ಟೋಕಿಯೊ ಒಲಂಪಿಕ್ಸ್ ಮೇಲೆ ಕೊರೋನಾ ಕರಿನೆರಳು: ಮತ್ತೆ 21 ಹೊಸ ಪ್ರಕರಣಗಳು ಪತ್ತೆ

ಟೊಕಿಯೋ ಒಲಂಪಿಕ್ಸ್ ಮೇಲೆ ಮಹಾಮಾರಿ ಕೊರೋನಾ ಕರಿನೆರಳು ಬಿದ್ದಿದ್ದು, ಮತ್ತೆ 21 ಹೊಸ ಕೋವಿಡ್ ಪ್ರಕರಣಗಳು ಪತ್ತೆಯಾಗಿವೆ ಎಂದು ತಿಳಿದುಬಂದಿದೆ.
ಟೊಕಿಯೊ ಒಲಂಪಿಕ್ಸ್
ಟೊಕಿಯೊ ಒಲಂಪಿಕ್ಸ್

ಟೋಕಿಯೊ: ಟೊಕಿಯೊ ಒಲಂಪಿಕ್ಸ್ ಮೇಲೆ ಮಹಾಮಾರಿ ಕೊರೋನಾ ಕರಿನೆರಳು ಬಿದ್ದಿದ್ದು, ಮತ್ತೆ 21 ಹೊಸ ಕೋವಿಡ್ ಪ್ರಕರಣಗಳು ಪತ್ತೆಯಾಗಿವೆ ಎಂದು ತಿಳಿದುಬಂದಿದೆ. 

ಈ ಕುರಿತು ಒಲಂಪಿಕ್ಸ್ ಆಯೋಜಕರು ಮಾಹಿತಿ ನೀಡಿದ್ದು, ಶನಿವಾರ ಒಂದೇ ದಿನ 21 ಕೋವಿಡ್ ಪ್ರಕರಣಗಳು ಪತ್ತೆಯಾಗಿವೆ ಎಂದು ತಿಳಿಸಿದ್ದಾರೆ. 

21 ಮಂದಿಯಲ್ಲಿ 14 ಮಂದಿ ಗುತ್ತಿಗೆದಾರರು, 7 ಮಂದಿ ಅಧಿಕಾರಿಗಳಲ್ಲಿ ಕೋವಿಡ್ ಸೋಂಕು ಪತ್ತೆಯಾಗಿದೆ ಎಂದು ಮಾಹಿತಿ ನೀಡಿದ್ದಾರೆ. ಇದರೊಂದಿಗೆ ಸೋಂಕಿಗೆ ಒಳಗಾದವರ ಒಟ್ಟು ಸಂಖ್ಯೆ 241ಕ್ಕೆ ತಲುಪಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com