35ನೇ ಅಂತರಾಷ್ಟ್ರೀಯ ಬಾಕ್ಸಿಂಗ್ ಪಂದ್ಯಾವಳಿ: ಸಿಮ್ರಂಜಿತ್ ಸೇರಿ ಮೂವರು ಫೈನಲ್ ಗೆ; ಕಂಚಿಗೆ ತೃಪ್ತಿಪಟ್ಟ ಮೇರಿ ಕೋಮ್
ಸ್ಪೇನ್ ನ ಕ್ಯಾಸ್ಟಲ್ಲನ್ ನಲ್ಲಿ ಮುಗಿದ 35ನೇ ಅಂತರಾಷ್ಟ್ರೀಯ ಬಾಕ್ಸಿಂಗ್ ಟೂರ್ನಮೆಂಟ್ ನಲ್ಲಿ ವಿಶ್ವ ಬೆಳ್ಳಿ ಪದಕ ವಿಜೇತೆ ಭಾರತದ ಸಿಮ್ರಂಜಿತ್ ಕೌರ್ 60 ಕೆಜಿ ವಿಭಾಗದಲ್ಲಿ ಇನ್ನಿಬ್ಬರೊಂದಿಗೆ ಅಂತಿಮ ಸುತ್ತು ಪ್ರವೇಶಿಸಿದ್ದು, ಎಂ ಸಿ ಮೇರಿ ಕೋಮ್ 51 ಕೆಜಿ ವಿಭಾಗದ ಬಾಕ್ಸಿಂಗ್ ನಲ್ಲಿ ಕಂಚಿನ ಪದಕಕ್ಕೆ ತೃಪ್ತಿ ಪಟ್ಟುಕೊಳ್ಳಬೇಕಾಯಿತು.
Published: 06th March 2021 01:52 PM | Last Updated: 06th March 2021 01:57 PM | A+A A-

ಎಂ ಸಿ ಮೇರಿ ಕೋಮ್
ನವದೆಹಲಿ: ಸ್ಪೇನ್ ನ ಕ್ಯಾಸ್ಟಲ್ಲನ್ ನಲ್ಲಿ ಮುಗಿದ 35ನೇ ಅಂತರಾಷ್ಟ್ರೀಯ ಬಾಕ್ಸಿಂಗ್ ಟೂರ್ನಮೆಂಟ್ ನಲ್ಲಿ ವಿಶ್ವ ಬೆಳ್ಳಿ ಪದಕ ವಿಜೇತೆ ಭಾರತದ ಸಿಮ್ರಂಜಿತ್ ಕೌರ್ 60 ಕೆಜಿ ವಿಭಾಗದಲ್ಲಿ ಇನ್ನಿಬ್ಬರೊಂದಿಗೆ ಅಂತಿಮ ಸುತ್ತು ಪ್ರವೇಶಿಸಿದ್ದು, ಎಂ ಸಿ ಮೇರಿ ಕೋಮ್ 51 ಕೆಜಿ ವಿಭಾಗದ ಬಾಕ್ಸಿಂಗ್ ನಲ್ಲಿ ಕಂಚಿನ ಪದಕಕ್ಕೆ ತೃಪ್ತಿ ಪಟ್ಟುಕೊಳ್ಳಬೇಕಾಯಿತು.
ಸಿಮ್ರಂಜಿತ್ ಕೌರ್ ಅವರೊಂದಿಗೆ ಚೊಚ್ಚಲ ಬಾರಿಗೆ ಆಡಿರುವ 57 ಕೆಜಿ ವಿಭಾಗದಲ್ಲಿ ಜಾಸ್ಮಿನ್ ಮತ್ತು ಏಷ್ಯನ್ ಚಾಂಪಿಯನ್ ಪೂಜಾ ರಾಣಿ 75 ಕೆಜಿ ವಿಭಾಗದಲ್ಲಿ ಅಂತಿಮ ಸುತ್ತು ಪ್ರವೇಶಿಸಿದ್ದಾರೆ.
ಜಾಸ್ಮಿನ್ ಅವರು ಇಟಲಿಯ ಸಿರಿನ್ ಚರಾಬಿ ಅವರನ್ನು ಸೋಲಿಸಿದರೆ ಸಿಮ್ರಂಜಿತ್ ಪೋರ್ಟರಿಕೊದ ಕಿರಿಯಾ ತಾಪಿಯಾ ಅವರನ್ನು ಸೋಲಿಸಿ ಅಂತಿಮ ಸುತ್ತು ಪ್ರವೇಶಿಸಿದರು.
75 ಕೆಜಿ ವಿಭಾಗದಲ್ಲಿ ಪೂಜಾ ಪನಮಾದ ಅತೆಯ್ನ ಬೈಲೊನ್ ಅವರನ್ನು ಸೋಲಿಸಿದ್ದಾರೆ. ಆದರೆ ಆರು ಬಾರಿ ವಿಶ್ವ ಚಾಂಪಿಯನ್ ಆಗಿರುವ ಮೇರಿ ಕೋಮ್ ಅವರು ಅಮೆರಿಕಾದ ವರ್ಜೀನಿಯಾ ಫುಚ್ಸ್ ಅವರ ಎದುರು ಸೋಲಬೇಕಾಗಿ ಬಂತು. ಈ ವರದಿ ಬರುವ ಹೊತ್ತಿಗೆ ಆರು ಮಂದಿ ಪುರುಷ ಬಾಕ್ಸರ್ ಗಳು ಫೈನಲ್ ಸುತ್ತಿನ ಪ್ರವೇಶಕ್ಕೆ ಸ್ಪರ್ಧೆ ನಡೆಸುತ್ತಿದ್ದರು.
ಮೊಹಮ್ಮದ್ ಹುಸಾಮುದ್ದೀನ್ (57 ಕೆಜಿ) ಪನಾಮಾದ ಒರ್ಲ್ಯಾಂಡೊ ಮಾರ್ಟಿನೆಜ್ ವಿರುದ್ಧ ಸೆಣಸಲಿದ್ದರೆ, ಮನೀಶ್ ಕೌಶಿಕ್ (63 ಕೆಜಿ) ಫ್ರಾನ್ಸ್ನ ಲೌನ್ಸ್ ಹಮ್ರೌಯಿ ವಿರುದ್ಧ ಸೆಣಸಲಿದ್ದಾರೆ. ಅನುಭವಿ ವಿಕಾಸ್ ಕ್ರಿಶನ್ (69 ಕೆಜಿ) ಕ ಖಜಕಿಸ್ತಾನದ ಅಬ್ಲೈಖಾನ್ ಝುಸುಪೊವ್ ವಿರುದ್ಧ ಸೆಣಸಲಿದ್ದಾರೆ.
ಸುಮಿತ್ ಸಾಂಗ್ವಾನ್ (81 ಕೆಜಿ) ಫ್ರಾನ್ಸ್ನ ರಾಫೆಲ್ ಮೊನ್ನಿಯನ್ನು ಎದುರಿಸಲಿದ್ದಾರೆ ಮತ್ತು ಸತೀಶ್ ಕುಮಾರ್ (+ 91 ಕೆಜಿ) ಲಿಥುವೇನಿಯಾದ ಜೊನಾಸ್ ಜಾಝೆವಿಸಿಯಸ್ ಅವರನ್ನು ಸೆಮಿಫೈನಲ್ ಎದುರಾಳಿಯನ್ನಾಗಿ ಹೊಂದಿದ್ದಾರೆ. 75 ಕೆಜಿ ವಿಭಾಗದಲ್ಲಿ ಆಶಿಶ್ ಕುಮಾರ್ ರೌಮೇನಿಯಾ ಅವರ ಡುಮಿಟ್ರು ವಿಕೋಲ್ ಜೊತೆ ಹೋರಾಡಲಿದ್ದಾರೆ. ರಷ್ಯಾ, ಯುಎಸ್ಎ, ಇಟಲಿ, ಖಜಕಿಸ್ತಾನ್ ಸೇರಿದಂತೆ 17 ದೇಶಗಳ ಬಾಕ್ಸರ್ ಗಳು ಈ ಸ್ಪರ್ಧೆಯಲ್ಲಿ ಭಾಗವಹಿಸುತ್ತಿದ್ದಾರೆ.