ಮ್ಯಾಟಿಯೊ ಪೆಲಿಕೋನ್ ರ್ಯಾಂಕಿಂಗ್ ಕುಸ್ತಿ: ಭಜರಂಗ್ ಪುನಿಯಾಗೆ ಚಿನ್ನ

ಟೋಕಿಯೊ ಒಲಿಂಪಿಕ್ಸ್‌ನಲ್ಲಿ ಭಾರತದ ಅತಿದೊಡ್ಡ ಪದಕ ಭರವಸೆ ಮೂಡಿಸಿರುವ ಭಜರಂಗ್ ಪುನಿಯಾ ಇಟಲಿಯಲ್ಲಿ ನಡೆದ ಮ್ಯಾಟಿಯೊ ಪೆಲಿಕೋನ್ ರ್ಯಾಂಕಿಂಗ್ ಕುಸ್ತಿ ಸರಣಿಯ 65 ಕೆಜಿ ವಿಭಾಗದಲ್ಲಿ ಮಂಗೋಲಿಯಾದ ತುಲ್ಗಾ ತುಮೂರ್ ಒಚಿರ್ಕೊ ಅವರನ್ನು ಸೋಲಿಸಿ ಚಿನ್ನದ ಪದಕ ಗೆದ್ದರು.

Published: 09th March 2021 09:39 AM  |   Last Updated: 09th March 2021 12:32 PM   |  A+A-


ಭಜರಂಗ್ ಪುನಿಯಾ

Posted By : Raghavendra Adiga
Source : UNI

ನವದೆಹಲಿ: ಟೋಕಿಯೊ ಒಲಿಂಪಿಕ್ಸ್‌ನಲ್ಲಿ ಭಾರತದ ಅತಿದೊಡ್ಡ ಪದಕ ಭರವಸೆ ಮೂಡಿಸಿರುವ ಭಜರಂಗ್ ಪುನಿಯಾ ಇಟಲಿಯಲ್ಲಿ ನಡೆದ ಮ್ಯಾಟಿಯೊ ಪೆಲಿಕೋನ್ ರ್ಯಾಂಕಿಂಗ್ ಕುಸ್ತಿ ಸರಣಿಯ 65 ಕೆಜಿ ವಿಭಾಗದಲ್ಲಿ ಮಂಗೋಲಿಯಾದ ತುಲ್ಗಾ ತುಮೂರ್ ಒಚಿರ್ಕೊ ಅವರನ್ನು ಸೋಲಿಸಿ ಚಿನ್ನದ ಪದಕ ಗೆದ್ದರು.ಇದರೊಂದಿಗೆ ಅವರು ಮತ್ತೆ ತಮ್ಮ ತೂಕ ವಿಭಾಗದಲ್ಲಿ ವಿಶ್ವದ ಪ್ರಥಮ ಸ್ಥಾನವನ್ನು ಪಡೆದರು.

ಅಂತಿಮ ಕ್ಷಣಗಳಲ್ಲಿ ಭಜರಂಗ್ ಹಿಂದೆ ಬಿದ್ದಿದ್ದರು ಆದರೆ ಕೊನೆಯ 30 ಸೆಕೆಂಡುಗಳಲ್ಲಿ ಎರಡು ಅಂಕಗಳನ್ನು ಗಳಿಸುವ ಮೂಲಕ ಮತ್ತು ತಮ್ಮ ಕ್ಷಮತೆ ಸಾಬೀತು ಪಡಿಸಿದರು. ಅಲ್ಲದೆ ಚಿನ್ನದ ಪದಕಕ್ಕೆ ಕೊರಳೊಡ್ಡಿದರು. ಈ ಮೂಲಕ ಮೊದಲ ಸ್ಥಾನಕ್ಕೆ ಏರಿದರು. ಈ ಸ್ಪರ್ಧೆಯ ಮೊದಲು ಭಜರಂಗ್ ಎರಡನೇ ಸ್ಥಾನದಲ್ಲಿದ್ದರು.

ಇದಲ್ಲದೆ ವಿಶಾಲ್ ಕಾಳಿರಮಣ ಅವರು ಒಲಿಂಪಿಕ್ ಅಲ್ಲದ 70 ಕೆಜಿ ವಿಭಾಗದಲ್ಲಿ ಕಜಕಿಸ್ಥಾನದ ಸಿರ್ಬಾಜ್ ತಲ್ಗತ್ ವಿರುದ್ಧ 5-1 ಅಂತರದಲ್ಲಿ ಗೆದ್ದು ಕಂಚಿನ ಪದಕ ಗಳಿಸಿದ್ದಾರೆ. ಏತನ್ಮಧ್ಯೆ, ನಾಲ್ಕು ವರ್ಷಗಳ ಡೋಪಿಂಗ್ ನಿಷೇಧದ ನಂತರ ಇತ್ತೀಚೆಗೆ ಸ್ಪರ್ಧಾತ್ಮಕ ಕುಸ್ತಿಗೆ ಮರಳಿದ್ದ ನರಸಿಂಗ್ ಪಂಚಮ್ ಯಾದವ್, ಕಜಕಿಸ್ಥಾನದ ಡೇನಿಯಾರ್ ಕೈಸಾನೋವ್ ವಿರುದ್ಧ 0-5ರಿಂದ ಸೋಲು ಕಂಡರು.

ಪಂದ್ಯಾವಳಿಯಲ್ಲಿ ಭಾರತ ಏಳು ಪದಕಗಳನ್ನು ತನ್ನದಾಗಿಸಿಕೊಂಡಿದೆ. ಮಹಿಳಾ ಸ್ಪರ್ಧೆಯಲ್ಲಿ ವಿನೇಶ್ ಫೋಗಾಟ್ ಮತ್ತು ಸರಿತಾ ಮೊರ್ ಕ್ರಮವಾಗಿ ಚಿನ್ನ ಮತ್ತು ಬೆಳ್ಳಿ ಪದಕ ಗಳಿಸಿಕೊಂಡಿದ್ದಾರೆ./ ಗ್ರೀಕೋ ರೋಮನ್ ಕುಸ್ತಿಪಟುಗಳು - ನೀರಜ್ (63 ಕೆಜಿ), ಕುಲದೀಪ್ ಮಲಿಕ್ (72 ಕೆಜಿ), ನವೀನ್ (130 ಕೆಜಿ) - ಮೂರು ಕಂಚಿನ ಪದಕಗಳನ್ನು ಜಯಿಸಿದ್ದಾರೆ.

Stay up to date on all the latest ಕ್ರೀಡೆ news
Poll
Kumbh-Covid-19

ಚುನಾವಣಾ ಸಮಾವೇಶ, ಕುಂಭಮೇಳ, ಧಾರ್ಮಿಕ ಸಭೆಗಳು ದೇಶದಲ್ಲಿ ಕೋವಿಡ್-19 ಪರಿಸ್ಥಿತಿಯನ್ನು ಹದಗೆಡಿಸುತ್ತಿವೆಯೇ?


Result
ಹೌದು, ಅದು ನಿಜ.
ಇಲ್ಲ, ಖಂಡಿತ ಅಲ್ಲ.
flipboard facebook twitter whatsapp