ಫ್ರೆಂಚ್ ಓಪನ್: ಬಾಲಕನಿಗೆ ಗೆಲುವಿನ 'ರಾಕೆಟ್' ನೀಡಿದ ಜೊಕೋವಿಕ್, ಕುಣಿದು ಕುಪ್ಪಳಿಸಿದ ಬಾಲಕ; ವಿಡಿಯೋ!

ಫ್ರೆಂಚ್ ಓಪನ್ 2021ರ ಫೈನಲ್ ಪಂದ್ಯದಲ್ಲಿ ಸ್ಟೆಫನೊಸ್ ಸಿಟ್ಸಿಪಾಸ್ ವಿರುದ್ಧ ಅಂತಿಮ ಮೂರು ಸೆಟ್ ಗಳಲ್ಲಿ ಗೆಲುವು ದಾಖಲಿಸಿ ಚಾಂಪಿಯನ್ ಪಟ್ಟ ಅಲಂಕರಿಸಿದ ನೊವಾಕ್ ಜೊಕೋವಿಕ್ ತಮ್ಮ ಗೆಲುವಿನ ರಾಕೆಟ್ ಅನ್ನು ಬಾಲಕನಿಗೆ ನೀಡಿದ್ದಾರೆ.

Published: 14th June 2021 05:20 PM  |   Last Updated: 14th June 2021 05:31 PM   |  A+A-


Djokovic

ಜೊಕೋವಿಚ್

Posted By : Vishwanath S
Source : AFP

ಪ್ಯಾರಿಸ್: ಫ್ರೆಂಚ್ ಓಪನ್ 2021ರ ಫೈನಲ್ ಪಂದ್ಯದಲ್ಲಿ ಸ್ಟೆಫನೊಸ್ ಸಿಟ್ಸಿಪಾಸ್ ವಿರುದ್ಧ ಅಂತಿಮ ಮೂರು ಸೆಟ್ ಗಳಲ್ಲಿ ಗೆಲುವು ದಾಖಲಿಸಿ ಚಾಂಪಿಯನ್ ಪಟ್ಟ ಅಲಂಕರಿಸಿದ ನೊವಾಕ್ ಜೊಕೋವಿಕ್ ತಮ್ಮ ಗೆಲುವಿನ ರಾಕೆಟ್ ಅನ್ನು ಬಾಲಕನಿಗೆ ನೀಡಿದ್ದಾರೆ. 

ಸಿಟ್ಸಿಪಾಸ್ ಮೊದಲ ಎರಡು ಸೆಟ್ ಗಳಲ್ಲಿ ಗೆಲುವು ದಾಖಲಿಸಿದ್ದರು. ಈ ವೇಳೆ ಇನ್ನೇನು ಮೂರನೇ ಸೆಟ್ ಗೆದ್ದು ಚಾಂಪಿಯನ್ ಆಗುತ್ತಾರೆ ಎಂದು ಎಲ್ಲರೂ ಭಾವಿಸಿದ್ದರೂ ಆದರೆ ಜೊಕೋವಿಕ್ ಫಿನಿಕ್ಸ್ ನಂತೆ ಎದ್ದುಬಂದು ಕೊನೆಯ ಮೂರು ಸೆಟ್ ಗಳಲ್ಲಿ ಗೆಲುವು ಸಾಧಿಸಿದ್ದರು. 19ನೇ ಗ್ರ್ಯಾಂಡ್ ಸ್ಲಾಂ ಪ್ರಶಸ್ತಿ ಮುಡಿಗೇರಿಸಿಕೊಂಡಿದ್ದರು. 

ಆದರೆ ಮೊದಲ ಎರಡು ಸೆಟ್ ಗಳಲ್ಲಿ ಜೊಕೋವಿಕ್ ಸೋತ್ತಿದ್ದಾಗ ಬಾಲಕ ಮಾತ್ರ ಸ್ಟೇಡಿಯಂನಲ್ಲಿ ನಿಂತು ಪ್ರೋತ್ಸಾಹಿಸುತ್ತಿದ್ದ. ಇದನ್ನು ಜೊಕೋವಿಕ್ ಗಮನಿಸಿದ್ದರು. ಇನ್ನು ಕೊನೆಯ ಸೆಟ್ ನಲ್ಲಿ ಗೆಲುವು ಸಾಧಿಸುತ್ತಿದ್ದಂತೆ ಜೊಕೋವಿಚ್ ಬಾಲಕ ಹತ್ತಿರಕ್ಕೆ ಬಂದು ಪ್ರೋತ್ಸಾಹಿಸಿದ ಈ ವೇಳೆ ಜೊಕೋವಿಚ್ ತಮ್ಮ ಗೆಲುವಿನ ರಾಕೆಟ್ ಅನ್ನು ಆತನಿಗೆ ನೀಡಿದರು.

ಜೊಕೋವಿಚ್ ಕೈಯಿಂದ ರಾಕೆಟ್ ಪಡೆದ ಬಾಲಕ ಕಣ್ಣೀರು ಹಾಕುತ್ತಾ ಕುಣಿದು ಕುಪ್ಪಳಿಸಿದ್ದಾನೆ. ಈ ವಿಡಿಯೋ ಇದೀಗ ವೈರಲ್ ಆಗಿದೆ. 

ಐದು ಸೆಟ್ ಗಳ ಜಿದ್ದಾಜಿದ್ದಿನ ಸೆಣಸಾಟದಲ್ಲಿ ಜೊಕೋವಿಟ್, ಸಿಟ್ಸಿಪಾಸ್ ವಿರುದ್ಧ 6-7 (6/8), 2-6, 6-3, 6-2, 6-4 ಅಂತರದಲ್ಲಿ ಗೆಲುವು ಸಾಧಿಸಿದ್ದಾರೆ. 


Stay up to date on all the latest ಕ್ರೀಡೆ news
Poll
Yediyurappa

ಕರ್ನಾಟಕ ಸಿಎಂ ಆಗಿ ಬಿ.ಎಸ್. ಯಡಿಯೂರಪ್ಪ ನಿರ್ಗಮನವು ರಾಜ್ಯದಲ್ಲಿ ಬಿಜೆಪಿಯ ಚುನಾವಣಾ ಭವಿಷ್ಯದ ಮೇಲೆ ಪರಿಣಾಮ ಬೀರುತ್ತದೆಯೇ?


Result
ಹೌದು
ಇಲ್ಲ
flipboard facebook twitter whatsapp