ಕುಸ್ತಿ ಪಂದ್ಯದಲ್ಲಿ ಸೋಲು: ಗೀತಾ, ಬಬಿತಾ ಪೋಗಟ್ ಸೋದರ ಸಂಬಂಧಿ ರಿತಿಕಾ ಪೋಗಟ್ ಆತ್ಮಹತ್ಯೆ!

ದೇಶದ ಖ್ಯಾತ ಕುಸ್ತಿಪಟುಗಳಾದ ಗೀತಾ ಹಾಗೂ ಬಬಿತಾ ಪೋಗಟ್ ಅವರ ಸೋದರ ಸಂಬಂಧಿ ರಿತಿಕಾ ಪೋಗಟ್ ಆತ್ಮಹತ್ಯೆಗೆ ಶರಣಾಗಿದ್ದಾರೆ.

Published: 18th March 2021 09:21 AM  |   Last Updated: 18th March 2021 01:01 PM   |  A+A-


ರಿತಿಕಾ ಪೋಗಟ್

Posted By : Raghavendra Adiga
Source : PTI

ಚಂಡೀಘರ್: ದೇಶದ ಖ್ಯಾತ ಕುಸ್ತಿಪಟುಗಳಾದ ಗೀತಾ ಹಾಗೂ ಬಬಿತಾ ಪೋಗಟ್ ಅವರ ಸೋದರ ಸಂಬಂಧಿ ರಿತಿಕಾ ಪೋಗಟ್ ಆತ್ಮಹತ್ಯೆಗೆ ಶರಣಾಗಿದ್ದಾರೆ.

ರಿತಿಕಾ ಕುಸ್ತಿ ಪಂದ್ಯಾವಳಿಯ ಅಂತಿಮ ಪಂದ್ಯದಲ್ಲಿ ಸೋತ ನಂತರ ಸೋಲಿನ ಆಘಾತ ಸಹಿಸಲಾಗದೆ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಹೇಳಲಾಗಿದೆ.

ವರದಿಗಳ ಪ್ರಕಾರ ಮಾರ್ಚ್ 12 ಹಾಗೂ 14ರಂದು ರಾಜಸ್ಥಾನದಲ್ಲಿ ರಿತಿಕಾ ರಾಜ್ಯ ಮಟ್ಟದ ಕುಸ್ತಿ ಪಂದ್ಯಾವಳಿಯಲ್ಲಿ ಭಾಗವಹಿಸಿದ್ದರು.

ರಿತಿಕಾ ರಾಜ್ಯಮಟ್ಟದ ಉಪ ಜೂನಿಯರ್, ಕಿರಿಯ ಮಹಿಳೆ ಮತ್ತು ಪುರುಷರ ಕುಸ್ತಿ ಪಂದ್ಯಾವಳಿಯಲ್ಲಿ ಆಡುತ್ತಿದ್ದರು. ಅವರು 1 ಪಾಯಿಂಟ್‌ನ ಚಿಕ್ಕ ಅಂತರದಿಂದ ಫೈನಲ್‌ನಲ್ಲಿ ಸೋಲು ಕಂಡಿದ್ದರು.

ದ್ರೋಣಾಚಾರ್ಯ ಪ್ರಶಸ್ತಿ ಪುರಸ್ಕೃತ ಮಹಾವೀರ್ ಸಿಂಗ್ ಫೋಗಟ್ ಅವರ ಅಡಿಯಲ್ಲಿ ತರಬೇತಿ ಪಡೆದಿದ್ದ ರಿತಿಕಾ ಅವರ ಸೋದರಿ ರಿತು ಫೋಗಟ್ ಒನ್ ಚಾಂಪಿಯನ್‌ಶಿಪ್‌ನಲ್ಲಿ ಸ್ಪರ್ಧಿಸುತ್ತಿದ್ದರೆ, ಸೋದರಸಂಬಂಧಿ ವಿನೇಶ್ ಫೋಗಟ್ ಸಕ್ರಿಯ ಫ್ರೀಸ್ಟೈಲ್ ಕುಸ್ತಿಪಟು ಮತ್ತು ಟೋಕಿಯೊ ಒಲಿಂಪಿಕ್ಸ್ 2021 ರ ಭಾರತದ ಪ್ರಮುಖ ಕ್ರೀಡಾಪಟುವಾಗಿದ್ದಾರೆ.

ಇದಲ್ಲದೆ ಗೀತಾ ಮತ್ತು ಬಬಿತಾ ಫೋಗಾಟ್ ಅವರ ಸ್ಪೂರ್ತಿದಾಯಕ ಜೀವನವು ಭಾರತದ ಕುಸ್ತಿ ಅಭಿಮಾನಿಗಳಿಗೆ ಚಿರಪರಿಚಿತವಾಗಿದ್ದು ಇದೇ ಕಥಾನಕ ಒಳಗೊಂಡ ‘ದಂಗಲ್’ ಚಿತ್ರ ಬಿಡುಗಡೆಯಾಗಿ ಯಶಸ್ವಿ ಪ್ರದರ್ಶನ ಕಂಡಿತ್ತು.

Stay up to date on all the latest ಕ್ರೀಡೆ news
Poll
Kumbh-Covid-19

ಚುನಾವಣಾ ಸಮಾವೇಶ, ಕುಂಭಮೇಳ, ಧಾರ್ಮಿಕ ಸಭೆಗಳು ದೇಶದಲ್ಲಿ ಕೋವಿಡ್-19 ಪರಿಸ್ಥಿತಿಯನ್ನು ಹದಗೆಡಿಸುತ್ತಿವೆಯೇ?


Result
ಹೌದು, ಅದು ನಿಜ.
ಇಲ್ಲ, ಖಂಡಿತ ಅಲ್ಲ.
flipboard facebook twitter whatsapp