ಒಲಂಪಿಕ್ಸ್ ಸ್ಪರ್ಧಿ ಕುಸ್ತಿಪಟು ಸುಮಿತ್ ಮಲಿಕ್ ಡೋಪಿಂಗ್ ಪರೀಕ್ಷೆಯಲ್ಲಿ ವಿಫಲ, ತಾತ್ಕಾಲಿಕ ಅಮಾನತು

ಕಳೆದ ತಿಂಗಳು ಸೋಫಿಯಾ (ಬಲ್ಗೇರಿಯಾ) ದಲ್ಲಿ ನಡೆದ ವಿಶ್ವ ಒಲಿಂಪಿಕ್ ಕ್ರೀಡಾಕೂಟದ ಅರ್ಹತಾ ಪಂದ್ಯದ ವೇಳೆ ನಡೆಸಿದ ಡೋಪಿಂಗ್  ಪರೀಕ್ಷೆಯಲ್ಲಿ ಒಲಿಂಪಿಕ್ ಅರ್ಹತೆಯ ಭಾರತೀಯ ಕುಸ್ತಿಪಟು ಸುಮಿತ್ ಮಲಿಕ್ (125 ಕೆಜಿ) ವಿಫಲರಾಗಿದ್ದಾರೆ. ಇವರನ್ನು ವಿಶ್ವ ಆಡಳಿತ ಮಂಡಳಿಯ ಯುನೈಟೆಡ್ ವರ್ಲ್ಡ್ ವ್ರೆಸ್ಲಿಂಗ್ ತಾತ್ಕಾಲಿಕವಾಗಿ ಅಮಾನತುಗೊಳಿಸಿದೆ.
ಸುಮಿತ್ ಮಲಿಕ್
ಸುಮಿತ್ ಮಲಿಕ್

ಚೆನ್ನೈ: ಕಳೆದ ತಿಂಗಳು ಸೋಫಿಯಾ (ಬಲ್ಗೇರಿಯಾ) ದಲ್ಲಿ ನಡೆದ ವಿಶ್ವ ಒಲಿಂಪಿಕ್ ಕ್ರೀಡಾಕೂಟದ ಅರ್ಹತಾ ಪಂದ್ಯದ ವೇಳೆ ನಡೆಸಿದ ಡೋಪಿಂಗ್  ಪರೀಕ್ಷೆಯಲ್ಲಿ ಒಲಿಂಪಿಕ್ ಅರ್ಹತೆಯ ಭಾರತೀಯ ಕುಸ್ತಿಪಟು ಸುಮಿತ್ ಮಲಿಕ್ (125 ಕೆಜಿ) ವಿಫಲರಾಗಿದ್ದಾರೆ. ಇವರನ್ನು ವಿಶ್ವ ಆಡಳಿತ ಮಂಡಳಿಯ ಯುನೈಟೆಡ್ ವರ್ಲ್ಡ್ ವ್ರೆಸ್ಲಿಂಗ್ ತಾತ್ಕಾಲಿಕವಾಗಿ ಅಮಾನತುಗೊಳಿಸಿದೆ.

ಈ ಸಂದರ್ಭದಲ್ಲಿ ಅವರು ಬೆಳ್ಳಿ ಪದಕದೊಂದಿಗೆ ಒಲಿಂಪಿಕ್ ಗೆ ಅರ್ಹತೆ ಗಳಿಸಿದ್ದರು. ಮೊಣಕಾಲಿನ ಗಾಯದಿಂದಾಗಿ ತಮ್ಮಎದುರಾಳಿ ಸೆರ್ಗೆಯ್ (ರಷ್ಯಾ) ಅವರೊಂದಿಗಿನ ಪಂದ್ಯದಿಂದ ಹಿಂದೆ ಸರಿದಿದ್ದರು. ಕಳೆದ ವರ್ಷದಿಂದಲೂ ಸುಮಿತ್  ಈ ಸಮಸ್ಯೆ ಎದುರಿಸುತ್ತಿದ್ದು ಕಝಕಿಸ್ತಾನದ  ಅಲ್ಮಾಟಿಯಲ್ಲಿ ನಡೆದ ಏಷ್ಯನ್ ಕ್ವಾಲಿಫೈಯರ್ ಮೊದಲು ಅವರು ಗಾಯದಿಂದ ಚೇತರಿಸಿಕೊಂಡರು ಹರಿಯಾಣ ಕುಸ್ತಿಪಟು ಈ ಸಂದರ್ಭದಲ್ಲಿ ಮೊಣಕಾಲಿನ ಗಾಯಕ್ಕೆ ಔಷಧಿ ತೆಗೆದುಕೊಂಡಿದ್ದಾಗಿ ಒಪ್ಪಿಕೊಂಡಿದ್ದಾರೆ.

“ನನ್ನ ಫಿಸಿಯೋಥೆರಪಿಸ್ಟ್  ಮೊಣಕಾಲಿನ ಗಾಯಕ್ಕೆ ನಾನು ತೆಗೆದುಕೊಂಡ ಔಷಧಿಗಳ ಬಗ್ಗೆ ಸಂಬಂಧಪಟ್ಟ ಅಧಿಕಾರಿಗಳಿಗೆ ಮಾಹಿತಿ ನೀಡಿದರು. ನಿರ್ಧಾರದ ಬಗ್ಗೆ ನನಗೆ(ತಾತ್ಕಾಲಿಕ ಅಮಾನತು) ಮಾಹಿತಿ ಇಲ್ಲ.ನನ್ನ ‘ಬಿ’ ಸ್ಯಾಂಪಲ್ ಅನ್ನು  ಪರೀಕ್ಷಿಸಲು ಶೀಘ್ರದಲ್ಲೇ ನಿರ್ಧರಿಸುತ್ತೇನೆ ”ಎಂದು 28 ವರ್ಷದ ಸುಮಿತ್ ದಿ ನ್ಯೂ ಇಂಡಿಯನ್ ಎಕ್ಸ್‌ಪ್ರೆಸ್‌ಗೆ ತಿಳಿಸಿದರು.

ಅರ್ಹತಾ ಸಮಯದಲ್ಲಿ ಸುಮಿತ್‌ ಅವರಿಂದ  ಸಂಗ್ರಹಿಸಿದ ಮಾದರಿಯಲ್ಲಿ ನಿಷೇಧಿತ ವಸ್ತುಗಳು(5-methylhexan-2-amine and 1,4 dimethylpentylamine)  ) ಕಂಡುಬಂದಿವೆ ಎಂದು ವ್ರೆಸ್ಲಿಂಗ್ ಫೆಡರೇಶನ್ ಆಫ್ ಇಂಡಿಯಾ (ಡಬ್ಲ್ಯುಎಫ್‌ಐ) ದೃಢಪಡಿಸಿದೆ. ಇದು ಉತ್ತೇಜಕ (ಎನರ್ಜಿ-ಬೂಸ್ಟರ್), ಇದು 2021 ರಲ್ಲಿ ಪ್ರಕಟವಾದ ವಿಶ್ವ ಡೋಪಿಂಗ್  ವಿರೋಧಿಏಜೆನ್ಸಿಯ ಪಟ್ಟಿಯಲ್ಲಿದೆ.

“ಈಗ, ಅವರು ಒಲಂಪಿಕ್ ಅರ್ಹತಾ ತಂಡದೊಡನೆ ಪೋಲೆಂಡ್ ಪ್ರವಾಸಕ್ಕಾಗಿ ತೆರಳುವುದಿಲ್ಲ. . ತಂಡವು ನಾಳೆ (ಶನಿವಾರ) ಹೊರಡಲಿದೆ. ಅವರು ಪೋಲೆಂಡ್ ರ್ಯಾಂಕಿಂಗ್ ಸರಣಿಯಲ್ಲಿ ಸ್ಪರ್ಧಿಸುತ್ತಾರೆ ಮತ್ತು ನಂತರ ಜುಲೈ 5 ರವರೆಗೆ ಅಲ್ಲಿ ಕ್ಯಾಂಪ್ ಮಾಡುತ್ತಾರೆ ”ಎಂದು ಡಬ್ಲ್ಯುಎಫ್‌ಐ ಸಹಾಯಕ ಕಾರ್ಯದರ್ಶಿ ವಿನೋದ್ ತೋಮರ್ ಹೇಳಿದರು.

ಸುಮಿತ್ ಅವರ ‘ಬಿ’ ಸ್ಯಾಂಪಲ್  ಪರೀಕ್ಷಿಸಲು ಜೂನ್ 10 ರವರೆಗೆ ಸಮಯವಿದೆ. ಅವರ ‘ಬಿ’ ಸ್ಯಾಂಪಲ್ ಕೂಡ ಪಾಸಿಟಿವ್ ಆಗಿದ್ದರೆ  ಕುಸ್ತಿಪಟುವನ್ನು ನಿಷೇಧಿಸಬಹುದು. ಕ್ರೀಡಾಕೂಟಕ್ಕೆ ಮುಂಚಿತವಾಗಿ ಭಾರತೀಯ ಕುಸ್ತಿಪಟು ಡೋಪ್ ಪರೀಕ್ಷೆಯಲ್ಲಿ ವಿಫಲವಾದ ಎರಡನೇ ಉದಾಹರಣೆ ಇದಾಗಿದೆ. ನರಸಿಂಗ್ ಯಾದವ್ ಅವರನ್ನು 2016 ರ ರಿಯೊ ಒಲಿಂಪಿಕ್ಸ್‌ಗೆ ಮುಂಚಿತವಾಗಿ ನಿಷೇಧಿತ ವಸ್ತುವಿನ ಸೇವನೆಗಾಗಿ ಪರೀಕ್ಷಿಸಲಾಯಿತು. ಕೊನೆಗೆ ಅವರಿಗೆ  ನಾಲ್ಕು ವರ್ಷಗಳ ನಿಷೇಧ ಹೇರಲಾಯಿತು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com