವೇಕ್ ಸಾಗರ್ ಮತ್ತು ಹರ್ಮನ್ ಪ್ರೀತ್ ಸಿಂಗ್ ತಲಾ ಒಂದೊಂದು ಗೋಲು ಬಾರಿಸುವುದರ ಮೂಲಕ ಭಾರತಕ್ಕೆ 3-1 ಅಂತರದ ಜಯ ಸಾಧಿಸಲು ಸಾಧ್ಯವಾಯಿತು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com