ಆಲ್ ಇಂಗ್ಲೆಂಡ್ ಓಪನ್: ಪಿ.ವಿ. ಸಿಂಧು ಎರಡನೇ ಸುತ್ತು ಪ್ರವೇಶ; ಸೈನಾಗೆ ಸೋಲಿನ ಕಹಿ

ಆಲ್ ಇಂಗ್ಲೆಂಡ್ ಓಪನ್ ಚಾಂಪಿಯನ್‌ಶಿಪ್‌ನ ಮೊದಲ ಸುತ್ತಿನಲ್ಲಿ ಮಲೇಷ್ಯಾದ ಸೋನಿಯಾ ಚಿಯಾ ವಿರುದ್ಧ ಗೆಲುವು ಸಾಧಿಸಿದ ಭಾರತದ ಭರವಸೆಯ ಬ್ಯಾಡ್ಮಿಂಟನ್ ತಾರೆ ಪಿ.ವಿ. ಸಿಂಧು ಎರಡನೇ ಸುತ್ತು ಪ್ರವೇಶಿಸಿದ್ದಾರೆ.

Published: 18th March 2021 12:46 PM  |   Last Updated: 18th March 2021 01:04 PM   |  A+A-


ಪಿವಿ ಸಿಂಧು

Posted By : Raghavendra Adiga
Source : IANS

ಬರ್ಮಿಂಗ್ ಹ್ಯಾಮ್: ಆಲ್ ಇಂಗ್ಲೆಂಡ್ ಓಪನ್ ಚಾಂಪಿಯನ್‌ಶಿಪ್‌ನ ಮೊದಲ ಸುತ್ತಿನಲ್ಲಿ ಮಲೇಷ್ಯಾದ ಸೋನಿಯಾ ಚಿಯಾ ವಿರುದ್ಧ ಗೆಲುವು ಸಾಧಿಸಿದ ಭಾರತದ ಭರವಸೆಯ ಬ್ಯಾಡ್ಮಿಂಟನ್ ತಾರೆ ಪಿ.ವಿ. ಸಿಂಧು ಎರಡನೇ ಸುತ್ತು ಪ್ರವೇಶಿಸಿದ್ದಾರೆ. ಆದರೆ ಇದೇ ವೇಳೆ ಸೈನಾ ನೆಹ್ವಾಲ್ ಮಿಯಾ ಬ್ಲಿಚ್‌ಫೆಲ್ಡ್ ವಿರುದ್ಧದ ಮೊದಲ ಸುತ್ತಿನ ಪಂದ್ಯದಲ್ಲಿ ಸೋಲುಂಡು ನಿರ್ಗಮಿಸಿದ್ದಾರೆ.

ಸಿಂಧು ಸೋನಿಯಾ ಚಿಯಾ ವಿರುದ್ಧ 21-11, 21-17 ಸೆಟ್ ನಿಂದ ಜಯ ಸಾಧಿಸಿದರು. ಸೈನಾ ನೆಹ್ವಾಲ್ ಮಿಯಾ ಬ್ಲಿಚ್‌ಫೆಲ್ಡ್. ಅವರಿಗೆ 21-8, 10-4ರಿಂದ ಮಣಿದರು.

ಇನ್ನೊಂದೆಡೆ ಪುರುಷರ ವಿಭಾಗದಲ್ಲಿ ಕಿಡಂಬಿ ಶ್ರೀಕಾಂತ್ ಮೊದಲ ಸುತ್ತಿನಲ್ಲಿ ಐರ್ಲೆಂಡ್‌ನ ನಾತ್ ನ್ಗುಯೆನ್ ವಿರುದ್ಧ 21-11, 15-21, 21-12ರಿಂದ ಸೋಲು ಕಂಡರು. ಪುರುಷರ ಸಿಂಗಲ್ಸ್‌ನಲ್ಲಿ ಎಚ್‌ಎಸ್ ಪ್ರಣೋಯ್ ಲಕ್ಷ್ಯ ಸೇನ್, ಸಮೀರ್ ವರ್ಮಾ ಮತ್ತು ವಿಶ್ವ ಚಾಂಪಿಯನ್‌ಶಿಪ್ ಕಂಚಿನ ಪದಕ ವಿಜೇತ ಬಿ. ಸಾಯಿ ಪ್ರಣೀತ್ ಎರಡನೇ ಸುತ್ತಿಗೆ ಮುನ್ನಡೆದಿದ್ದಾರೆ.

ಪ್ರಣೋಯ್ 21-10, 21-10ರಿಂದ ಮಲೇಷ್ಯಾದ ಡೇರೆನ್ ಲ್ಯೂ ಅವರನ್ನು ಮಣಿಸಿ ಮುನ್ನಡೆದಿದ್ದಾರೆ. ಅವರೀಗ ಎರಡನೇ ಸುತ್ತಿನಲ್ಲಿ ಜಪಾನಿನ ವಿಶ್ವ ನಂ.1 ಕೆಂಟನ್ ಮೊಮೊಟಾರನ್ನು ಎದುರಿಸಲಿದ್ದಾರೆ.

ಲಕ್ಷ್ಯ ಸೇನ್ 21-18, 21-12ರಲ್ಲಿ ಥೈಲ್ಯಾಂಡಿನ ಕಾಂಟಾಫೊನ್ ವಾಂಗ್ಚರೋಯೆನ್ ಅವರನ್ನು ಸೋಲಿಸಿದರೆ, ಸಾಯಿ ಪ್ರಣೀತ್ ಫ್ರಾನ್ಸ್ ನ  ತೋಮಾ ಪೊಪೊವ್ 21-18, 22-20ರಿಂದ ಪರಾಜಿತಗೊಳಿಸಿದರು. ಸಮೀರ್ ವರ್ಮಾ ಬ್ರೆಜಿಲ್ ನ ಯಾಗೋರ್ ಕೊಯೆಲ್ಹೋ ಅವರನ್ನು 21-11, 21-19ರಿಂದ ಮಣಿಸಿದರು.

ಪುರುಷರ ಡಬಲ್ಸ್‌ನಲ್ಲಿ ಸಾತ್ವಿಕ್ ಜಯರಾಜ್ ರಾಂಕಿರೆಡ್ಡಿ ಮತ್ತು ಚಿರಾಗ್ ಶೆಟ್ಟಿ ಕೇವಲ 19 ನಿಮಿಷಗಳನ್ನು ತೆಗೆದುಕೊಂಡು ಇಂಡೋ-ಇಂಗ್ಲಿಷ್ ಜೋಡಿ ನಿಖರ್ ಗರ್ಗ್ ಮತ್ತು ಅನಿರುದ್ಧ ಮಾಯೇಕರ್ ಅವರನ್ನು 21-7, 21-10 ಸೆಟ್‌ಗಳಿಂದ ಸೋಲಿಸಿದರು.

Stay up to date on all the latest ಕ್ರೀಡೆ news
Poll
Kumbh-Covid-19

ಚುನಾವಣಾ ಸಮಾವೇಶ, ಕುಂಭಮೇಳ, ಧಾರ್ಮಿಕ ಸಭೆಗಳು ದೇಶದಲ್ಲಿ ಕೋವಿಡ್-19 ಪರಿಸ್ಥಿತಿಯನ್ನು ಹದಗೆಡಿಸುತ್ತಿವೆಯೇ?


Result
ಹೌದು, ಅದು ನಿಜ.
ಇಲ್ಲ, ಖಂಡಿತ ಅಲ್ಲ.
flipboard facebook twitter whatsapp