ಪಿಕೆಎಲ್ 2021: ಪ್ರೊ ಕಬಡ್ಡಿ ಸೀಸನ್ 8ಕ್ಕೆ ಜುಲೈನಲ್ಲಿ ಚಾಲನೆ ಸಾಧ್ಯತೆ, ಏಪ್ರಿಲ್ ನಲ್ಲಿ ಆಟಗಾರರ ಹರಾಜು

ಕೋವಿಡ್ ಸಾಂಕ್ರಾಮಿಕದಿಂದಾಗಿ ಮುಂದೂಡಿಕೆಯಾಗಿದ್ದ ಪ್ರೊ ಕಬ್ಬಡಿ ಸೀಸನ್ 8ಕ್ಕೆ ಮುಂಬರುವ ಜುಲೈನಲ್ಲಿ ಚಾಲನೆ ನೀಡುವ ಸಾಧ್ಯತೆ ಇದ್ದು, ಏಪ್ರಿಲ್ ನಲ್ಲಿ ಅಟಗಾರರ ಹರಾಜು ಪ್ರಕ್ರಿಯೆ ನಡೆಯಲಿದೆ ಎಂದು ತಿಳಿದುಬಂದಿದೆ.

Published: 12th March 2021 02:33 PM  |   Last Updated: 12th March 2021 02:33 PM   |  A+A-


Pro Kabaddi League

ಪ್ರೋ ಕಬಡ್ಡಿ ಲೀಗ್ (ಸಂಗ್ರಹ ಚಿತ್ರ)

Posted By : Srinivasamurthy VN
Source : Online Desk

ನವದೆಹಲಿ: ಕೋವಿಡ್ ಸಾಂಕ್ರಾಮಿಕದಿಂದಾಗಿ ಮುಂದೂಡಿಕೆಯಾಗಿದ್ದ ಪ್ರೊ ಕಬ್ಬಡಿ ಸೀಸನ್ 8ಕ್ಕೆ ಮುಂಬರುವ ಜುಲೈನಲ್ಲಿ ಚಾಲನೆ ನೀಡುವ ಸಾಧ್ಯತೆ ಇದ್ದು, ಏಪ್ರಿಲ್ ನಲ್ಲಿ ಅಟಗಾರರ ಹರಾಜು ಪ್ರಕ್ರಿಯೆ ನಡೆಯಲಿದೆ ಎಂದು ತಿಳಿದುಬಂದಿದೆ.

ಈ ಕುರಿತಂತೆ ಪಿಕೆಎಲ್ ನ ಆಯುಕ್ತ ಅನುಪಮ್ ಗೋಸ್ವಾಮಿ ಅವರು, 2021ರ ಆವೃತ್ತಿಯ ಪ್ರೊ ಕಬಡ್ಡಿ ಜುಲೈನಿಂದ ಪ್ರಾರಂಭವಾಗಿ  ಅಕ್ಟೋಬರ್‌ವರೆಗೂ ನಡೆಸಲು ಯೋಜನೆಯನ್ನು ರೂಪಿಸಲಾಗಿದೆ ಎಂದು ಹೇಳಿದ್ದಾರೆ. ಅಲ್ಲದೆ ಕಬಡ್ಡಿಗೆ ಅಗತ್ಯ ಇರುವ ಎಲ್ಲಾ ಸಿದ್ಧತೆಗಳನ್ನು ಮಾಡಿಕೊಳ್ಳುತ್ತಿದ್ದೇವೆ. ಕೋವಿಡ್-19 ಕಾರಣದಿಂದಾಗಿ ಈ ಹಿಂದೆ ಟೂರ್ನಿ ರದ್ದಾಗಿತ್ತು. ಬಹುತೇಕ ಕ್ರೀಡೆಗಳು ಬಯೋ ಸೆಕ್ಯೂರ್ ವಾತಾವರಣದಲ್ಲಿ ನಡೆಯುತ್ತಿದೆ. ಇದೇ ವ್ಯವಸ್ಥೆಯೊಂದಿಗೆ ಟೂರ್ನಿಯನ್ನು ಆಯೋಜಿಸಲಾಗುತ್ತದೆ ಎಂದು ಹೇಳಿದ್ದಾರೆ.

ಕಳೆದ ವರ್ಷ ಕೊರೊನಾ ಇರುವುದರಿಂದಾಗಿ ಟೂರ್ನಿಯನ್ನು ರದ್ದು ಪಡಿಸಲಾಗಿತ್ತು. ಆದರೆ ಇದೀಗ ಕ್ರಮೇಣ ಎಲ್ಲ ಸಹಜ ಸ್ಥಿತಿಗೆ ಮರಳುತ್ತಿದ್ದು, ಸೂಕ್ತ ಮುಂಜಾಗ್ರತಾ ಕ್ರಮಗಳೊಂದಿಗೆ ಕ್ರೀಡಾ ಟೂರ್ನಿಗಳನ್ನು ಆಯೋಜನೆ ಮಾಡಲಾಗುತ್ತಿದೆ. ಇದೀಗ ಈ ಪಟ್ಟಿಗೆ ಪ್ರೋ ಕಬಡ್ಡಿ ಕೂಡ ಸೇರ್ಪಡೆಯಾಗಿದೆ. 

ಇನ್ನು ಜುಲೈನಲ್ಲಿ ಟೂರ್ನಿ ಆಯೋಜನೆಗೆ ಸಿದ್ಧತೆಗಳು ಆರಂಭವಾಗಿದೆಯಾದರೂ ದಿನಾಂಕಗಳು ಅಂತಿಮವಾಗಿಲ್ಲ. ಪ್ರೊ ಕಬಡ್ಡಿ ಟೂರ್ನಿಯ ಪ್ರಸಾರ ಹಕ್ಕು ಹರಾಜು ಏಪ್ರಿಲ್‍ನಲ್ಲಿ ನಡೆಯಲಿದ್ದು, ಆಟಗಾರರ ಹರಾಜು ಪ್ರಕ್ರಿಯೆ ಕೂಡ ಅದೇ ತಿಂಗಳಲ್ಲೇ ನಡೆಸಲು ಉದ್ದೇಶಿಸಲಾಗಿದೆ ಎಂದು ತಿಳಿದುಬಂದಿದೆ.
 

Stay up to date on all the latest ಕ್ರೀಡೆ news
Poll
Kumbh-Covid-19

ಚುನಾವಣಾ ಸಮಾವೇಶ, ಕುಂಭಮೇಳ, ಧಾರ್ಮಿಕ ಸಭೆಗಳು ದೇಶದಲ್ಲಿ ಕೋವಿಡ್-19 ಪರಿಸ್ಥಿತಿಯನ್ನು ಹದಗೆಡಿಸುತ್ತಿವೆಯೇ?


Result
ಹೌದು, ಅದು ನಿಜ.
ಇಲ್ಲ, ಖಂಡಿತ ಅಲ್ಲ.
flipboard facebook twitter whatsapp