ಸ್ವಿಸ್ ಓಪನ್: ಆರಂಭಿಕ ಪಂದ್ಯದಲ್ಲಿ ಸಮೀರ್ ವರ್ಮಾರನ್ನು ಸೋಲಿಸಿದ ಕಿಡಂಬಿ ಶ್ರೀಕಾಂತ್

ಸ್ವಿಸ್ ಓಪನ್ ಬ್ಯಾಡ್ಮಿಂಟನ್ ಟೂರ್ನಿಯ ಮೊದಲ ಸುತ್ತಿನಲ್ಲಿ ಸಮೀರ್ ವರ್ಮಾ ಅವರನ್ನು ಭಾರತದ ಬ್ಯಾಡ್ಮಿಂಟನ್ ಆಟಗಾರ ಕಿಡಂಬಿ ಶ್ರೀಕಾಂತ್ ಬುಧವಾರ  ಸೋಲಿಸಿದ್ದಾರೆ.

Published: 03rd March 2021 07:26 PM  |   Last Updated: 03rd March 2021 07:38 PM   |  A+A-


Indian_shuttler_Kidambi_Srikanth1

ಕಿಡಂಬಿ ಶ್ರೀಕಾಂತ್

Posted By : Nagaraja AB
Source : The New Indian Express

ಬಾಸೆಲ್: ಸ್ವಿಸ್ ಓಪನ್ ಬ್ಯಾಡ್ಮಿಂಟನ್ ಟೂರ್ನಿಯ ಮೊದಲ ಸುತ್ತಿನಲ್ಲಿ ಸಮೀರ್ ವರ್ಮಾ ಅವರನ್ನು ಭಾರತದ ಬ್ಯಾಡ್ಮಿಂಟನ್ ಆಟಗಾರ ಕಿಡಂಬಿ ಶ್ರೀಕಾಂತ್ ಬುಧವಾರ  ಸೋಲಿಸಿದ್ದಾರೆ.

ಶ್ರೀಕಾಂತ್, ಸಮೀರ್  ವರ್ಮಾ ಅವರ  ವಿರುದ್ಧ 18-21, 21-18, 21-11ರಿಂದ ಜಯ ಸಾಧಿಸಿ ಪಂದ್ಯಾವಳಿಯ ಮುಂದಿನ ಸುತ್ತಿಗೆ ಅರ್ಹತೆ ಪಡೆದಿದ್ದಾರೆ.

ಮೊದಲ ಗೇಮ್ ನಲ್ಲಿ ಸಮೀರ್ ಉತ್ತಮ ರೀತಿಯ ಆಟವಾಡಿ ಶ್ರೀಕಾಂತ್ ವಿರುದ್ಧ 5-1 ಮುನ್ನಡೆ ಕಾಯ್ದುಕೊಂಡಿದ್ದರು. ಇಡೀ ಪಂದ್ಯದಲ್ಲಿ ಮುನ್ನಡೆ ಕಾಯ್ದುಕೊಂಡು 21-18 ಸೆಟ್ ಗಳಲ್ಲಿ ಗೆಲುವು ಸಾಧಿಸಿದ್ದರು.

ಮೊದಲ ಗೇಮ್ ನಲ್ಲಿ ಸೋತ ನಂತರ ಚುರುಕುಗೊಂಡ ಕಿಡಂಬಿ ಶ್ರೀಕಾಂತ್, ಮುಂದಿನ ಎರಡು ಗೇಮ್ ಗಳಲ್ಲಿ ಗೆಲುವು ಸಾಧಿಸಿದರು. ಎರಡನೇ ಗೇಮ್ ನಲ್ಲಿ ಸಮೀರ್ ತೀವ್ರ ಪೈಪೋಟಿ ಒಡ್ಡಿದ್ದರೂ ಮೂರನೇ ಪಂದ್ಯದಲ್ಲಿ ಶ್ರೀಕಾಂತ್  ಸಂಪೂರ್ಣ ಪ್ರಾಬಲ್ಯ ಮೆರೆದರು. 61 ನಿಮಿಷಗಳ ಕಾಲ ಪಂದ್ಯ ನಡೆಯಿತು.


Stay up to date on all the latest ಕ್ರೀಡೆ news
Poll
Rahul gandhi

ಕಾಂಗ್ರೆಸ್‌ನಲ್ಲಿನ ಯುವ, ಕ್ರಿಯಾಶೀಲ ನಾಯಕರಿಂದ ರಾಹುಲ್ ಗಾಂಧಿಗೆ ಅಭದ್ರತೆ ಕಾಡುತ್ತಿದೆಯೇ?


Result
ಹೌದು
ಇಲ್ಲ
flipboard facebook twitter whatsapp