ಟೋಕಿಯೊ ಒಲಂಪಿಕ್ಸ್: ದಕ್ಷಿಣ ಆಫ್ರಿಕಾ ವಿರುದ್ಧ ಭಾರತ ಮಹಿಳಾ ಹಾಕಿ ತಂಡಕ್ಕೆ 4-3 ಅಂತರದ ಗೆಲುವು, ಕ್ವಾರ್ಟರ್ ಫೈನಲ್ ಆಸೆ ಜೀವಂತ

ಭಾರತದ ಮಹಿಳಾ ಹಾಕಿ ತಂಡ ಶನಿವಾರ ದಕ್ಷಿಣ ಆಫ್ರಿಕಾ ವಿರುದ್ಧ 4-3 ಅಂತರದಲ್ಲಿ ಗೆಲುವು ಸಾಧಿಸಿದ್ದು. ಈ ಮೂಲಕ ಭಾರತದ ಮಹಿಳಾ ಹಾಕಿ ತಂಡ ಕ್ವಾರ್ಟರ್ ಫೈನಲ್ ಪ್ರವೇಶಿಸುವ ಭರವಸೆ ಹೆಚ್ಚಾದಂತಾಗಿದೆ.
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ

ಟೋಕಿಯೊ: ಭಾರತದ ಮಹಿಳಾ ಹಾಕಿ ತಂಡ ಶನಿವಾರ ದಕ್ಷಿಣ ಆಫ್ರಿಕಾ ವಿರುದ್ಧ 4-3 ಅಂತರದಲ್ಲಿ ಗೆಲುವು ಸಾಧಿಸಿದ್ದು. ಈ ಮೂಲಕ ಭಾರತದ ಮಹಿಳಾ ಹಾಕಿ ತಂಡ ಕ್ವಾರ್ಟರ್ ಫೈನಲ್ ಪ್ರವೇಶಿಸುವ ಭರವಸೆ ಹೆಚ್ಚಾದಂತಾಗಿದೆ.

ಇಂದು ನಡೆದ ಒಲಿಂಪಿಕ್ಸ್​ ಹಾಕಿಯಲ್ಲಿ ಭಾರತ ಮತ್ತು ಸೌತ್​ ಆಫ್ರಿಕಾ ನಡುವೆ ನಡೆದ ಪಂದ್ಯ ರೋಚಕತೆಯಿಂದ ಕೂಡಿತ್ತು. ಇದರಂತೆ ಭಾರತದ ಮಹಿಳಾ ಹಾಕಿ ತಂಡ ಉತ್ತಮವಾಗಿ ಪ್ರದರ್ಶನ ನೀಡುವುದರ ಮೂಲಕ ಸೌತ್​ ಆಫ್ರಿಕಾ ವಿರುದ್ಧ 4-3 ಅಂತರಿಂದ ಭರ್ಜರಿ ಜಯ ಸಾಧಿಸಿತು.

ಗ್ರೂಪ್​ ‘ಎ’ ವಿಭಾಗದಲ್ಲಿ ಭಾರತಕ್ಕೆ ಇದು ಎರಡನೇ ಜಯವಾಗಿದೆ. ಮೊದಲಾರ್ಧದಲ್ಲಿ ಭಾರತ ಮತ್ತು ಐರ್ಲೆಂಡ್​ ತಂಡ 2-2 ಗೋಲ್​ಗಳನ್ನು ಪಡೆದು ಆಟ ಮುಂದುವರೆಸಿದ್ದವು. ಬಳಿಕ ಆಟ ರೋಚಕತೆಯಿಂದ ಕೂಡಿತ್ತು. ಭಾರತ ಮತ್ತು ಸೌತ್​ ಆಫ್ರಿಕಾ ತಂಡ 3-3 ಗೋಲ್​ಗಳನ್ನು ಗಳಿಸಿ ಮುನ್ನಡೆಯುತ್ತಿದ್ದವು. ಕೊನೆಯ ಕ್ಷಣದಲ್ಲಿ ಭಾರತದ ಪರವಾಗಿ ಕಟಾರಿಯಾ​ ಗೋಲು​ ಬಾರಿಸಿದರು. ಈ ಮೂಲಕ ಭಾರತ ತಂಡ 4-3 ರಿಂದ ಮುನ್ನಡೆ ಪಡೆಯಿತು. ಅಂತಿಮವಾಗಿ ಭಾರಿ ಒತ್ತಡದಲ್ಲಿದ್ದ ಭಾರತ ತಂಡ ಸೌತ್​ ಆಫ್ರಿಕಾ ವಿರುದ್ಧ 4-3 ಮೂಲಕ ರೋಚಕ ಜಯ ಸಾಧಿಸಿತು.

ಮುಂದಿನ ಪಂದ್ಯದಲ್ಲಿ ಐರ್ಲೆಂಡ್​ ಬಲಿಷ್ಠ ಗ್ರೇಟ್​ ಬ್ರಿಟನ್​ ವಿರುದ್ಧ ಅದೃಷ್ಟ ಪರೀಕ್ಷಿಸಲಿದೆ. ಒಂದು ವೇಳೆ ಗ್ರೇಟ್​ ಬ್ರಿಟನ್​ ವಿರುದ್ಧ ಐರ್ಲೆಂಡ್​ ಸೋತರೇ ಭಾರತ 'ಎ' ಗುಂಪಿನಲ್ಲಿ 4ನೇ ಸ್ಥಾನಿಯಾಗಿ ಕ್ವಾರ್ಟರ್​​ಫೈನಲ್​​ ಪ್ರವೇಶಿಸಲಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com