ಐಎಸ್ಎಲ್ 2020-21: ಎಟಿಕೆ ಮೋಹನ್ ಬಗಾನ್ ತಂಡವನ್ನು ಮಣಿಸಿದ ಮುಂಬೈ ಸಿಟಿಗೆ ಲೀಗ್ ಚಾಂಪಿಯನ್ ಪಟ್ಟ

ಪ್ರಬಲ ಎಟಿಕೆ ಮೋಹನ್ ಬಗಾನ್ ತಂಡವನ್ನು ಮಣಿಸಿ ಮುಂಬೈ ಸಿಟಿ ಎಫ್‌ಸಿ ತಂಡ ಇಂಡಿಯನ್ ಫುಟ್ಬಾಲ್ ಲೀಗ್ (ಐಎಸ್ಎಲ್) ಫುಟ್ಬಾಲ್ ಟೂರ್ನಿಯ ಲೀಗ್ ಚಾಂಪಿಯನ್ ಪಟ್ಟ ಅಲಂಕರಿಸಿದೆ.

Published: 01st March 2021 11:53 AM  |   Last Updated: 01st March 2021 11:55 AM   |  A+A-


Posted By : Raghavendra Adiga
Source : Online Desk

ನವದೆಹಲಿ: ಪ್ರಬಲ ಎಟಿಕೆ ಮೋಹನ್ ಬಗಾನ್ ತಂಡವನ್ನು ಮಣಿಸಿ ಮುಂಬೈ ಸಿಟಿ ಎಫ್‌ಸಿ ತಂಡ ಇಂಡಿಯನ್ ಫುಟ್ಬಾಲ್ ಲೀಗ್ (ಐಎಸ್ಎಲ್) ಫುಟ್ಬಾಲ್ ಟೂರ್ನಿಯ ಲೀಗ್ ಚಾಂಪಿಯನ್ ಪಟ್ಟ ಅಲಂಕರಿಸಿದೆ.

ನಿನ್ನೆ ರಾತ್ರಿ ನಡೆದ ಲೀಗ್ ಹಂತದ ಕಡೆಯ ಪಂದ್ಯದಲ್ಲಿ ಮುಂಬೈ ಸಿಟಿ ಎಫ್‌ಸಿ 2-0 ಗೋಲುಗಳಿಂದ ಜಯ ಸಾಧಿಸಿದೆ.

ಮುಂಬೈ ಎಫ್‌ಸಿ ಪರ ಏಳನೇ ನಿಮಿಷದಲ್ಲಿ ಮೋರ್ತಾಜಾ ಫಾಲ್ ಹಾಗೂ 39ನೇ ನಿಮಿಷದಲ್ಲಿ ಬಾರ್ತೋಲೋಮೆ ಒಗ್ಬಾಟೆ ಗೋಲು ಬಾರಿಸಿದ್ದರು.

ಇದೇ ವೇಳೆ ಅಗ್ರ ಸ್ಥಾನವನ್ನು ಕಳೆದುಕೊಂಡಿದ್ದರೂ, ಎಟಿಕೆ ಮೋಹನ್ ಬಗಾನ್ ತಮ್ಮ ಋತುವಿನಲ್ಲಿ ಸತತ ಎರಡನೇ ಹೀರೋ ಐಎಸ್ಎಲ್ ಪ್ರಶಸ್ತಿ ಉಳಿಸಿಕೊಳ್ಳುವ ಭರವಸೆಯನ್ನು ಹೊಂದಿದೆ.

Stay up to date on all the latest ಕ್ರೀಡೆ news
Poll
Kumbh-Covid-19

ಚುನಾವಣಾ ಸಮಾವೇಶ, ಕುಂಭಮೇಳ, ಧಾರ್ಮಿಕ ಸಭೆಗಳು ದೇಶದಲ್ಲಿ ಕೋವಿಡ್-19 ಪರಿಸ್ಥಿತಿಯನ್ನು ಹದಗೆಡಿಸುತ್ತಿವೆಯೇ?


Result
ಹೌದು, ಅದು ನಿಜ.
ಇಲ್ಲ, ಖಂಡಿತ ಅಲ್ಲ.
flipboard facebook twitter whatsapp