ಭಾರತದ ಫುಟ್ ಬಾಲ್ ತಂಡದ ನಾಯಕ ಸುನಿಲ್ ಚೆಟ್ರಿಗೆ ಕೋವಿಡ್-19 ಪಾಸಿಟಿವ್ 

ಭಾರತದ ಫುಟ್ ಬಾಲ್ ತಂಡದ ನಾಯಕ ಸುನಿಲ್ ಚೆಟ್ರಿಗೆ ಕೋವಿಡ್-19 ಪಾಸಿಟಿವ್ ದೃಢಪಟ್ಟಿದೆ. ಆದಾಗ್ಯೂ, ತಾನು ಚೆನ್ನಾಗಿದ್ದು, ಚೇತರಿಸಿಕೊಳ್ಳುತ್ತಿರುವುದಾಗಿ ಅವರು ತಿಳಿಸಿದ್ದಾರೆ. 

Published: 11th March 2021 06:28 PM  |   Last Updated: 11th March 2021 06:35 PM   |  A+A-


Sunil_Chhetri1

ಸುನಿಲ್ ಚೆಟ್ರಿ

Posted By : Nagaraja AB
Source : The New Indian Express

ನವದೆಹಲಿ: ಭಾರತದ ಫುಟ್ ಬಾಲ್ ತಂಡದ ನಾಯಕ ಸುನಿಲ್ ಚೆಟ್ರಿಗೆ ಕೋವಿಡ್-19 ಪಾಸಿಟಿವ್ ದೃಢಪಟ್ಟಿದೆ. ಆದಾಗ್ಯೂ, ತಾನು ಚೆನ್ನಾಗಿದ್ದು, ಚೇತರಿಸಿಕೊಳ್ಳುತ್ತಿರುವುದಾಗಿ ಅವರು ತಿಳಿಸಿದ್ದಾರೆ. 

ಶೀಘ್ರದಲ್ಲಿಯೇ ಫುಟ್ ಬಾಲ್ ಮೈದಾನಕ್ಕೆ ಮರಳುವುದಾಗಿ ಚೆಟ್ರಿ, ಟ್ವಿಟರ್ ನಲ್ಲಿ ಬರೆದುಕೊಂಡಿದ್ದಾರೆ. ಪ್ರತಿಯೊಬ್ಬರು ಎಲ್ಲಾ ಸುರಕ್ಷತಾ ಮುಂಜಾಗ್ರತಾ ಕ್ರಮಗಳನ್ನು ಮುಂದುವರೆಸುವಂತೆ ಅವರು ಮನವಿ ಮಾಡಿದ್ದಾರೆ.

ಇತ್ತೀಚೆಗೆ ಚೆಟ್ರಿ ಇಂಡಿಯನ್ ಸೂಪರ್ ಲೀಗ್ (ಐಎಸ್ಎಲ್) ನ ಏಳನೇ ಆವೃತ್ತಿಯಲ್ಲಿ ಬೆಂಗಳೂರು ಎಫ್‌ಸಿ ಪರ ಆಡಿದ್ದರು. ಲೀಗ್ ಹಂತದ ನಂತರ ಪಾಯಿಂಟ್ ಪಟ್ಟಿಯಲ್ಲಿ ತಂಡವು ಏಳನೇ ಸ್ಥಾನ ಗಳಿಸಿದ್ದರಿಂದ ಇದು ಎಫ್ ಸಿ ತಂಡಕ್ಕೆ ಉತ್ತಮ ಆವೃತ್ತಿಯಾಗಿರಲಿಲ್ಲ.

ಮುಂಬರುವ ಅಂತಾರಾಷ್ಟ್ರೀಯ ಫ್ರೆಂಡ್ಲಿ ಪಂದ್ಯಗಳ ಸಂಭಾವ್ಯ 35 ಸದಸ್ಯರ ಪಟ್ಟಿಯಲ್ಲಿ ಚೆಟ್ರಿ ಹೆಸರಿದ್ದು,  ಮಾರ್ಚ್ 25 ಮತ್ತು 29 ರಂದು ಕ್ರಮವಾಗಿ ಓಮನ್ ಮತ್ತು ಯುಎಇ ವಿರುದ್ಧ ಭಾರತ ಆಡಲಿದೆ.

Stay up to date on all the latest ಕ್ರೀಡೆ news
Poll
Kumbh-Covid-19

ಚುನಾವಣಾ ಸಮಾವೇಶ, ಕುಂಭಮೇಳ, ಧಾರ್ಮಿಕ ಸಭೆಗಳು ದೇಶದಲ್ಲಿ ಕೋವಿಡ್-19 ಪರಿಸ್ಥಿತಿಯನ್ನು ಹದಗೆಡಿಸುತ್ತಿವೆಯೇ?


Result
ಹೌದು, ಅದು ನಿಜ.
ಇಲ್ಲ, ಖಂಡಿತ ಅಲ್ಲ.
flipboard facebook twitter whatsapp