ಕೊನೇರು ಹಂಪಿಗೆ 'ಬಿಬಿಸಿ ಇಂಡಿಯನ್ ಸ್ಪೋರ್ಟ್ಸ್ ವುಮನ್ ಆಫ್ ದಿ ಇಯರ್' ಪ್ರಶಸ್ತಿ
ಚೆಸ್ ಆಟಗಾರ್ತಿ ಕೊನೇರು ಹಂಪಿಗೆ 2020 ರ ಬಿಬಿಸಿ ಇಂಡಿಯನ್ ಸ್ಪೋರ್ಟ್ಸ್ ವುಮನ್ ಆಫ್ ದಿ ಇಯರ್ ಪ್ರಶಸ್ತಿ ಲಭಿಸಿದೆ. ಈ ಪ್ರಶಸ್ತಿಯನ್ನು ಸಾರ್ವಜನಿಕ ಮತದ ಆಧಾರದ ಮೇಲೆ ಹಂಪಿ ಅವರಿಗೆ ನೀಡಲಾಗಿದೆ.
Published: 09th March 2021 11:47 AM | Last Updated: 09th March 2021 12:33 PM | A+A A-

ಕೊನೇರು ಹಂಪಿ
ನವದೆಹಲಿ: ಚೆಸ್ ಆಟಗಾರ್ತಿ ಕೊನೇರು ಹಂಪಿಗೆ 2020 ರ ಬಿಬಿಸಿ ಇಂಡಿಯನ್ ಸ್ಪೋರ್ಟ್ಸ್ ವುಮನ್ ಆಫ್ ದಿ ಇಯರ್ ಪ್ರಶಸ್ತಿ ಲಭಿಸಿದೆ. ಈ ಪ್ರಶಸ್ತಿಯನ್ನು ಸಾರ್ವಜನಿಕ ಮತದ ಆಧಾರದ ಮೇಲೆ ಹಂಪಿ ಅವರಿಗೆ ನೀಡಲಾಗಿದೆ.
"ಒಳಾಂಗಣ ಆಟವಾಗಿರುವುದರಿಂದ, ಭಾರತದಲ್ಲಿ ಕ್ರಿಕೆಟ್ನಂತಹ ಕ್ರೀಡೆಗಳಷ್ಟು ಚೆಸ್ ಗಮನ ಸೆಳೆಯುವುದಿಲ್ಲ. ಆದರೆ ಈ ಪ್ರಶಸ್ತಿ ಮೂಲಕ ಆಟವು ಜನರ ಗಮನವನ್ನು ಸೆಳೆಯುತ್ತದೆ ಎಂದು ನಾನು ಭಾವಿಸುತ್ತೇನೆ" ಪ್ರಶಸ್ತಿ ವಿಜೇತರಾದ ಹಂಪಿ ಹೇಳಿದ್ದಾರೆ.
"ನನ್ನ ಇಚ್ಚಾಶಕ್ತಿ ಮತ್ತು ಆತ್ಮವಿಶ್ವಾಸದಿಂದಾಗಿ ನಾನು ವರ್ಷಗಳಿಂದ ಗೆಲ್ಲುತ್ತಾ ಬಂದಿದ್ದೇನೆ. ಮಹಿಳಾ ಆಟಗಾರ್ತಿಯರು ತಾವು ಆಟದಿಂದ ದೂರ ಉಳಿವ ಬಗ್ಗೆ ಎಂದೂ ಯೋಚಿಸಬಾರದು. ಮದುವೆ ಮತ್ತು ಮಾತೃತ್ವವು ನಮ್ಮ ಜೀವನದ ಒಂದು ಭಾಗವಾಗಿದೆ ಮತ್ತು ಅದಕ್ಕಾಗಿ ತಮ್ಮ ಜೀವನದ ಗುರಿ ಬದಲಿಸಬಾರದು" ಎಂದು ಅವರು ಹೇಳಿದರು.
ಎರಡು ವರ್ಷಗಳ ಮಾತೃತ್ವದ ವಿರಾಮದ ಬಳಿಕ ಕೊನೇರು ಹಂಪಿ 2019 ರ ಡಿಸೆಂಬರ್ನಲ್ಲಿ ನಡೆದ ವರ್ಲ್ಡ್ ರಾಪಿಡ್ ಚೆಸ್ ಚಾಂಪಿಯನ್ಶಿಪ್ ಪ್ರಶಸ್ತಿ ಗೆದ್ದಿದ್ದರು. ಅಲ್ಲದೆ 2020 ರಲ್ಲಿ ಕೈರ್ನ್ಸ್ ಕಪ್ ಸಹ ತಮ್ಮದಾಗಿಸಿಕೊಂಡರು.
ಹಂಪಿ 2002 ರಲ್ಲಿ ತನ್ನ 15 ನೇ ವಯಸ್ಸಿನಲ್ಲಿ ಕಿರಿಯ ಗ್ರ್ಯಾಂಡ್ ಮಾಸ್ಟರ್ ಆದರು. 2003 ರಲ್ಲಿ ಅರ್ಜುನ ಪ್ರಶಸ್ತಿ ಮತ್ತು 2007 ರಲ್ಲಿ ಪದ್ಮಶ್ರೀ ಪ್ರಶಸ್ತಿ ಅವರಿಗೆ ಲಭಿಸಿದೆ.