ಸ್ವಿಸ್ ಓಪನ್: ಸಿಂಧುಗೆ ಸೋಲು

ವಿಶ್ವ ಚಾಂಪಿಯನ್ ಪಿ.ವಿ.ಸಿಂಧು ಅವರು ಇಲ್ಲಿ ನಡೆಯುತ್ತಿರುವ ಸ್ವಿಸ್ ಓಪನ್ ಬ್ಯಾಡ್ಮಿಂಟನ್ ಟೂರ್ನಿಯ ಫೈನಲ್ ಪಂದ್ಯದಲ್ಲಿ ಸೋಲು ಕಂಡಿದ್ದು, ಪದಕ ಗೆಲ್ಲುವ ಆಸೆಯನ್ನು ಕೈ ಚೆಲ್ಲಿದ್ದಾರೆ.

Published: 07th March 2021 08:43 PM  |   Last Updated: 07th March 2021 08:43 PM   |  A+A-


ಪಿವಿ ಸಿಂಧು

Posted By : Raghavendra Adiga
Source : UNI

ಬಾಸೆಲ್: ವಿಶ್ವ ಚಾಂಪಿಯನ್ ಪಿ.ವಿ.ಸಿಂಧು ಅವರು ಇಲ್ಲಿ ನಡೆಯುತ್ತಿರುವ ಸ್ವಿಸ್ ಓಪನ್ ಬ್ಯಾಡ್ಮಿಂಟನ್ ಟೂರ್ನಿಯ ಫೈನಲ್ ಪಂದ್ಯದಲ್ಲಿ ಸೋಲು ಕಂಡಿದ್ದು, ಪದಕ ಗೆಲ್ಲುವ ಆಸೆಯನ್ನು ಕೈ ಚೆಲ್ಲಿದ್ದಾರೆ.

ಭಾನುವಾರ ನಡೆದ ಮಹಿಳೆಯರ ಸಿಂಗಲ್ಸ್ ಪ್ರಶಸ್ತಿ ಸುತ್ತಿನ ಕಾದಾಟದಲ್ಲಿ ಒಲಿಂಪಿಕ್ಸ್ ಫೈನಲ್ ನಲ್ಲಿ ಮುಖಾಮುಖಿಯಾಗಿದ್ದ ಸಿಂಧು ಹಾಗೂ ಸ್ಪೇನ್ ನ ಕರೋಲಿನಾ ಮರಿನ್ ಕಾಣಿಸಿಕೊಂಡರು. ಮಹತ್ವದ ಪಂದ್ಯದಲ್ಲಿ ಸ್ಪೇನ್ ನ ಸ್ಟಾರ್ ಆಟಗಾರ್ತಿ ಭರ್ಜರಿ ಪ್ರದರ್ಶನ ನೀಡಿ ಗೆಲುವು ದಾಖಲಿಸಿದರು. ಫೈನಲ್ ಪಂದ್ಯದಲ್ಲಿ ಸಿಂಧು 12-21, 05-21 ರಿಂದ ಮರಿನ್ ವಿರುದ್ಧ ನಿರಾಸೆ ಅನುಭವಿಸಿದರು

ಮೆರಿನ್ ಆಟದ ಮೇಲೆ ಸಂಪೂರ್ಣ ನಿಯಂತ್ರಣ ಸಾಧಿಸಿದ್ದು ಸಿಂಧುಗೆ ಯಾವ ಸುಲಭ ಅಂಕಗಳೂ ಸಿಕ್ಕಿಲ್ಲ. ಮೆರಿನ್ ಕೇವಲ 35 ನಿಮಿಷಗಳಲ್ಲಿ ಸಿಂಧುವನ್ನು ಸೋಲಿಸಿದ್ದರು.

ಇದಕ್ಕೆ ಮುನ್ನ ಸಿಂಧು ಸೆಮಿಫೈನಲ್ಸ್ ನಲ್ಲಿ ಡೆನ್ಮಾರ್ಕ್ ಮಿಯಾ ಬ್ಲಿಕ್ಫೆಲ್ಡ್ ವಿರುದ್ಧ 22-20, 21-10 ರಿಂದ ಗೆಲುವು ಸಾಧಿಸಿ ಪ್ರಶಸ್ತಿಯ ಸುತ್ತಿಗೆ ಬಂದಿದ್ದರು.


Stay up to date on all the latest ಕ್ರೀಡೆ news
Poll
Yediyurappa

ಕರ್ನಾಟಕ ಸಿಎಂ ಆಗಿ ಬಿ.ಎಸ್. ಯಡಿಯೂರಪ್ಪ ನಿರ್ಗಮನವು ರಾಜ್ಯದಲ್ಲಿ ಬಿಜೆಪಿಯ ಚುನಾವಣಾ ಭವಿಷ್ಯದ ಮೇಲೆ ಪರಿಣಾಮ ಬೀರುತ್ತದೆಯೇ?


Result
ಹೌದು
ಇಲ್ಲ
flipboard facebook twitter whatsapp