ಸ್ವಿಸ್ ಓಪನ್ ಬ್ಯಾಡ್ಮಿಂಟನ್: ಸಿಂಧು ಫೈನಲ್ ಗೆ

ಭಾರತದ ಸ್ಟಾರ್ ಬ್ಯಾಡ್ಮಿಂಟನ್ ಆಟಗಾರ್ತಿ ಪಿ.ವಿ.ಸಿಂಧು ಸ್ವಿಸ್ ಓಪನ್ 2021 ಬ್ಯಾಡ್ಮಿಂಟನ್ ಟೂರ್ನಿಯ ಸೆಮಿಫೈನಲ್ಸ್ ನಲ್ಲಿ ಗೆಲುವು ದಾಖಲಿಸಿದ್ದು, ಪ್ರಶಸ್ತಿ ಸುತ್ತಿಗೆ ಪ್ರವೇಶ ಪಡೆದಿದ್ದಾರೆ.

Published: 06th March 2021 07:43 PM  |   Last Updated: 06th March 2021 07:43 PM   |  A+A-


World champion PV Sindhu enters Swiss Open final

ಸ್ವಿಸ್ ಓಪನ್ ಬ್ಯಾಡ್ಮಿಂಟನ್: ಸಿಂಧು ಫೈನಲ್ ಗೆ

Posted By : Srinivas Rao BV
Source : The New Indian Express

ಬಾಸೆಲ್: ಭಾರತದ ಸ್ಟಾರ್ ಬ್ಯಾಡ್ಮಿಂಟನ್ ಆಟಗಾರ್ತಿ ಪಿ.ವಿ.ಸಿಂಧು ಸ್ವಿಸ್ ಓಪನ್ 2021 ಬ್ಯಾಡ್ಮಿಂಟನ್ ಟೂರ್ನಿಯ ಸೆಮಿಫೈನಲ್ಸ್ ನಲ್ಲಿ ಗೆಲುವು ದಾಖಲಿಸಿದ್ದು, ಪ್ರಶಸ್ತಿ ಸುತ್ತಿಗೆ ಪ್ರವೇಶ ಪಡೆದಿದ್ದಾರೆ.

ಒಲಿಂಪಿಕ್ಸ್ ನಲ್ಲಿ ರಜತ ಪದಕ ವಿಜೇತೆ ಸಿಂಧು ಉಪಾಂತ್ಯ ಪಂದ್ಯದಲ್ಲಿ 22-20, 21-10 ರಿಂದ ಡೆನ್ಮಾರ್ಕ್ ಮಿಯಾ ಬ್ಲಿಕ್ಫೆಲ್ಡ್ ವಿರುದ್ಧ ಗೆಲುವು ದಾಖಲಿಸಿದರು.

43 ನಿಮಿಷಗಳ ಕಾದಾಟದಲ್ಲಿ ಸಿಂಧು ಸೊಗಸಾದ ಪ್ರದರ್ಶನ ನೀಡಿ ಗಮನ ಸೆಳೆದರು. ಈ ಜೋಡಿ ಒಟ್ಟು ಐದು ಬಾರಿ ಮುಖಾಮುಖಿಯಾಗಿದ್ದು, ನಾಲ್ಕರಲ್ಲಿ ಸಿಂಧು ಜಯ ಸಾಧಿಸಿದ್ದಾರೆ. ಮೊದಲ ಗೇಮ್ ನಲ್ಲಿ ಉಭಯ ಆಟಗಾರ್ತಿಯರು ಜಿದ್ದಾಜಿದ್ದಿನ ಕಾದಾಟ ನಡೆಸಿದರು. 7-7 ರಿಂದ ಸಮಬಲ ಸಾಧಿಸಿದ್ದ ಪಂದ್ಯದಲ್ಲಿ ಸಿಂಧು ಭರ್ಜರಿ ಪ್ರದರ್ಶನ ನೀಡಿ ಅಂಕಗಳನ್ನು ಕಲೆ ಹಾಕಿದರು.

ಅಲ್ಲದೆ ಕೊನೆಯ ಕ್ಷಣದಲ್ಲಿ ಉತ್ತಮ ಪ್ರದರ್ಶನ ನೀಡಿ ಗೇಮ್ ಗೆದ್ದರು. ಎರಡನೇ ಗೇಮ್ ನಲ್ಲಿ ಸಿಂಧು ಅಂಕಗಳಲ್ಲಿ ಮುನ್ನಡೆ ಕಾಯ್ದುಕೊಂಡು ಫೈನಲ್ ಗೆ ಪ್ರವೇಶಿಸಿದರು. ಆರನೇ ಶ್ರೇಯಾಂಕದ ಥೈಲ್ಯಾಂಡ್‌ನ ಕಾಂಟಾಫೊನ್ ವಾಂಗ್‌ಚೆರಾನ್‌ರನ್ನು ಶ್ರೀಕಾಂತ್ 44 ನಿಮಿಷಗಳಲ್ಲಿ 21-19 21-15ರಿಂದ ಸೋಲಿಸಿದರು. ಅಂತಿಮ ನಾಲ್ಕನೇ ಸ್ಥಾನದಲ್ಲಿ ಅಗ್ರ ಶ್ರೇಯಾಂಕದ ಡೆನ್ಮಾರ್ಕ್‌ನ ವಿಕ್ಟರ್ ಆಕ್ಸೆಲ್ಸೆನ್ ಅವರ ಸವಾಲನ್ನು ಶ್ರೀಕಾಂತ್ ಎದುರಿಸಲಿದ್ದಾರೆ. ಇತರ ಪುರುಷರ ಸಿಂಗಲ್ಸ್ ಪಂದ್ಯಗಳಲ್ಲಿ ಬಿ ಸಾಯಿ ಪ್ರಣೀತ್ ಮತ್ತು ಅಜಯ್ ಜಯರಾಮ್ ಕಳೆದ ಎಂಟರಲ್ಲಿ ಸೋಲು ಅನುಭವಿಸಿದರು. ಮಿಶ್ರ ಡಬಲ್ಸ್‌ನಲ್ಲಿ ಸತ್ವಿಕ್ ಸಾಯಿರಾಜ್ ರಾಂಕಿ ರೆಡ್ಡಿ ಮತ್ತು ಅಶ್ವಿನಿ ಪೊನ್ನಪ್ಪ ಸೋತರೆ, ಪುರುಷರ ಡಬಲ್ಸ್‌ನಲ್ಲಿ ಸೆಮಿಫೈನಲ್ಸ್ ಗೆ ಸಾತ್ವಿಕ್ ಸಾಯಿರಾಜ್ ಮತ್ತು ಚಿರಾಗ್ ಶೆಟ್ಟಿ ಮುನ್ನಡೆ ಸಾಧಿಸಿದ್ದಾರೆ.


Stay up to date on all the latest ಕ್ರೀಡೆ news
Poll
Rahul gandhi

ಕಾಂಗ್ರೆಸ್‌ನಲ್ಲಿನ ಯುವ, ಕ್ರಿಯಾಶೀಲ ನಾಯಕರಿಂದ ರಾಹುಲ್ ಗಾಂಧಿಗೆ ಅಭದ್ರತೆ ಕಾಡುತ್ತಿದೆಯೇ?


Result
ಹೌದು
ಇಲ್ಲ
flipboard facebook twitter whatsapp