ರೋಮ್ ರೆಸ್ಲಿಂಗ್: ಎರಡನೇ ಬಾರಿ ಚಿನ್ನದ ಪದಕ ಗೆದ್ದ ವಿನೇಶ್ ಫೋಗಟ್!

ರೋಂನಲ್ಲಿ ಮುಗಿದಿರುವ ಮ್ಯಾಟಿಯೊ ಪೆಲಿಕೋನ್ ಶ್ರೇಯಾಂಕ ಸರಣಿಯಲ್ಲಿ ಕೆನಡಾದ ಡಯಾನ ಮೇರಿ ಹೆಲೆನ್ ವೈಕರ್ ಅವರನ್ನು 53ಕೆಜಿ ಚಿನ್ನ ವಿಭಾಗದಲ್ಲಿ ಭಾರತದ ಕುಸ್ತಿಪಟು ವಿನೇಶ್ ಫೋಗಟ್ ಸೋಲಿಸಿದ್ದಾರೆ.

Published: 07th March 2021 10:30 AM  |   Last Updated: 07th March 2021 10:30 AM   |  A+A-


Vinesh Phogat

ವಿನೇಶ್ ಫೋಗಟ್

Posted By : Sumana Upadhyaya
Source : The New Indian Express

ಚೆನ್ನೈ: ರೋಂನಲ್ಲಿ ಮುಗಿದಿರುವ ಮ್ಯಾಟಿಯೊ ಪೆಲಿಕೋನ್ ಶ್ರೇಯಾಂಕ ಸರಣಿಯಲ್ಲಿ ಕೆನಡಾದ ಡಯಾನ ಮೇರಿ ಹೆಲೆನ್ ವೈಕರ್ ಅವರನ್ನು 53ಕೆಜಿ ಚಿನ್ನ ವಿಭಾಗದಲ್ಲಿ ಭಾರತದ ಕುಸ್ತಿಪಟು ವಿನೇಶ್ ಫೋಗಟ್ ಸೋಲಿಸಿದ್ದಾರೆ.

ಒಂದೇ ವಾರದಲ್ಲಿ ವಿನೇಶ್ ಅವರ ಎರಡನೇ ಚಿನ್ನದ ಪದಕದ ಗೆಲುವು ಇದಾಗಿದ್ದು, ಕಳೆದ ಭಾನುವಾರ ಉಕ್ರೇನ್ ನ ಕುಸ್ತಿಪಟು ಮೆಮೋರಿಯಲ್ ಅವರನ್ನು ಕೈವ್ ನಲ್ಲಿ ಸೋಲಿಸಿದ್ದರು. ಇದಕ್ಕೂ ಮುನ್ನ, ಸರಿತಾ ಮೊರ್ 57 ಕೆಜಿ ಬೆಳ್ಳಿ ಮತ್ತು ಗ್ರೀಕೋ-ರೋಮನ್ ಕುಸ್ತಿಪಟು ಕುಲದೀಪ್ ಮಲಿಕ್ 72 ಕೆಜಿಯಲ್ಲಿ ಕಂಚು ಪಡೆದರು.

ಗ್ರೀಕೋ-ರೋಮನ್ ವಿಭಾಗದಲ್ಲಿ ಭಾರತ ಕಳೆದ ಶುಕ್ರವಾರ ಮೂರು ಕಂಚಿನ ಪದಕಗಳನ್ನು ಗಳಿಸಿತ್ತು. ಟೋಕಿಯೊ ಒಲಿಂಪಿಕ್ಸ್‌ಗೆ ಇದುವರೆಗೆ ಅರ್ಹತೆ ಪಡೆದ ದೇಶದ ಏಕೈಕ ಮಹಿಳಾ ಕುಸ್ತಿಪಟು ವಿನೇಶ್ ಫೋಗಟ್ ಆಗಿದ್ದು, ನಮ್ಮ ದೇಶದವರೇ ಆದ ನಂದಿನಿ ಸಲೋಖೆ ವಿರುದ್ಧ 4-0 ಅಂತರದಿಂದ ಜಯಗಳಿಸಿದರು.


Stay up to date on all the latest ಕ್ರೀಡೆ news
Poll
Yediyurappa

ಕರ್ನಾಟಕ ಸಿಎಂ ಆಗಿ ಬಿ.ಎಸ್. ಯಡಿಯೂರಪ್ಪ ನಿರ್ಗಮನವು ರಾಜ್ಯದಲ್ಲಿ ಬಿಜೆಪಿಯ ಚುನಾವಣಾ ಭವಿಷ್ಯದ ಮೇಲೆ ಪರಿಣಾಮ ಬೀರುತ್ತದೆಯೇ?


Result
ಹೌದು
ಇಲ್ಲ
flipboard facebook twitter whatsapp